ದೇವದಾಸಿ-ಅಲೆಮಾರಿಗಳ ಸ್ಥಿತಿಗತಿ ಅಧ್ಯಯನ ಅಗತ್ಯ
Team Udayavani, Dec 26, 2021, 3:09 PM IST
ದಾವಣಗೆರೆ: ದೇವದಾಸಿ ತಾಯಂದಿರಕ್ಷೇಮಾಭಿವೃದ್ಧಿಗಾಗಿ 2018ರ ಕಾಯ್ದೆಸಮರ್ಪಕವಾಗಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆಒತ್ತಾಯಿಸುವ ಹಿನ್ನೆಲೆಯಲ್ಲಿ ಚೇತನಾ ಅಹಿಂಸಾಫೌಂಡೇಶನ್‌ನಿಂದ ರಾಜ್ಯಾದ್ಯಂತ ಪ್ರವಾಸಕೈಗೊಂಡುದೇವದಾಸಿ ತಾಯಂದಿರ ಸ್ಥಿತಿಗತಿ ಅಧ್ಯಯನಮಾಡಲಾಗುತ್ತಿದೆ ಎಂದು ಚಲನಚಿತ್ರ ನಟ ಚೇತನ್‌ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಈಗಾಗಲೇ 8ರಿಂದ10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ.ದೇವದಾಸಿ ತಾಯಂದಿರ ಸ್ಥಿತಿ ಅತ್ಯಂತಶೋಚನೀಯವಾಗಿದೆ. ಅನೇಕ ರೀತಿಯಲ್ಲಿಶೋಷಣೆಗೆ ಒಳಗಾಗಿದ್ದಾರೆ. ಅವರಿಗೆ ಮನೆಯಿಲ್ಲ,ಮಕ್ಕಳಿಗೆ ಉತ್ತಮ ಶಿಕ್ಷಣವಿಲ್ಲ. ಸರ್ಕಾರದ ಮಾಸಾಶನಕೂಡ ಸಮರ್ಪಕವಾಗಿ ದೊರೆತಿಲ್ಲ. ಕೋವಿಡ್‌ನಿಂದಾಗಿ ಮತ್ತಷ್ಟು ಆರ್ಥಿಕ ತೊಂದರೆಯಲ್ಲಿದ್ದಾರೆ.
ಮಾನವ ಹಕ್ಕುಗಳಿಂದಲೂ ವಂಚಿತರಾಗಿದ್ದಾರೆಎಂದು ದೂರಿದರು.ಇದೇ ರೀತಿ ತುಳಿತಕ್ಕೊಳಗಾದ ಅಲೆಮಾರಿಸಮುದಾಯದವರ ಜೀವನವೂ ಅತೀವಕಷ್ಟದಲ್ಲಿದೆ. ಗುಡಿಸಲು ಮುಕ್ತ ರಾಜ್ಯ ಮಾಡುವಸರ್ಕಾರದ ಯೋಜನೆ ಯಶಸ್ವಿಯಾಗಬೇಕಾದರೆಪ್ರತಿಯೊಂದು ಜಿಲ್ಲೆಯಲ್ಲಿರುವ ಅಲೆಮಾರಿಗಳಸ್ಥಿತಿಗತಿ ಅಧ್ಯಯನ ನಡೆಯಬೇಕು.
ಅಲೆಮಾರಿಗಳು ಹಾಗೂ ದೇವದಾಸಿ ತಾಯಂದಿರಸಮಸ್ಯೆ ಪರಿಹಾರವಾಗಬೇಕು. ಈ ನಿಟ್ಟಿನಲ್ಲಿನಮ್ಮ ಹೋರಾಟ ನಿರಂತರವಾಗಿರುತ್ತದೆಎಂದರು.ಸರ್ಕಾರದ ಮಾಸಾಶನ ಪ್ರತಿ ತಿಂಗಳುಸರಿಯಾಗಿ ಬರುತಿಲ್ಲ. ಇರಲು ಮನೆಯಿಲ್ಲ.ಆರ್ಥಿಕ ಸ್ಥಿತಿ ಹೇಳತೀರದು ಮತಕೇಳಲು ಮಾತ್ರಬರುವ ಜನಪ್ರತಿನಿಧಿಗಳು ನಮ್ಮ ಕಷ್ಟ ಕೇಳಲುಬರುವುದಿಲ್ಲ.ಇತ್ತೀಚೆಗೆ ಸುರಿದ ಮಳೆಗೆನಮ್ಮ ಮನೆಯೆಲ್ಲ ನೀರುಪಾಲಾಗಿದೆ ಎಂದುದೇವದಾಸಿಯರು ಇದೇ ಸಂದರ್ಭದಲ್ಲಿ ಅಳಲುತೋಡಿಕೊಂಡರು.ಮಹಾಂತೇಶ್, ವೀರೇಶ್, ಪವನ್‌ತೊರವಿ, ದಂಡೆಮ್ಮ, ಫಕೀರಮ್ಮ, ಚೌಡಮ್ಮಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.