ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಳಕ್ಕೆ ಒತ್ತಾಯ
Team Udayavani, Feb 5, 2022, 3:43 PM IST
ದಾವಣಗೆರೆ: ವೇತನ ಹೆಚ್ಚಿಸಲು ಪುನರ್‌ಪರಿಶೀಲನೆ ಮಾಡುವಂತೆ ಒತ್ತಾಯಿಸಿಶುಕ್ರವಾರ ರಾಜ್ಯ ಅಕ್ಷರ ದಾಸೋಹಬಿಸಿಯೂಟ ತಯಾರಕರ ಫೆಡರೇಷನ್(ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟತಯಾರಕರು ಜಿಲ್ಲಾಡಳಿತದ ಎದುರುಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆವೇತನ ಹೆಚ್ಚಿಸದೆ ಅನ್ಯಾಯ ಮಾಡಿದೆ.ಇಂದಿನ ಅಗತ್ಯ ವಸ್ತುಗಳ ಬೆಲೆ, ಜೀವನನಿರ್ವಹಣೆ ಆಧಾರದಲ್ಲಿ ವೇತನ ನೀಡಬೇಕು.
ಕೇಂದ್ರ ಸರ್ಕಾರ ವೇತನ ಹೆಚ್ಚಿಸಲು ಪುನರ್‌ಪರಿಶೀಲನೆ ಮಾಡುವಂತಾಗಬೇಕು ಎಂದುಒತ್ತಾಯಿಸಿದರು.ಕಳೆದ ಜನವರಿಯಲ್ಲಿ ಫೆಡರೇಷನ್‌ನೇತೃತ್ವದಲ್ಲಿ ಹೋರಾಟ ನಡೆಸಿ 2022ರಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆವೇತನ ಹೆಚ್ಚಳ ಮಾಡಬೇಕು ಎಂದುಮನವಿ ಮಾಡಲಾಗಿತ್ತು. ರಾಜ್ಯದ್ಯಾಂತ ಎಲ್ಲತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಸಿದಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.
ಮಹಿಳೆಯರ ಬಗ್ಗೆ ಪುಂಖಾನುಪುಂಖವಾಗಿಮಾತನಾಡುವ ಕೇಂದ್ರ ಸರ್ಕಾರ,ಬಿಸಿಯೂಟ ತಯಾರಿಕೆಯಲ್ಲಿತೊಡಗಿಸಿಕೊಂಡಿರುವ ಮಹಿಳೆಯರನ್ನುಕಡೆಗಣಿಸಿದೆ ಎಂದು ದೂರಿದರು.ಕಳೆದ 19 ವರ್ಷಗಳಲ್ಲಿ ಶಾಲೆಗಳಲ್ಲಿಬಿಸಿಯೂಟ ತಯಾರಕರಾಗಿ ಕೆಲಸಮಾಡುತ್ತಿರುವ ಮುಖ್ಯ ಅಡುಗೆಯವರಿಗೆಮಾಸಿಕ 2,700 ರೂ. ಹಾಗೂ ಸಹಾಯಕಅಡುಗೆಯವರಿಗೆ 2,600 ರೂ. ಮಾತ್ರನೀಡಲಾಗುತ್ತಿದೆ. ಬರುವ ವೇತನದಲ್ಲಿಜೀವನ ನಿರ್ವಹಣೆ ದುಸ್ತರವಾಗುತ್ತಿದೆ.ಅತ್ಯಲ್ಪ ವೇತನದಲ್ಲಿ ಜೀವನ ನಿರ್ವಹಣೆಬಹಳ ಕಷ್ಟವಾಗುತ್ತಿರುವುದರಿಂದ ವೇತನಹೆಚ್ಚಿಸಬೇಕು.
ಕೇಂದ್ರ ಸರ್ಕಾರವೇರೂಪಿಸಿರುವಂತೆ ಬಿಸಿಯೂಟ ತಯಾರಕರಿಗೆಕನಿಷ್ಠ ವೇತನ ಜಾರಿಗೊಳಿಸಬೇಕು.ಬಿಸಿಯೂಟ ತಯಾರಕರಿಗೆ ಇದೇ ಬಜೆಟ್‌ನಲ್ಲಿ ವೇತನ ಹೆಚ್ಚಿಸುವಂತೆ ಪುನರ್ ಪರಿಶೀಲನೆಮಾಡಿ ಕನಿಷ್ಠ ವೇತನ ಜಾರಿಗೊಳಿಸುವಂತೆಒತ್ತಾಯಿಸಿ ಬಿಸಿಯೂಟ ತಯಾರಕರುಜಿಲ್ಲಾಧಿಕಾರಿ ಮಹಂತೇಶ ಬೀಳಗಿ ಅವರಮೂಲಕ ಮೂಲಕ ಪ್ರಧಾನಮಂತ್ರಿಗಳಿಗೆಮನವಿ ಸಲ್ಲಿಸಿದರು.ಬಿಸಿಯೂಟ ತಯಾರಕರ ಫೆಡರೇಷನ್‌ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ತಾಲೂಕುಅಧ್ಯಕ್ಷೆ ಮಳಲ್ಕೆರೆ ಜಯಮ್ಮ, ಪದ್ಮಾ, ರಾಜ್ಯಖಜಾಂಚಿ ಬೆಳಲಗೆರೆ ರುದ್ರಮ್ಮ, ಸರೋಜಾ,ಸಿ. ರಮೇಶ್, ಮಂಜುಳಾ, ಗೀತಾ, ಚೆನ್ನಮ್ಮ,ಸುವರ್ಣಮ್ಮ, ಎಐಟಿಯುಸಿ ಮುಖಂಡನರೇಗಾ ರಂಗನಾಥ್ ಮತ್ತಿತರರುಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.