ಅಖಂಡ ಕರವೇಯಿಂದ ನಾಳೆ ರಾಜ್ಯೋತ್ಸವ
Team Udayavani, Dec 28, 2021, 5:25 PM IST
ದಾವಣಗೆರೆ: ಅಖಂಡ ಕರ್ನಾಟಕ ರಕ Òಣಾ ವೇದಿಕೆ ವತಿಯಿಂದ66ನೇ ಕನ್ನಡ ರಾಜ್ಯೋತ್ಸವ, ಪುನೀತ್ ನಮನ, ನೇತ್ರ ಹಾಗೂದೇಹದಾನ ಅಭಿಯಾನ ಡಿ. 29ರಂದು ದಾವಣಗೆರೆಯಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷಎಸ್.ಜಿ. ಸೋಮಶೇಖರ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್‌ರವರುನೇತ್ರದಾನ ಮಾಡಿರುವ ಪ್ರೇರಣೆಯಿಂದ ಅನೇಕರು ನೇತ್ರದಾನಕ್ಕೆಮುಂದಾಗಿದ್ದಾರೆ. ಅವರಿಗೆ ಸಹಾಯವಾಗಿ ವಾಸನ್ ಐಕೇರ್ ಸೆಂಟರ್ ಸಹಯೋಗದಲ್ಲಿ ನೇತ್ರದಾನ ಅಭಿಯಾನನಡೆಸಲಾಗುವುದು. 500ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆಮುಂದಾಗಿದ್ದಾರೆ.
ಶಾಲಾ-ಕಾಲೇಜಿನಲ್ಲೂ ನೇತ್ರದಾನಕ್ಕೆ ವೇದಿಕೆಪ್ರೇರಣೆ ನೀಡುವ ಕೆಲಸ ಮಾಡಲಿದೆ ಎಂದರು.ಬುಧವಾರ ಸಂಜೆ 6ಕ್ಕೆ ನಡೆಯುವ 66ನೇ ಕನ್ನಡರಾಜ್ಯೋತ್ಸವ, ಪುನೀತ್ ನಮನ, ನೇತ್ರ ಹಾಗೂ ದೇಹದಾನಅಭಿಯಾನ ಕಾರ್ಯಕ್ರಮವನ್ನು ಸಂಸದ ಡಾ| ಜಿ.ಎಂ. ಸಿದ್ದೇಶ್ವರಉದ್ಘಾಟಿಸುವರು. ಶಾಸಕ ಎಸ್.ಎ. ರವೀಂದ್ರನಾಥ್ ನೇತ್ರದಾನಅಭಿಯಾನಕ್ಕೆ ಚಾಲನೆ ನೀಡುವರು. ವೇದಿಕೆ ರಾಜ್ಯಾಧ್ಯಕ್ಷ, ಮಾಜಿಮೇಯರ್ ಬಿ.ಜಿ. ಅಜಯ್‌ಕುಮಾರ್ ಅಧ್ಯಕ್ಷತೆ ವಹಿಸುವರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ನಗರಪಾಲಿಕೆ ಸದಸ್ಯಜೆ.ಎನ್. ಶ್ರೀನಿವಾಸ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್‌ಜಾಧವ್, ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ ಇತರರುಭಾಗವಹಿಸುವರು. ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿಮುರುಘಾ ಶರಣರು ಸಾನ್ನಿಧ್ಯ, ದಾವಣಗೆರೆ ವಿರಕ್ತ ಮಠದಶ್ರೀ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸುವರು.
ಮುಸ್ಲಿಂಧರ್ಮಗುರುಗಳಾದ ಹಜರತ್ ಮಹಮ್ಮದ್ ಹನೀಫ್ ರಜಾ,ಕ್ರೈಸ್ತ ಸಮುದಾಯದ ಆಂತೋಣಿ ನಜರೇಟ್ ಇತರರುಪಾಲ್ಗೊಳ್ಳುವರು. ಅಂತಾರಾಷ್ಟ್ರೀಯ ಯೋಗಪಟು, ಹಿರಿಯಪತ್ರಕರ್ತ ಡಾ| ಕೆ. ಜೈಮುನಿ ಮತ್ತು ತಂಡದಿಂದ ವಿಶೇಷ ಯೋಗಪ್ರದರ್ಶನ ನಡೆಯಲಿದೆ. ನೇತ್ರ ಮತ್ತು ದೇಹದಾನ ಆಸಕ್ತರುಮೊ: 99809-05841 ಸಂಪರ್ಕಿಸುವಂತೆ ಮನವಿ ಮಾಡಿದರು.ವೇದಿಕೆಯ ಡಾ| ಕೆ. ಜೈಮುನಿ, ಮೋಹನ್, ಎಲ್.ದೇವರಾಜ್, ಪ್ರದೀಪ್ ಕುಮಾರ್, ತಾಹೀರ್, ಅಜ್ಮತ್ ವುಲ್ಲಾ,ಸಿಖಂದರ್ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.