ರಾಜ್ಯದ ರೇಷ್ಮೆ ಬೆಳೆಗಾರರ ಹಿತರಕ್ಷಣೆಗೆ ಬದ್ಧ
Team Udayavani, Sep 1, 2021, 2:22 PM IST
ದಾವಣಗೆರೆ: ದಾವಣಗೆರೆ ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿದ್ದ ರೇಷ್ಮೆ ಮಾರುಕಟ್ಟೆಯನ್ನುಪುನಾರಂಭ ಮಾಡಲಾಗುವುದು ಎಂದು ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವಕೆ.ಸಿ. ನಾರಾಯಣ ಗೌಡ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ನಡೆದ ರೇಷ್ಮೆ, ಯುವ ಸಬಲೀಕರಣಮತ್ತು ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ಮತ್ತೆ ರೇಷ್ಮೆ ಮಾರುಕಟ್ಟೆ ಪುನಾರಂಭಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ5 ಎಕರೆಯಲ್ಲಿ ರೇಷ್ಮೆ ಮಾರುಕಟ್ಟೆ ಇತ್ತು.ಕಾರಣಾಂತರದಿಂದ ಸ್ಥಗಿತಗೊಂಡಿದೆ. ಮತ್ತೆ ಪ್ರಾರಂಭಿಸಬೇಕು ಎಂಬ ಬೇಡಿಕೆ ರೈತರಿಂದಬಂದಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕ,ಹೈಟೆಕ್ ಮಾದರಿ ಮಾರುಕಟ್ಟೆ ಮಾಡಲಾಗುವುದು.
ರೇಷ್ಮೆಗೂಡುಗಳನ್ನು ದಾಸ್ತಾನು ಮಾಡಿ, ಉತ್ತಮಬೆಲೆಗೆ ಮಾರಾಟ ಮಾಡಲು ಅನುಕೂಲ ಆಗಲುಲಾಕರ್, ಚೀನಾ ಮಾದರಿಯಲ್ಲಿ ರ್ಯಾಕ್ ಸೌಲಭ್ಯಒದಗಿಸಲಾಗುವುದು. ರೈತರ ಹಕ್ಕನ್ನು ರೈತರಿಗೇನೀಡಲಾಗುವುದು ಎಂದು ತಿಳಿಸಿದರು.
ರೇಷ್ಮೆಎಲ್ಲಬೆಳೆಗಳಗಿಂತಲೂ ಉತ್ತಮಬೆಳೆ. ರೈತರುಶ್ರಮಪಟ್ಟಲ್ಲಿ ಉತ್ತಮ ಲಾಭ ಪಡೆಯಬಹುದು.ಮಂಡ್ಯ ಭಾಗದಲ್ಲಿ ರೇಷ್ಮೆ ಬೆಳೆಗಾರರು 5-6ಬೆಳೆ ಬೆಳೆಯುತ್ತಿದ್ದಾರೆ. ದಾವಣಗೆರೆ ಭಾಗದಲ್ಲಿ10 ಬೆಳೆ ಬೆಳೆಯುತ್ತಿರುವುದನ್ನು ನೋಡಿದರೆಸಂತೋಷ ಆಗುತ್ತದೆ. ಇಲ್ಲಿನ ಬೆಳೆಗಾರರಿಗೆಮುಖ್ಯಮಂತ್ರಿಗಳಿಂದ ಸನ್ಮಾನದ ಜೊತೆಗೆ ಪ್ರಶಸ್ತಿವಿತರಿಸುವ ಕೆಲಸ ಮಾಡಲಾಗುವುದು ಎಂದುಹೇಳಿದರು.ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆಸಾಕಷ್ಟು ಸಮಸ್ಯೆಗಳಿವೆ ಎಂಬುದು ಸ್ವತಃ ರೇಷ್ಮೆಬೆಳೆಗಾರನಾದ ನನಗೆ ಗೊತ್ತು. ಕಳೆದ ಬಾರಿ ಸಾಕಷ್ಟುಕಡಿವಾಣ ಹಾಕಲಾಗಿತ್ತು. ಇನ್ನು 6 ತಿಂಗಳಲ್ಲಿಎಲ್ಲದ್ದಕ್ಕೂ ಕಡಿವಾಣ ಹಾಕ ಲಾಗುವುದು. ನಾನೇಮಾರುಕಟೆ rಗೆ ಹೋಗಿ ಎಲ್ಲವನ್ನೂ ಪರಿಶೀಲನೆಮಾಡುತ್ತೇನೆ.
ರೈತರಿಗೆ ಮೋಸ ಮಾಡುವರನ್ನುಪೊಲೀಸರಿಗೆ ಹಿಡಿದು ಕೊಡಲಾಗುವುದು. ರೇಷ್ಮೆಬೆಳೆಗಾರರು ಸಾಕಷ್ಟು ಪರಿಶ್ರಮ ಪಡುತ್ತಾರೆ. ಅವರಿಗೆಯಾವುದೇ ರೀತಿಯಲ್ಲಿ ಅನ್ಯಾಯ ಆಗುವುದಕ್ಕೆಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.ರೇಷ್ಮೆ ಇಲಾಖೆಯಿಂದ ಬೆಳೆಗಾರರಿಗೆ ಶೆಡ್‌ನೀಡಲಾಗುವುದು. ಯಾವುದೇ ಅಧಿಕಾರಿ ಒಬ್ಬರೈತರಿಗೆ ಎರಡರೆಡು ಬಾರಿ ಶೆಡ್ ನೀಡಬಾರದು.ಅಂಥದ್ದು ಕಂಡು ಬಂದಲ್ಲಿ ಒಂದೇ ಕ್ಷಣದಲ್ಲಿಅಮಾನತು ಮಾಡಲಾಗುವುದು.
ರಾಜ್ಯದಲ್ಲಿ 2-3ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಶೆಡ್‌ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸುವ ಬಗ್ಗೆ ಪ್ರಯತ್ನಮಾಡಲಾಗುವುದು. ರೈತನ ಮಗನಾದ ನನಗೆ ರೈತರಎಲ್ಲ ಸಮಸ್ಯೆ ಗೊತ್ತಿವೆ. ಸಾಧ್ಯವಾದಷ್ಟು ರೈತರಿಗೆಅನುಕೂಲ ಮಾಡಲಾಗುವುದು ಎಂದರು.
ದಾವಣಗೆರೆ ಹೊರ ವಲಯದತೋಳಹುಣಸೆಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ 37ಎಕರೆ ಜಾಗದಲ್ಲಿ ಕೆಲ ಭಾಗವನ್ನು ರೇಷ್ಮೆ ಬೆಳೆಗಾರರಿಗ ೆಭೋಗ್ಯಕ್ಕೆ ನೀಡುವಂತಹ ಹೊಸ ಪ್ರಯೋಗಪ್ರಾರಂಭಿಸಬೇಕು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲು ಸಾಧ್ಯವಾಗುತ್ತದೆ. ಬೆಳೆಗಾರರಿಗ ೆಉತ್ತೇಜನ ನೀಡಿದಂತಾಗುತ್ತದೆ. ಉತ್ತಮಸಂಪರ್ಕ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಚನ್ನಗಿರಿ ತಾಲೂಕಿನ ಮಾಡಾಳ್ ಸಮೀಪ ರೇಷ್ಮೆಇಲಾಖೆಗೆ ಸೇರಿದ 33 ಎಕರೆ ಜಾಗ ಇದೆ. ಬೇಲಿ ಇತರೆ ವ್ಯವಸ್ಥೆ ಇಲ್ಲ ಎಂದು ಇಲಾಖೆ ಅಧಿಕಾರಿಗಳುತಿಳಿಸಿದರು. ಬೇಲಿ ನಿರ್ಮಾಣ ಒಳಗೊಂಡಂತೆ ಅಗತ್ಯಕ್ರಮ ಕೈಗೊಂಡು ಜಾಗ ಕಬಳಿಕೆ ತಪ್ಪಿಸಬೇಕು ಎಂದು ಸಚಿವರು ಸೂಚಿಸಿದರು.
ಕೇಂದ್ರಸರ್ಕಾರದಿಂದರೇಷ್ಮೆಇಲಾಖೆಗೆಅನುದಾನನೀಡಲಾಗುತ್ತದೆ. ಬಹಳ ಶ್ರಮವಹಿಸಿ ಅನುದಾನ ತರಬೇಕಾ ಗುತ್ತದೆ. ಹಾಗಾಗಿ ಅನುದಾನ ದುರ್ಬಳಕೆ ಆಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದುಸೂಚಿಸಿದ ಅವರು, ಕಳೆದ ವರ್ಷ ರೇಷ್ಮೆ ಇಲಾಖೆಗೆಆದಾಯ ಬಂದಿದೆ ಎಂದು ತಿಳಿಸಿದರು.ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರಾದಎಸ್.ಎ. ರವೀಂದ್ರನಾಥ್, ಪ್ರೊ| ಎನ್. ಲಿಂಗಣ,ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪ, ಜಿಲ್ಲಾಧಿಕಾರಿಮಹಾಂತೇಶ್ ಜಿ. ಬೀಳಗಿ, ಜಿಪಂ ಉಪ ಕಾರ್ಯದರ್ಶಿಬಿ. ಆನಂದ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.