ಜೂಜಿಗೆ ಮಾಡಿದ ಸಾಲ ತೀರಿಸಲಾಗದೆ ಕೊಲೆ!
Team Udayavani, Feb 4, 2022, 2:52 PM IST
ದಾವಣಗೆರೆ: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದದಾವಣಗೆರೆ ಸಮೀಪದ ಎಲೆಬೇತೂರು ಗ್ರಾಮದಲ್ಲಿನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಭೇದಿಸಿರುವದಾವಣಗೆರೆ ಗ್ರಾಮಾಂತರ ಮತ್ತು ಡಿಸಿಆರ್‌ಬಿ ಘಟಕಪೊಲೀಸರು ಮೂವರನ್ನು ಬಂಧಿಸಿ, 1.75 ಲಕ್ಷನಗದು, 9.27 ಲಕ್ಷ ಮೌಲ್ಯದ ಚಿನ್ನಾಭರಣ, ಬೈಕ್‌ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಸಮೀಪದ ಎಲೆಬೇತೂರು ಗ್ರಾಮದಲ್ಲಿಜ.24 ರಂದು ಮಠದ ಗುರುಸಿದ್ದಯ್ಯ ಮತ್ತುಸರೋಜಮ್ಮ ಎಂಬ ವೃದ್ಧ ದಂಪತಿಯನ್ನು ಅತ್ಯಂತಬರ್ಬರವಾಗಿ ಕೊಲೆ ಮಾಡಿ ನಗದು, ಚಿನ್ನಾಭರಣದೋಚಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆನಡೆಸಿದರೂ ಸ್ಪಷ್ಟ ಸುಳಿವು ದೊರೆತಿರಲಿಲ್ಲ. ಇನ್ನೊಂದುಆಯಾಮದಲ್ಲಿ ತನಿಖೆ ನಡೆಸಿದಾಗ ಮೂವರುಆರೋಪಿತರ ಸುಳಿವು ದೊರೆಯಿತು. ಮೂವರನ್ನುಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದುಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಗುರುವಾರಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ಪ್ರಮುಖ ಆರೋಪಿ ಕೊಲೆಗೀಡಾದದಂಪತಿಯಲ್ಲಿ ಪತ್ನಿಯ 40 ಗ್ರಾಂ ಚಿನ್ನಾಭರಣಅಡವಿಟ್ಟು 3 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದ.ಈ ಮೂರು ಲಕ್ಷ ರೂ.ಗಳನ್ನು ಜೂಜಾಟದಲ್ಲಿ ಸೋತಿದ್ದ.ಸಾಲ ನೀಡಿದ್ದ ದಂಪತಿ ಹಣ ಕೇಳಲಾರಂಭಿಸಿದ್ದರು.
ಬಂಗಾರ ಅಡವಿಟ್ಟು ತೆಗೆದುಕೊಂಡಿದ್ದ ಎಲ್ಲಹಣ ಜೂಜಿನಲ್ಲಿ ಕಳೆದು ಕೊಂಡಿದ್ದು, ಬಡ್ಡಿ ಕಟ್ಟಿಬಂಗಾರದ ಒಡವೆ ಬಿಡಿಸಿಕೊಳ್ಳಬೇಕಾಗುತ್ತದೆ ಎಂದುಬೆಂಗಳೂರಿನಲ್ಲಿದ್ದ ತನ್ನ ಇಬ್ಬರು ಗೆಳೆಯರೊಡಗೂಡಿಕೊಲೆ ಸಂಚು ರೂಪಿಸಿದ್ದ. ಆರೋಪಿಗಳು ಜ. 24 ರಂದುರಾತ್ರಿ 8.30 ರಿಂದ 8.40ರ ಸಮಯದಲ್ಲಿ ಕೊಲೆ ಮಾಡಿ,ಅಡವಿಟ್ಟದ್ದ ಬಂಗಾರ, ಸರೋಜಮ್ಮನ ಮೈಮೇಲಿದ್ದಬಂಗಾರ, ಬೀರುವಿನಲ್ಲಿದ್ದ ನಗದು, ಬಂಗಾರ ದೋಚಿಪರಾರಿಯಾಗಿದ್ದರು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.