ವಿದ್ಯಾರ್ಥಿಗಳಿಗೆ ಕನ್ನಡ ಏಕಾಂಕ ನಾಟಕ ಸ್ಪರ್ಧೆ
Team Udayavani, Jan 2, 2022, 5:03 PM IST
ದಾವಣಗೆರೆ: ದಾವಣಗೆರೆಯ ವೃತ್ತಿ ರಂಗಭೂಮಿರಂಗಾಯಣ ಸ್ವಾತಂತ್ರೋÂತ್ಸವದ ಅಮೃತೋತ್ಸವ ನಿಮಿತ್ತಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ ಏಕಾಂಕ ನಾಟಕಸ್ಪರ್ಧೆಯನ್ನು ಜ. 16ರಿಂದ 25ರವರೆಗೆ ನಗರದ ಪದ್ಮಶ್ರೀಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಡೆಸಲಾಗುವುದುಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕಯಶವಂತ ಸರದೇಶಪಾಂಡೆ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆನೀಡಿದ ಅವರು, ವೃತ್ತಿ ರಂಗಭೂಮಿ ರಂಗಾಯಣ ಶಾಖೆಮತ್ತು ಕೆನರಾ ಬ್ಯಾಂಕ್ ವಿನೋಬ ನಗರ ಶಾಖೆಯಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ರಂಗಾಸಕ್ತ ಬೆಳೆಸಲುನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ಉತ್ತಮವಾದ ಮೂರುನಾಟಕಗಳನ್ನು ಆಯ್ದು ಪ್ರಥಮ ಬಹುಮಾನವಾಗಿ 10ಸಾವಿರ ರೂ, ದ್ವಿತೀಯ ಬಹುಮಾನವಾಗಿ 7500ರೂ.ಮತ್ತು ತೃತೀಯ ಬಹುಮಾನವಾಗಿ 5ಸಾವಿರ ರೂ. ಹಾಗೂಪ್ರತಿ ವಿದ್ಯಾರ್ಥಿಗಳಿಗೂ ಪ್ರಶಸ್ತಿಪತ್ರ ಹಾಗೂ ವೈಯಕ್ತಿಕಬಹುಮಾನವಾಗಿ ಒಂದು ಸಾವಿರ ರೂ. ನೀಡಲಾಗುವುದುಎಂದರು.
ಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ ಎಂಬ ಎರಡುವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಶಾಲಾ-ಕಾಲೇಜುಪಠ್ಯಾಧಾರಿತಏಕಾಂಕಗಳನ್ನುಅಥವಾದೇಶಭಕ್ತಿಯಕಥಾವಸ್ತುಹೊಂದಿದ ಏಕಾಂಕಗಳಿಗೆ ಆದ್ಯತೆ ನೀಡಲಾಗುವುದು. ಪ್ರತಿತಂಡಕ್ಕೆ 1500 ರೂ. ಪ್ರವೇಶ ಶುಲ್ಕವಿದೆ. ಭಾಗವಹಿಸುವತಂಡಗಳಿಗೆ ರಂಗವೇದಿಕೆ, ಧ್ವನಿ-ಬೆಳಕಿನ ಕನಿಷ್ಠ ವ್ಯವಸ್ಥೆಮಾಡಲಾಗುವುದು. ಏಕಾಂಕ ನಾಟಕಗಳಿಗೆ ಬೇಕಾಗುವಪ್ರಸಾದನ, ವೇಷಭೂಷಣ, ರಂಗಸಜ್ಜಿಕೆ, ಸಂಗೀತದವ್ಯವಸ್ಥೆಯನ್ನು ಆಯಾ ಶಾಲಾ-ಕಾಲೇಜು ತಂಡಗಳುಮಾಡಿಕೊಳ್ಳಬೇಕು.
ಸ್ಥಳೀಯ ಇಬ್ಬರು ಮತ್ತು ಓರ್ವಆಹ್ವಾನಿತರುತೀಪುìಗಾರರಾಗಿಭಾಗವಹಿಸುವರು.ಆಸಕ್ತರುಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದುಅವರು ಮನವಿ ಮಾಡಿದರು.ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿರವಿಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.