ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಾಳೆ
Team Udayavani, Jan 13, 2022, 6:23 PM IST
ದಾವಣಗೆರೆ: ಹರಿಹರದ ಪಂಚಮಸಾಲಿ ಜಗದ್ಗುರುಪೀಠದಲ್ಲಿ ಜ. 14ರಂದು ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದುಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್.ವಾಸುದೇವ ರಾಯ್ಕರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಶುಕ್ರವಾರ ಬೆಳಗ್ಗೆ 6ಕ್ಕೆ ಹರಿಹರದಪಂಚಮಸಾಲಿ ಪೀಠದಲ್ಲಿ ಶ್ರೀ ವಚನಾನಂದಸ್ವಾಮೀಜಿಯವರ ನೇತೃತ್ವ, ಹಲವಾರು ಗಣ್ಯರಉಪಸ್ಥಿತಿಯಲ್ಲಿ 13 ಸುತ್ತು ಸಾಮೂಹಿಕ ಸೂರ್ಯನಮಸ್ಕಾರ ಮಾಡಲಾಗುವುದು ಎಂದರು.ಮಕರ ಸಂಕ್ರಾಂತಿಯಂದು ಯೋಗಯುಕ್ತ,ರೋಗಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರಧಾನಿನರೇಂದ್ರ ಮೋದಿ ಅವರ ಕರೆಯಂತೆ ದಾವಣಗೆರೆ ಜಿಲ್ಲೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರಕಾರ್ಯಕ್ರಮ ನಡೆಸಲಾಗುವುದು. ವಿಶ್ವದಾಖಲೆಯ75 ಕೋಟಿ ಸೂರ್ಯ ನಮಸ್ಕಾರದ ದಾಖಲೆಯನಿರ್ಮಾಣಕ್ಕಾಗಿ ದಾವಣಗೆರೆ ಜಿಲ್ಲೆಯ ಪ್ರತಿಯೊಬ್ಬರುಮನೆಗಳಲ್ಲೇ ಕನಿಷ್ಠ ಪಕ್ಷ ಒಂದು ಸುತ್ತಿನ ಸೂರ್ಯನಮಸ್ಕಾರ ಮಾಡುವ ಮೂಲಕ ಸಹಕಾರ ನೀಡಬೇಕುಎಂದು ಮನವಿ ಮಾಡಿದರು.
ಭಾರತ ಸರ್ಕಾರದ ಆಯುಷ್ ಮಂತ್ರಾಲಯ,ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆಯಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ದಾವಣಗೆರೆಯಲ್ಲೇ ಬೃಹತ್ ಕಾರ್ಯಕ್ರಮಕ್ಕೆ ಎಲ್ಲ ಅಗತ್ಯಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೊರೊನಾಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದಿನದಿನಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಮಕರಸಂಕ್ರಾಂತಿಗೂ ಮತ್ತು ಸೂರ್ಯ ನಮಸ್ಕಾರಕ್ಕೂಅತ್ಯಂತ ಅವಿನಾಭಾವ ಸಂಬಂಧ ಇದೆ.
ಪ್ರತಿಸೌರಮಾನ ಮಾಸದಲ್ಲಿ ಸಂಕ್ರಾಂತಿ ಬಂದರೂಸೂರ್ಯ ಭಗವಂತನು ದಕ್ಷಿಣಾಯಾನ ಪಥದಿಂದಉತ್ತರಾಯಣ ಪಥಕ್ಕೆ ಸಂಚರಿಸುವ ಕಾರಣಕ್ಕಾಗಿ ಮಕರಸಂಕ್ರಾಂತಿಗೆ ಹೆಚ್ಚಿನ ಪ್ರಾಶ್ಯಸ್ತ ಇದೆ. ಹಾಗಾಗಿಯೇಮಕರ ಸಂಕ್ರಾಂತಿಯಂದು ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೊರೊನಾನಿಯಮ, ಮಾರ್ಗಸೂಚಿ ಅನ್ವಯವೇ ಸಾಮೂಹಿಕಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಲಿದೆ.ಭಾಗವಹಿಸುವಂತಹ ಆಸಕ್ತರು ಹೆಚ್ಚಿನ ಮಾಹಿತಿಗೆಮೊ: 98440-40813, 94496-29061, 98456-85224, 98454-51787ಗೆ ಸಂಪರ್ಕಿಸುವಂತೆಕೋರಿದರು.
ಒಕ್ಕೂಟದ ಗೌರವ ಸಲಹೆಗಾರ ಡಾ|ಯು. ಸಿದ್ದೇಶ್, ರಾಜು ಬದ್ಧಿ, ತೀರ್ಥರಾಜ್‌ಹೋಲೂರು, ಪ್ರಕಾಶ್ ಉತ್ತಂಗಿ, ಜಯಣ್ಣ ಬಾದಾಮಿ,ನಿರಂಜನ್ ಅಣಬೂರ್‌ಮs…, ವಿರುಪಾಕ್ಷ ಜವಳಿಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.