ಗುರುವಿನ ಋಣ ತೀರಿಸಲಾಗದು: ಬಸವಪ್ರಭು ಶ್ರೀ
Team Udayavani, Dec 28, 2021, 5:23 PM IST
ದಾವಣಗೆರೆ: ಸಮಾಜದಲ್ಲಿ ಯಾರಿಂದಲೂಗುರುವಿನ ಋಣ ತೀರಿಸುವುದು ಸಾಧ್ಯವಿಲ್ಲಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ದಾವಣಗೆರೆ ಜಿಲ್ಲಾಮೂರು ಮತ್ತು ನಾಲ್ಕು ಚಕ್ರ ಗೂಡ್ಸ್ ವಾಹನಚಾಲಕರ ಮತ್ತು ಮಾಲೀಕರ ಸಂಘದಿಂದಶಿಕ್ಷಕರಿಗೆ ಗುರುವಂದನೆ, ಚಿತ್ರನಟರಾದ ಪುನೀತ್‌ರಾಜಕುಮಾರ್, ಶಿವರಾಮ್ ನುಡಿನಮನಸಮಾರಂಭದಸಾನ್ನಿಧ್ಯವಹಿಸಿಶ್ರೀಗಳುಆಶೀರ್ವಚನನೀಡಿದರು. ಪ್ರತಿಯೊಬ್ಬರ ಜೀವನದಲ್ಲಿ ಗುರುವಿನಪಾತ್ರ ತುಂಬಾ ಮಹತ್ವದ್ದಾಗಿದೆ.
ಗುರು ಇಲ್ಲದೆಯಾವುದೇ ಗುರಿ ಸಾಧನೆ ಅಸಾಧ್ಯ. ಬದುಕಿನಯಶಸ್ಸಿಗೆ ಮುಂದೆ ಗುರಿ, ಹಿಂದೆ ಗುರುಇರಬೇಕಾದ್ದು ಬಹು ಮುಖ್ಯ. ಅಂತಹ ಗುರುವಿಗೆಭಾರತೀಯ ಸಮಾಜದಲ್ಲಿ ದೈವಿ ಸ್ಥಾನ ನೀಡಲಾಗಿದೆ.ಹಾಗಾಗಿಯೇ ಬಸವಾದಿ ಶರಣರು ಅರಿವೇ ಗುರುಎಂಬುದಾಗಿ ಪ್ರತಿಪಾದಿಸಿದರು. ಅಂತಹ ಗುರುವಿನಋಣ ತೀರಿಸುವುದು ಯಾರಿಂದಲೂ ಸಾಧ್ಯವಿಲ್ಲ.ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್‌ಮಾತನಾಡಿ, ಹಿಂದೆಲ್ಲಾ ಶಾಲೆಗಳಲ್ಲಿ ಶಿಕ್ಷೆಯಮೂಲಕ ಶಿಕ್ಷಣ ಕಲಿಸಲಾಗುತ್ತಿತ್ತು. ನಾನೂ ಸಹಸರ್ಕಾರಿ ಶಾಲೆಯಲ್ಲೇ ಓದಿದ್ದು, ಶಿಕ್ಷಕರ ಬೆತ್ತದೇಟುತಿಂದೇ ಜೀವನದಲ್ಲಿ ಮುಂದೆ ಬಂದಿದ್ದೇವೆ.
ಆದರೆ ಈಗ ಶಿಕ್ಷಕರು ಮಕ್ಕಳಿಗೆ ಬೈದು ಬುದ್ಧಿ ಹೇಳುವುದೂಕಷ್ಟವಾಗಿದೆ. ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸಬೇಕೆಂಬಸರ್ಕಾರದ ಸೂಚನೆಯಿಂದಾಗಿ ಮಕ್ಕಳಲ್ಲಿ ಶಿಕ್ಷೆಯಭಯವೇ ಇಲ್ಲವಾಗಿದೆ. ಹಾಗಾಗಿ ಮಕ್ಕಳು ದಾರಿತಪ್ಪುವ ಆತಂಕ ಎದುರಾಗಿದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದಶಿಕ್ಷಣ ಸಿಗುತ್ತಿದೆ. ಆದರೂ ಪೋಷಕರು ಪ್ರತಿಷ್ಠೆಗಾಗಿಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಮುಂದಿನದಿನಗಳಲ್ಲಿ ನಾನು ಇನ್ನೂ ಹೆಚ್ಚಿನ ರಾಜಕೀಯಅಧಿಕಾರ ಪಡೆದಲ್ಲಿ, ಸರ್ಕಾರಿ ಶಾಲೆಗಳನ್ನುಪ್ರತಿಷ್ಠಿತ ಖಾಸಗಿ ಶಾಲೆಗಳಿಗಿಂತಲೂ ಉನ್ನತವಾಗಿಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತೇನೆ.
ಅಲ್ಲದೆಶಿಕ್ಷಕರಿಗೆ ಆರ್ಥಿಕ ಸಹಾಯ ಸೇರಿದಂತೆ ಎಲ್ಲಾರೀತಿಯ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಳನಿಸ್ವಾಮಿಮಾತನಾಡಿ, ಎಲ್ಲಾ ಮಕ್ಕಳಿಗೂ ಬಡವ, ಬಲ್ಲಿದಎಂಬ ಭೇದವಿಲ್ಲದೆ ವಿದ್ಯೆ ಕಲಿಸುವ ಶಿಕ್ಷಕರಸೇವೆಗೆ ಬೆಲೆ ಕಟ್ಟಲಾಗದು. ಅಂತಹ ಶಿಕ್ಷಕರಿಗೆಕಳೆದ 4 ವರ್ಷಗಳಿಂದ ಗುರುವಂದನೆ ಕಾರ್ಯಕ್ರಮನಡೆಸಿಕೊಂಡು ಬರುತ್ತಿದ್ದು, ಮುಂಬರುವದಿನಗಳಲ್ಲೂ ಈ ಕಾರ್ಯವನ್ನು ನಿರಂತರವಾಗಿಮುಂದುವರೆಸಿಕೊಂಡು ಹೋಗಲಾಗುವುದುಎಂದರು.
ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿಎನ್. ವಾಸುದೇವ ರಾಯ್ಕರ್, ಲಾರಿ ಮಾಲೀಕರಸಂಘದ ಅಧ್ಯಕ್ಷ ಸೈಯದ್ ಸೈಪುಲ್ಲಾ, ಲಯನ್ಸ್ ಕ್ಲಬ್‌ಅಧ್ಯಕ್ಷ ಎಸ್. ಓಂಕಾರಪ್ಪ, ಬೆಳ್ಳೂಡಿ ಶಿವಕುಮಾರ,ಮಹಾಂತೇಶ ಒಣರೊಟ್ಟಿ, ದಿಲೀಪ್ ಜೈನ್,ಅಜಯ್, ಸುವರ್ಣ ಕರ್ನಾಟಕ ವೇದಿಕೆಯಆರ್. ಸಂತೋಷಕುಮಾರ್ ಇತರರು ಇದ್ದರು.125 ಜನ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಚಿತ್ರನಟರಾದಪುನೀತ್ ರಾಜಕುಮಾರ್, ಶಿವರಾಮ್‌ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.