ಕೊರೊನಾ ಜಾಗೃತಿ ಮೂಡದಿದ್ರೆ ಭವಿಷ್ಯ ಕಠಿಣ
Team Udayavani, Jan 12, 2022, 4:42 PM IST
ದಾವಣಗೆರೆ: ಮಹಾಮಾರಿ ಕೊರೊನಾತೀವ್ರತರದಲ್ಲಿ ಏರಿಕೆಯಾಗುತ್ತಿರುವನಡುವೆ ಪ್ರತಿಯೊಬ್ಬರು ಜಾಗೃತರಾಗದಿದ್ದರೆಭವಿಷ್ಯದ ದಿನಗಳು ಇನ್ನೂ ಕಠಿಣವಾಗಲಿವೆಎಂದು ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿಎಂ. ಗುರುಸಿದ್ದಸ್ವಾಮಿ ಎಚ್ಚರಿಸಿದರು.
ತಾಲೂಕಿನ ಆವರಗೆರೆ ಗ್ರಾಮದಲ್ಲಿ ವಿಜ್ಞಾನಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಮಂಡಳಿ, ಬೆಳಗಾವಿಯ ವಿಕಾಸನ ಕೇಂದ್ರದಸಂಯುಕ್ತಾಶ್ರಯದಲ್ಲಿ ಮಂಗಳವಾರಏರ್ಪಡಿಸಿದ್ದ ಕೋವಿಡ್-19 ಜಾಗೃತಿಅಭಿಯಾನ ಉದ್ಘಾಟಿಸಿ ಮಾತನಾಡಿದಅವರು, ನಾನು ನಿನ್ನನ್ನು ರಕ್ಷಿಸುತ್ತೇನೆ. ನೀನುನನ್ನನ್ನು ರಕ್ಷಿಸುತ್ತೇನೆ ಎಂದು ಪರಸ್ಪರರು ದೃಢನಿರ್ಧಾರ ಕೈಗೊಂಡಾಗ ಮಾತ್ರ ಕೋವಿಡ್‌ನಿಯಂತ್ರಿಸಲು ಸಾಧ್ಯ ಎಂದರು.
ಕೊರೊನಾದ ಸಾಮಾನ್ಯ ಲಕ್ಷಣಗಳಾದಜ್ವರ, ಒಣಕೆಮ್ಮು, ಉಸಿರಾಟದ ತೊಂದರೆ,ಆಯಾಸ, ದಣಿವು ಇರುವ ವ್ಯಕ್ತಿಗಳುಮಾತನಾಡಿದಾಗ, ಕೆಮ್ಮಿದಾಗ, ಸೀನಿದಾಗ,ತೇವದ ಮೂಲಕ ಸೋಂಕು ಇತತರಿಗೆಹರಡುತ್ತದೆ. ಕೊರೊನಾದಿಂದ ದೇಶದಲ್ಲಿಕಳೆದ 2 ವರ್ಷಗಳಲ್ಲಿ ಲಕ್ಷಾಂತರಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ದೇಶದ ಅರ್ಥಿಕಅಭಿವೃದ್ಧಿಗೆ ಹಿನ್ನಡೆಯಾಗಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದಮೇಲೆ ಪರಿಣಾಮ ಬೀರಿದೆ.
ಇಷ್ಟಾದರೂನಾವು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲಎಂದು ವಿಷಾದಿಸಿದರು.ಸೋಂಕಿನ ವಿರುದ್ಧ ರಕ್ಷಣೆಗಾಗಿಸಂಪೂರ್ಣ ಸುರಕ್ಷಿತ ಹಾಗೂಪರಿಣಾಮಕಾರಿಯಾಗಿರುವ ಲಸಿಕೆ ಈಗಸ್ಥಳೀಯವಾಗಿಯೇ ಲಭ್ಯವಿದೆ. ಲಸಿಕೆಪಡೆಯುವುದರಿಂದ ನೀವು, ಕುಟುಂಬ,ಊರು, ದೇಶ ಸುರಕ್ಷಿತವಾಗಿರುತ್ತದೆ.ಕೋವಿಡ್-19 ಸೋಂಕು ಹೆಚ್ಚು ಹರಡದಂತೆತಡೆಗಟ್ಟುವ ತಕ್ಷಣದ ಕ್ರಮವೆಂದರೆಮನೆಯಿಂದ ಹೊರಗೆ ಹೋಗುವಾಗಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದುಸಲಹೆ ನೀಡಿದರು.
ಆವರಗೆರೆಯ ಶ್ರೀ ಮಂಜುನಾಥಪ್ರೌಢಶಾಲೆಯ ಮುಖ್ಯ ಶಿಕ್ಷಕಎಚ್.ಎಂ. ಪ್ರಕಾಶ್, ಈಗ ರೂಪಾಂತರಿ ತಳಿಒಮಿಕ್ರಾನ್ ಕಾಡಲಾರಂಭಿಸಿದೆ. ಕೊರೊನಾದಿನದಿಂದ ದಿನಕ್ಕೆ ಉಲ½ಣಗೊಳ್ಳುತ್ತಿದೆ.ಸೋಂಕಿನ ಲಕ್ಷಣಗಳನ್ನು ಗಮನಿಸಿವಿಳಂಬಮಾಡದೇ, ವೈದ್ಯಕೀಯ ತಪಾಸಣೆ ಮತ್ತುನೆರವು ಪಡೆಯಬೇಕು. ಸೋಂಕಿನ ಲಕ್ಷಣಗಳುಕಂಡು ಬಂದಲ್ಲಿ ತಾವಾಗಿಯೇ ಇತರರಸಂಪರ್ಕದಿಂದ ಪ್ರತ್ಯೇಕವಾಗಿರಬೇಕುಎಂದು ಮನವಿ ಮಾಡಿದರು.ನಂತರ ಶ್ರೀ ಮಂಜುನಾಥ ಪ್ರೌಢಶಾಲೆ,ಶ್ರೀಬನಶಂಕರಿ ಹಿರಿಯ ಪ್ರಾಥಮಿಕ ಶಾಲಾವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಆರೋಗ್ಯಕಾರ್ಯಕರ್ತೆಯರು ಆವರಗೆರೆ ಗ್ರಾಮದಲ್ಲಿಜಾಗೃತಿ ಜಾಥಾ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.