ಕಾರ್ಮಿಕರಿಗೆ ಉಚಿತ ತಪಾಸಣಾ ಶಿಬಿರ
Team Udayavani, Feb 5, 2022, 3:45 PM IST
ದಾವಣಗೆರೆ: ಕರ್ನಾಟಕ ಕಟ್ಟಡ ಮತ್ತುಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಮಂಡಳಿಯಿಂದ ದಾವಣಗೆರೆ ವ್ಯಾಪ್ತಿಯಲ್ಲಿನೋಂದಾಯಿತ ಕಾರ್ಮಿಕರು ಹಾಗೂಅವರ ಅವಲಂಬಿತರಿಗೆ ಆರೋಗ್ಯತಪಾಸಣೆ ಮತ್ತು ತರಬೇತಿ ಒದಗಿಸುವಯೋಜನೆಗೆ ಶುಕ್ರವಾರ ಜಿಲ್ಲಾಡಳಿತಭವನದ ಆವರಣದಲ್ಲಿ ಜಿಲ್ಲಾಧಿ ಕಾರಿಮಹಾಂತೇಶ ಬೀಳಗಿ ಸಾಂಕೇತಿಕವಾಗಿಚಾಲನೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿ ಕಾರಿ ಜಿ. ಇಬ್ರಾಹಿಂಸಾಬ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ28,500ರಷ್ಟು ಕಟ್ಟಡ ಕಾರ್ಮಿಕರಿಗೆ ಉಚಿತತಪಾಸಣಾ ಶಿಬಿರವನ್ನು ಕಾರ್ಮಿಕರು ಕೆಲಸಮಾಡುವ ಸ್ಥಳದಲ್ಲಿ ನಡೆಸಲಾಗುವುದು.ಕಣ್ಣು, ಕಿವಿ ಹಾಗೂ ಉಸಿರಾಟದ ತೊಂದರೆಇದ್ದವರಿಗೆ ತಪಾಸಣೆ ಮಾಡಿ ತಕ್ಷಣವರದಿ ನೀಡಲಾಗುತ್ತದೆ. ಒಟ್ಟು 20ಕ್ಕೂಹೆಚ್ಚು ಆರೋಗ್ಯ ತಪಾಸಣೆ ಪರೀಕ್ಷೆಗಳನ್ನುನಡೆಸಲಾಗುತ್ತದೆ. ಜಿಲ್ಲಾದ್ಯಂತ ಒಂದೂವರೆತಿಂಗಳು ಈ ಸೇವೆ ಲಭ್ಯವಿದೆ. ಕಾರ್ಮಿಕರುಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ಆರೈಕೆ ಆಸ್ಪತ್ರೆಯವ್ಯವಸ್ಥಾಪಕ ನಿರ್ದೇಶಕ ಡಾ| ಟಿ.ರವಿಕುಮಾರ್ ಮಾತನಾಡಿ, ನೋಂದಾಯಿತಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಹಾಗೂ ಅವರ ಅವಲಂಬಿತರಿಗೆ ಆರೋಗ್ಯತಪಾಸಣಾ ಮತ್ತು ತರಬೇತಿ ಶಿಬಿರವನ್ನುರಾಜ್ಯಾದ್ಯಂತ ಆಯೋಜಿಸಲಾಗಿದೆ.
ಮುನ್ನೆಚ್ಚರಿಕಾ ಆರೋಗ್ಯ ರಕ್ಷಣೆಮತ್ತು ಔಷಧಗಳು ಕಾರ್ಮಿಕರನ್ನುಅನಾರೋಗ್ಯದಿಂದ ರಕ್ಷಿಸುವುದರ ಜೊತೆಗೆಭವಿಷ್ಯದ ಕಾಯಿಲೆಗಳಿಂದ ರಕ್ಷಿಸುತ್ತವೆ.ಹಾಗಾಗಿ ಎಲ್ಲರೂ ಶಿಬಿರಗಳಲ್ಲಿ ಭಾಗವಹಿಸಿಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕುಎಂದರು.ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕಆಯುಕ್ತೆ ಎಸ್.ಆರ್. ವೀಣಾ, ಆರೈಕೆಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂಕಾರ್ಮಿಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.