ಆರೋಗ್ಯ ಕಾರ್ಡ್ ನೋಂದಣಿ ಚುರುಕು
Team Udayavani, Jan 1, 2022, 4:49 PM IST
ದಾವಣಗೆರೆ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲುಅನುಕೂಲ ಕಲ್ಪಿಸುವ ಆಯುಷ್ಮಾನ್ ಭಾರತ್- ಆರೋಗ್ಯಕರ್ನಾಟಕಕಾರ್ಡ್ (ಎಬಿ-ಎಆರ್‌ಕೆ ) ನೋಂದಣಿ ಪ್ರಕ್ರಿಯೆಗೆ ಜಿಲ್ಲಾಡಳಿತಚುರುಕು ಮೂಡಿಸಿದ್ದು ಕಾರ್ಡ್ ನೋಂದಣಿ ಮಾಡಿಸಿಕೊಂಡವರಸಂಖ್ಯೆ ನಾಲ್ಕು ಲಕ್ಷ ಸಮೀಪಿಸುತ್ತಿದೆ.ಎಬಿ-ಎಆರ್‌ಕೆ ಕಾರ್ಡ್ ನೋಂದಣಿ ಜಿಲ್ಲೆಯಲ್ಲಿ ಬಹಳನಿಧಾನಗತಿಯಲ್ಲಿ ಸಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ನೋಂದಣಿಯಲ್ಲಿ ಗಣನೀಯ ಪ್ರಗತಿ ಸಾಧಿಸಲುಅಧಿಕಾರಿಗಳಿಗೆ ಸೂಚಿಸಿತು. ಜಿಲ್ಲಾಧಿಕಾರಿಯವರು ಪ್ರತಿ ತಿಂಗಳುಕನಿಷ್ಠ 80ಸಾವಿರ ಎಬಿ-ಎಆರ್‌ಕೆ ಕಾರ್ಡ್ ನೋಂದಣಿ ಮಾಡುವಗುರಿಯೊಂದಿಗೆಕೆಲಸಮಾಡಲು ಸೂಚಿಸಿದಪರಿಣಾಮಈಗ ಅಲ್ಲಲ್ಲಿಶಿಬಿರಗಳ ಮೂಲಕ ಕಾರ್ಡ್ ನೋಂದಣಿ ಮಾಡಲಾಗುತ್ತಿದೆ.ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಲು ಈ ಮೊದಲುಎಬಿ-ಎಆರ್‌ಕೆ ಕಾರ್ಡ್‌ನೊಂದಿಗೆ ಬಿಪಿಎಲ್ ಕಾರ್ಡ್, ಆಧಾರ್‌ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಕೇಳಲಾಗುತ್ತಿತ್ತು.ತುರ್ತು ಸಂದರ್ಭದಲ್ಲಿ ಈ ಎಲ್ಲ ದಾಖಲೆಗಳನ್ನು ಕೊಡಲಾಗದುಎಂಬ ಕಾರಣಕ್ಕಾಗಿಯೇ ಅನೇಕರು ಎಬಿ-ಎಆರ್‌ಕೆ ಕಾರ್ಡ್‌ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.
ಈಗ ಸರ್ಕಾರ ಉಚಿತಚಿಕಿತ್ಸೆ ನೀಡಲು ಎಬಿ-ಎಆರ್‌ಕೆ ಕಾರ್ಡ್ ಒಂದನ್ನೇ ದಾಖಲೆಯನ್ನಾಗಿಪರಿಗಣಿಸಬೇಕು ಎಂಬ ಹೊಸ ನಿಯಮ ಮಾಡಿದ್ದರಿಂದ ಜನರುಸಹ ಎಬಿ-ಎಆರ್‌ಕೆ ಕಾರ್ಡ್ ನೋಂದಣಿಗೆ ಆಸಕ್ತಿ ತೋರುತ್ತಿದ್ದಾರೆ.ಕ್ಷಿಪ್ರ ಪ್ರಗತಿ ಪ್ರಯತ್ನ: ಆರೋಗ್ಯ ಇಲಾಖೆಯ ಅಂಕಿ-ಅಂಶಗಳನ್ನುಗಮನಿಸಿ ಹೇಳುವುದಾದರೆ ಜಿಲ್ಲೆಯಲ್ಲಿ ಯೋಜನೆ (2018ರಿಂದ )ಆರಂಭವಾದಾಗಿನಿಂದಇಲ್ಲಿಯವರೆಗೆ390809ಜನರುಎಬಿ-ಎಆರ್‌ಕೆ ಕಾರ್ಡ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿರುವ2020ರ ಜನಸಂಖ್ಯೆ ಆಧರಿಸಿದರೆ ಕಾರ್ಡ್ ನೋಂದಣಿಯಲ್ಲಿಶೇ.20ರಷ್ಟು ಪ್ರಗತಿಯಾಗಿದ್ದು ಬಿಪಿಎಲ್ ಕುಟುಂಬದವರನ್ನಷ್ಟೇಪರಿಗಣಿಸಿದರೆ ಈ ಪ್ರಗತಿ ಅಂದಾಜು ಶೇ. 40ಆಗಲಿದೆ.
ಆರೋಗ್ಯಇಲಾಖೆ ಈಗ ಅಲ್ಲಲ್ಲಿ ಶಿಬಿರಗಳನ್ನು ನಡೆಸುವ ಮೂಲಕಎಬಿ-ಎಆರ್‌ಕೆ ಕಾರ್ಡ್ ನೋಂದಣಿಯಲ್ಲಿ ಕ್ಷಿಪ್ರ ಪ್ರಗತಿಸಾಧಿಸಲುಮುಂದಾಗಿದೆ. ಒಟ್ಟಾರೆ ಆಮೆಗತಿಯಲ್ಲಿ ಸಾಗಿದ್ದ ಎಬಿ-ಎಆರ್‌ಕೆ ಕಾರ್ಡ್ ನೋಂದಣಿ ಜಿಲ್ಲೆಯಲ್ಲಿ ವೇಗ ಪಡೆದುಕೊಂಡಿದ್ದುನೋಂದಣಿ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.