ಇ-ಟೆಂಡರ್‌ನಲ್ಲಿ ಮೆಕ್ಕೆಜೋಳ ಖರೀದಿ ವಿಸ್ತರಣೆ
Team Udayavani, Feb 2, 2022, 4:41 PM IST
ದಾವಣಗೆರೆ: ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುವ ರಾಜ್ಯದಎಲ್ಲ ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಇ-ಟೆಂಡರ್ ವ್ಯವಸ್ಥೆಮೂಲಕ ಖರೀದಿಸಲು ರಾಜ್ಯ ಕೃಷಿ ಉತ್ನನ್ನ ಮಾರುಕಟ್ಟೆಸಮಿತಿ ಚಿಂತನೆ ನಡೆಸಿದೆ. ರಾಜ್ಯದಲ್ಲಿ ದಾವಣಗೆರೆಯ ಕೃಷಿ ಉತ್ಪನ್ನಮಾರುಕಟ್ಟೆಯಲ್ಲಿ ಮೆಕ್ಕೆಜೋಳವನ್ನು ಇ-ಟೆಂಡರ್‌ವ್ಯವಸ್ಥೆಯಲ್ಲಿ ಖರೀದಿಗೆ ಅವಕಾಶ ಮಾಡಿಕೊಟ್ಟ ಬಳಿಕಮೆಕ್ಕೆಜೋಳಕ್ಕೆ ಉತ್ತಮ ಧಾರಣೆ ದೊರಕಿದೆ.
ಪ್ರತಿ ಕ್ವಿಂಟಲ್‌ಗೆ ಸರಾಸರಿ 1400 ರೂ. ಆಸುಪಾಸು ಇದ್ದ ಮೆಕ್ಕೆಜೋಳದರ ಈಗ 2000 ರೂ. ದಾಟಿದೆ. ಹೀಗಾಗಿ ದಾವಣಗೆರೆಎಪಿಎಂಸಿಯನ್ನೇ ಮಾದರಿಯನ್ನಾಗಿಟ್ಟುಕೊಂಡುಮೆಕ್ಕೆಜೋಳ ಬೆಳೆಯುವ ಉಳಿದ ರಾಜ್ಯದಜಿಲ್ಲೆಗಳಲ್ಲಿಯೂ ಇ-ಟೆಂಡರ್ ವ್ಯವಸ್ಥೆಯಲ್ಲಿಮೆಕ್ಕೆಜೋಳ ತಂದು ಬೆಳೆಗಾರರಿಗೆ ಅನುಕೂಲ ಕಲ್ಪಿಸಲುಎಪಿಎಂಸಿ ಮುಂದಾಗಿದೆ.
ಎಪಿಎಂಸಿ ನಿರ್ದೇಶಕರಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ (ವಿಡಿಯೋಕಾನ್#ರೆನ್ಸ್) ಸಭೆಯಲ್ಲಿ ಈ ಕುರಿತು ಎಪಿಎಂಸಿಗಳಿಗೆನಿರ್ದೇಶನವನ್ನೂ ನೀಡಲಾಗಿದೆ.ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 150 ಲಕ್ಷಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗುತ್ತಿದೆ.
ಎಪಿಎಂಸಿಯ ಈ ಮಹತ್ವದ ನಿರ್ಧಾರ ಸಮರ್ಪಕವಾಗಿಅನುಷ್ಠಾನವಾದರೆ ರಾಜ್ಯದ ಹಾವೇರಿ, ಬಳ್ಳಾರಿ,ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ,ವಿಜಯಪುರ,ಚಿತ್ರದುರ್ಗ, ಹಾಸನ, ಶಿವಮೊಗ್ಗ,ಮಂಡ್ಯ, ಮೈಸೂರು ಸೇರಿದಂತೆ ಇನ್ನಿತರ ಜಿಲ್ಲೆಗಳಎಪಿಎಂಸಿಗಳಲ್ಲಿಯೂ ಮೆಕ್ಕೆಜೋಳ ಇ-ಟೆಂಡರ್‌ಮೂಲಕ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.
ಈವ್ಯವಸ್ಥೆ ಆರಂಭಿಸುವ ಮುನ್ನ ವರ್ತಕರು, ದಲ್ಲಾಳಿಗಳು,ರೈತರು ಹಾಗೂ ಹಮಾಲಿ ಕಾರ್ಮಿಕರ ಸಭೆ ನಡೆಸಿ,ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯಬೇಕಾಗಿದೆ.
ಇ-ಟೆಂಡರ್ ವ್ಯವಸ್ಥೆಯಲ್ಲಿ ಹೆಚ್ಚಿನ ವರ್ತಕರುಭಾಗವಹಿಸುವುದರಿಂದ ರೈತರ ಬೆಳೆಗೆ ಸ್ಪರ್ಧಾತ್ಮಕಬೆಲೆ ಸಿಗುತ್ತದೆ. ರೈತರಿಗೆ ಅನುಕೂಲ ಆಗುವ ಜತೆಗೆಎಪಿಎಂಸಿಗೆ ಹೆಚ್ಚಿನ ಆವಕ ಬಂದು ತೆರಿಗೆಯೂ ಹೆಚ್ಚುಬರಲಿದೆ. ಇದು ಎಪಿಎಂಸಿಗಳ ಮೂಲಸೌಕರ್ಯಅಭಿವೃದ್ಧಿಗೂ ಸಹಕಾರಿಯಾಗಲಿದೆ.
ಎಲ್ಲಕ್ಕಿಂತಮುಖ್ಯವಾಗಿ ರೈತರ ಖಾತೆಗೆ ಮಾರಾಟದ ಹಣ ಜಮೆಆಗಲಿದೆ. ವರ್ತಕರು, ದಲ್ಲಾಳಿಗಳಿಂದ ರೈತರಿಗಾಗುವಹಣ ಜಮೆ, ತೂಕ, ಸ್ಯಾಂಪಲ್ ಸೇರಿದಂತೆ ಇನ್ನಿತರವಿಚಾರಗಳಲ್ಲಿ ಆಗುವ ಮೋಸ ತಪ್ಪಲಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.