ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಮೀಸಲಿಡಿ
Team Udayavani, Feb 5, 2022, 5:20 PM IST
ದಾವಣಗೆರೆ: ಹಣಕಾಸು ಸಚಿವರೂ ಆಗಿರುವಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಮಂಡಿಸಲಿರುವ 2022- 23ನೇ ಸಾಲಿನಆಯ-ವ್ಯಯದಲ್ಲಿ ನಾಡಿನ ಎಲ್ಲ ಜಿಲ್ಲಾ ಹಾಗೂತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಿಸಲುಅಗತ್ಯ ಅನುದಾನ ಮೀಸಲಿಡಬೇಕು ಎಂದು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆಪತ್ರ ಬರೆದಿರುವ ಅವರು, ಸದ್ಯದಲ್ಲೇಮಂಡನೆಯಾಗಲಿರುವ ಆಯ-ವ್ಯಯದಲ್ಲಿನಾಡಿನ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿಕನ್ನಡ ಭವನ ನಿರ್ಮಾಣ ಘೋಷಣೆ ಮಾಡಬೇಕು.ಜಿಲ್ಲಾ ಕೇಂದ್ರಗಳಲ್ಲಿನ ಕನ್ನಡ ಭವನಕ್ಕೆ ತಲಾ ಒಂದುಕೋಟಿ, ತಾಲೂಕು ಕೇಂದ್ರಗಳಿಗೆ ತಲಾ 50 ಲಕ್ಷ ರೂ.ಮೀಸಲಿರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ವ ಕನ್ನಡಿಗರ ಪ್ರಾತಿನಿಧಿ ಕ ಸಂಸ್ಥೆಯಾದಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಮೈಸೂರುಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಕನ್ನಡ ನಾಡು-ನುಡಿಯ ಮೇಲಿನ ಅಭಿಮಾನದಪ್ರತಿರೂಪವಾಗಿ ಸ್ಥಾಪನೆಗೊಂಡಿದೆ. 107 ವರುಷಗಳಭವ್ಯ ಇತಿಹಾಸವಿರುವ ಕನ್ನಡಸಾಹಿತ್ಯ ಪರಿಷತ್ತು ನಿರಂತರವಾಗಿಕನ್ನಡ ನಾಡು, ನುಡಿ, ಗಡಿ, ಜಲ,ಕಲೆ, ಸಾಹಿತ್ಯ, ಸಂಸ್ಕೃತಿಯಉನ್ನತಿಗಾಗಿ ರಚನಾತ್ಮಕವಾಗಿಕೆಲಸ ಮಾಡಿರುವ ಹೆಗ್ಗಳಿಕೆ ಹೊಂದಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಸ್ವಂತ ಕಟ್ಟಡಹೊಂದಿದಾಗ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ನಿರಂತರವಾಗಿಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕಕನ್ನಡ ನುಡಿ, ಕಲೆ, ಕಲಾವಿದರಿಗೆ, ಸಂಸ್ಕೃತಿಗೆ,ಸಾಹಿತಿಗಳಿಗೆ, ವಾಗ್ಮಿಗಳಿಗೆ ಸೂಕ್ತವಾದ ಅವಕಾಶನೀಡಬಹುದು. ಹಾಗಾಗಿ ಆಯವ್ಯಯದಲ್ಲಿ ಕನ್ನಡಭವನ ನಿರ್ಮಾಣಕ್ಕೆ 1.50 ಕೋಟಿ ರೂ. ಅನುದಾನಮೀಸಲಿಡಬೇಕು ಎಂದಿದ್ದಾರೆ.
ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಪತ್ರದಪ್ರತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಡೋಜ ಡಾ| ಮಹೇಶ್ ಜೋಶಿಯವರಿಗೆ, ಜಿಲ್ಲಾಉಸ್ತುವಾರಿ ಸಚಿವರಿಗೆ, ಸಂಸದರಿಗೆ ಹಾಗೂ ಜಿಲ್ಲೆಯಎಲ್ಲಾ ಶಾಸಕರಿಗೆ ಕಳುಹಿಸಿರುವ ವಾಮದೇವಪ್ಪಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಯೋಜನೆಕಾರ್ಯರೂಪಕ್ಕೆ ಬರಲು ಸಹಕರಿಸುವಂತೆ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.