ಸಹಜ ಸ್ಥಿತಿಗೆ ಬಂದ ದೇವನಗರಿ-ಕೋಟೆನಾಡು
Team Udayavani, Jan 23, 2022, 8:00 PM IST
ದಾವಣಗೆರೆ: ಕೊರೊನಾ ಮೂರನೇ ಅಲೆ ಹಾಗೂಒಮಿಕ್ರಾನ್ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಘೋಷಿಸಿದ್ದ ವಾರಾಂತ್ಯ ಕರ್ಫ್ಯೂ ರದ್ದುಪಡಿಸಿದ್ದರಿಂದಶನಿವಾರ ಜಿಲ್ಲೆಯಲ್ಲಿ ವ್ಯಾಪಾರ-ವ್ಯವಹಾರ,ಸಂಚಾರ ಸಹಜ ಸ್ಥಿತಿಗೆ ಮರಳಿತು.ವಾರಾಂತ್ಯ ಕರ್ಫ್ಯೂ ಕಾರಣದಿಂದಾಗಿ ಕಳೆದಎರಡು ವಾರಗಳಿಂದ ಶನಿವಾರ-ಭಾನುವಾರಅಂಗಡಿಗಳನ್ನು ಬಂದ್ ಮಾಡಿದ ಅಂಗಡಿಕಾರರು,ಶನಿವಾರ ಬೆಳಿಗ್ಗೆ ಎಂದಿನಂತೆ ತಮ್ಮಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿದರು.
ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆಬಂದು ತಮಗೆ ಬೇಕಾದ ವಸ್ತುಗಳನ್ನುಖರೀದಿಸಿದರು. ಬಟ್ಟೆ, ಚಿನ್ನಾಭರಣ, ಪಾತ್ರೆಸೇರಿದಂತೆ ಅವಶ್ಯಕವಲ್ಲದ ವಸ್ತು ಮಾರಾಟದಅಂಗಡಿಗಳಲ್ಲಿ ಶನಿವಾರ ವ್ಯಾಪಾರ ಜೋರಾಗಿತ್ತು.ನಗರದ ವಾಣಿಜ್ಯ ಪ್ರದೇಶಗಳಾದ ವಿಜಯಲಕ್ಷಿ¾àರಸ್ತೆ, ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ,ತಾಲೂಕು ಕಚೇರಿ, ಬಿನ್ನಿ ಕಂಪನಿ ರಸ್ತೆ, ಇಸ್ಲಾಂಪೇಟೆ,ಎಂ.ಜಿ.ರಸ್ತೆ, ಮಂಡಿಪೇಟೆ, ಚೌಕಿಪೇಟೆ, ದೊಡ್ಡಪೇಟೆ,ಚಾಮರಾಜಪೇಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿಸಾರ್ವಜನಿಕರ ಒಡಾಟ ಎಂದಿನಂತಿತ್ತು.
ಶನಿವಾರಇಡೀ ದಿನ ಸಾರಿಗೆ ಬಸ್, ಖಾಸಗಿ ಬಸ್ ಹಾಗೂಸಾರ್ವಜನಿಕ ವಾಹನ ಸಂಚಾರ ಸಹ ಎಂದಿನಂತಿತ್ತು.ವಾರಂತ್ಯದ ಕರ್ಫ್ಯೂ ಹಿಂಪಡೆಯಲಾಗಿದ್ದರೂರಾತ್ರಿ ಕರ್ಫ್ಯೂ ಮಾತ್ರ ವಾರದ ಎಲ್ಲ ದಿನಗಳಲ್ಲಿ ರಾತ್ರಿ10ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿದೆ.ಹೀಗಾಗಿ ರಾತ್ರಿ 10 ಗಂಟೆಯ ಬಳಿಕ ಜನ, ವಾಹನಸಂಚಾರ ವಿರಳಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.