ಮೌಖೀಕ ಭಾಷೆಯಲ್ಲಿ ಶುದ್ದತೆ ಕಲ್ಪನೆಯೇ ಅಪ್ರಸ್ತುತ
Team Udayavani, Dec 26, 2021, 3:00 PM IST
ದಾವಣಗೆರೆ:ಮೌಖೀಕ ಭಾಷೆಯಲ್ಲಿ ಶುದ್ಧಾಶುದ್ಧತೆಯಕಲ್ಪನೆಯೇ ಅಶುದ್ಧ ಅಥವಾ ಅಪ್ರಸ್ತುತ ಎಂದುಖ್ಯಾತ ಸಾಹಿತಿ, ಸಾಂಸ್ಕೃತಿಕ ಚಿಂತಕ ಬರಗೂರುರಾಮಚಂದ್ರಪ್ಪ ಹೇಳಿದರು.ಇಲ್ಲಿಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರನಡೆದ ಸಮಾರಂಭದಲ್ಲಿ ಜಾನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪ ಅವರ “ನಿಜದಿಂ ಕುರಿತೋದದೆಯುಂ'(ಗ್ರಾಮೀಣ ಸಂಸ್ಕೃತಿ ಸಂದರ್ಭ ಕೋಶ) ಕೃತಿಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಶುದ್ಧತೆನಿರೀಕ್ಷಿಸುವಂತಿಲ್ಲ. ಮೌಖೀಕ ಭಾಷೆಯಲ್ಲಿ ಜನಬಳಕೆಯೇ ಪ್ರಮುಖ ಮಾನದಂಡವಾಗಿದೆ. ಭಾಷೆಯಾವಾಗಲೂ ಜನಬಳಕೆಯ ಪರೀಕ್ಷೆಯಲ್ಲಿಯೇಪಾಸಾಗಬೇಕು. ಆದ್ದರಿಂದ ಭಾಷಾ ಶುದ್ಧತೆ ಬಗ್ಗೆಮಾತನಾಡುವವರು ಲಿಖೀತ ಹಾಗೂ ಮೌಖೀÂಕಭಾಷೆಯ ವ್ಯತ್ಯಾಸ ಅರ್ಥ ಮಾಡಿಕೊಳ್ಳಬೇಕುಎಂದರು.
ಲಿಖೀತಭಾಷೆಹಾಗೂ ಮೌಖೀÂಕಭಾಷೆಯಲ್ಲಿಬಹಳ ವ್ಯತ್ಯಾಸವಿದೆ. ಲಿಖೀತ ಭಾಷೆಯಲ್ಲಿ ವ್ಯಾಕರಣ, ವಾಕ್ಯರಚನೆ ನಿರೀಕ್ಷಿಸುವುದು ಸರಿ. ಅದರಲ್ಲಿಯೂ ಪ್ರಬಂಧ,ಲೇಖನಗಳಲ್ಲಿ ಭಾಷಾ ಶುದ್ಧತೆ ಬೇಕೇ ಬೇಕು. ಆದರೆಲಿಖೀತ ಭಾಷೆಯ ಸೃಜನಶೀಲ ಬರಹಗಳಲ್ಲಿಯೂಭಾಷಾ ಶುದ್ಧತೆ ನಿರೀಕ್ಷಿಸುವುದು ಸರಿಯಲ್ಲ ಎಂದರು.ಸಮಾಜದಲ್ಲಿ ಸಂಪ್ರದಾಯ ಹಾಗೂ ಆಧುನಿಕತೆಒಟ್ಟೊಟ್ಟಿಗೆ ಹೋಗುತ್ತವೆ. ಆಧುನಿಕತೆ ನಿರಂತರಚಲನಶೀಲತೆ ಇರುವ ಕ್ರಿಯೆ. ಯಾವುದೇಸಂಸ್ಕೃತಿ ವರ್ತಮಾನ, ಭೂತಕಾಲವನ್ನು ಒಟ್ಟಿಗೆಹಿಡಿದಿಟ್ಟುಕೊಂಡರೆ ಅದು ವಾಸ್ತವಿಕತೆಗೆಹತ್ತಿರವಾಗುತ್ತದೆ. ಹೀಗಾಗಿ ಒಂದು ಸಂಸ್ಕೃತಿ ಅರ್ಥಮಾಡಿಕೊಳ್ಳಬೇಕಾದರೆ ಭೂತಕಾಲ, ವರ್ತಮಾನಹಾಗೂ ಭವಿಷ್ಯ ಕಾಲ ಈ ತ್ರಿಕಾಲಗಳ ಜ್ಞಾನ ಅವಶ್ಯ ಎಂದರು.
ನಮ್ಮದು ಬಹುತ್ವ ಸಂಸ್ಕೃತಿ: ಭಾರತ ಹಾಗೂಗ್ರಾಮ ಭಾರತ ಎರಡಲ್ಲಿಯೂ ಬಹುತ್ವವುಳ್ಳ ಸಂಸ್ಕೃತಿಇದೆ. ದೇಶದಲ್ಲಿ 24ಕೋಟಿ ಕುಟುಂಬಗಳಿದ್ದುಇವುಗಳಲ್ಲಿ 17.9 ಕೋಟಿ ಕುಟುಂಬಗಳು ಗ್ರಾಮೀಣಪ್ರದೇಶದಲ್ಲಿಯೇ ಇವೆ. ಹಾಗಾಗಿ ದೇಶದಲ್ಲಿ ಗ್ರಾಮಭಾರತವೇ ದೊಡ್ಡದಾಗಿದೆ. ಗ್ರಾಮಗಳು ಅರೆಪಟ್ಟಣಗಳಾಗಿ, ಪಟ್ಟಣಗಳು ಅರೆ ನಗರಗಳಾಗಿ ಹಾಗೂನಗರಗಳು ಮಿಶ್ರ ಸಂಸ್ಕೃತಿಯ ಕೇಂದ್ರಗಳಾಗಿರುವಇಂದಿನ ಸಂಕ್ರಮಣ ವ್ಯವಸ್ಥೆಯಲ್ಲಿ ಭಾಷೆಯಪದಗಳ ಅರ್ಥವೂ ಸಂದರ್ಭಕ್ಕನುಗುಣವಾಗಿಪಲ್ಲಟವಾಗುತ್ತದೆ.
ಗ್ರಾಮೀಣ ಸಂಸ್ಕೃತಿಯಲ್ಲಿಆಯಾ ಸಂದರ್ಭಗಳಲ್ಲಿ ಬಳಸಿದ ಭಾಷೆಯಅರ್ಥ ತಿಳಿದು ದಾಖಲಿಸಿದರೆ ಅದು ಮುಂದಿನಪೀಳಿಗೆಗೆ ಅನುಕೂಲವಾಗುತ್ತದೆ ಎಂದರು. “ನಿಜದಿಂಕುರಿತೋದದೆಯುಂ’ ಕೃತಿ ಕುರಿತು ಕನ್ನಡ ಪ್ರಾಧ್ಯಾಪಕಡಾ| ದಾದಾಪೀರ್ ನವಿಲೇಹಾಳ್ ಹಾಗೂ ಹಿರಿಯಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸಡಾ| ಎಂ.ಜಿ. ಈಶ್ವರಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷಡಾ| ಮಂಜುನಾಥ ಕುರ್ಕಿ ವೇದಿಕೆಯಲ್ಲಿ¨ರ ª ು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.