ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ
Team Udayavani, Jan 8, 2022, 2:43 PM IST
ದಾವಣಗೆರೆ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿಯೋಜನೆಯ ಕಾಮಗಾರಿ ಪೂರ್ಣಗೊಳಿಸಲುಅನಗತ್ಯ ವಿಳಂಬ ಮಾಡದೇ ನಿಗದಿತ ಸಮಯದಲ್ಲಿಕಾರ್ಯಗತಗೊಳಿಸಬೇಕು ಎಂದು ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರನಡೆದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿಯೋಜನೆಯಡಿ ಅನುಮೋದಿಸಲ್ಪಟ್ಟ ಕಾಮಗಾರಿಗಳಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ನನ್ನ ಅನುದಾನದಲ್ಲಿಅನೇಕ ಕಾಮಗಾರಿಗಳಿಗೆ ಅನುಮೋದನೆ ನೀಡಿ,ಹಣ ಬಿಡುಗಡೆ ಸಹ ಮಾಡಲಾಗಿದೆ.
ಆದರೂ,ಕಾಮಗಾರಿಗಳು ಕಾರ್ಯಗತವಾಗಿಲ್ಲ. ನೀವು ಕೆಲಸಮಾಡುವುದಾದರೆ ಮಾಡಿ, ಆಗುವುದಿಲ್ಲ ಎಂದರೆಬೇರೆ ಕಡೆ ಹೋಗಿ ಎಂದು ಸಂಬಂಧಿತ ಅಧಿಕಾರಿಗಳಿಗೆಎಚ್ಚರಿಕೆ ನೀಡಿದರು.ಶಾಲಾ ಕೊಠಡಿ, ಬಸ್ ಶೆಲ್ಟರ್, ಕುಡಿಯುವನೀರಿನ ಪೈಪ್ ಹಾಕಲು 2-3 ವರ್ಷ ಬೇಕಾಗುತ್ತದೆಎಂದಾದರೆ ಕೆಲಸಗಳು ಯಾವಾಗ ಮುಗಿಯಬೇಕು.ಈಗ ಮಂಜೂರಾಗಿರುವ ಕೆಲಸಗಳು ಮುಗಿದರೆಮುಂದಿನ ಅನುದಾನ ಬರುತ್ತದೆ.
ಬೇರೆ ಸಂಸದರುಅಡ್ವಾನ್ಸ್ ಆಗಿ ಕಾಮಗಾರಿಗಳಿಗೆ ಅನುಮೋದನೆನೀಡಿದ್ದಾರೆ. ನಾನು ಆ ರೀತಿ ಮಾಡುವುದೇ ಇಲ್ಲ.2024ರ ಲೋಕಸಭಾ ಚುನಾವಣೆಯಲ್ಲಿ ನಾನೇನಿಲ್ಲದೇ ಹೋದರೆ, ನಾನೇ ಇರದೇ ಇದ್ದಾಗ ಯಾವಕಡೆಯಿಂದ ಅನುದಾನ ನೀಡಲಿಕ್ಕೆ ಆಗುತ್ತದೆ.ಹಾಗಾಗಿ ನಾನು ಯಾವುದೇ ವಾಗ್ಧಾನ ನೀಡುವುದಿಲ್ಲ.
ಇರುವ ಅನುದಾನದಲ್ಲೇ ಕಾಮಗಾರಿ ನೀಡಿದ್ದೇನೆ.ಅಧಿಕಾರಿಗಳು 2,3, ಒಂದೂವರೆ ತಿಂಗಳಲ್ಲಿ ಕೆಲಸಪೂರ್ಣಗೊಳಿಸಲಾಗುವುದು ಎಂದು ತಿಳಿಸಿರುವಂತೆಮುಂದಿನ ಸಭೆ ವೇಳೆಗೆ ಕಾಮಗಾರಿಗಳು ಕಾರ್ಯಗತಆಗಿರಬೇಕು ಎಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.