ಸಿಎಂ ಬೊಮ್ಮಾಯಿ ಜನಪರ ಬಜೆಟ್ ಮಂಡಿಸಲಿ
Team Udayavani, Feb 12, 2022, 3:52 PM IST
ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಮಂಡಿಸಲಿರುವ 2022-23ನೇ ಬಜೆಟ್ ಜನಪರವಾಗಿರಬೇಕು.ಬಡವರು ಸೇರಿದಂತೆ ಎಲ್ಲ ವರ್ಗದವರಿಗೆಅನುಕೂಲಕರವಾಗಿರಬೇಕು ಎಂದು ಎಸ್‌ಡಿಐಪಿ (ಸೊಷಿಯಲ್‌ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಸಂಘಟನೆಹಕ್ಕೊತ್ತಾಯ ಮಾಡುತ್ತದೆ ಎಂದು ಸಂಘಟನೆಯ ರಾಜ್ಯ ಪ್ರಧಾನಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಹಕ್ಕೊತ್ತಾಯ ಕುರಿತು ತಯಾರಿಸಿರುವ ಬಜೆಟ್‌ಬೇಡಿಕೆಯ ಪುಸ್ತಕವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಎಲ್ಲಶಾಸಕರಿಗೆ ಕೊಡಲಾಗುವುದು ಎಂದರು.ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲುಕ್ರಮ ವಹಿಸಬೇಕು. ಪ್ರತಿ ಕಂದಾಯ ಗ್ರಾಮಗಳಲ್ಲಿ ಜನಸೇವಾಕೇಂದ್ರಗಳನ್ನು ಸ್ಥಾಪಿಸಬೇಕು. ನೆರೆ ಮತ್ತು ಬರ ಪರಿಹಾರಕ್ಕೆ ಕನಿಷ್ಠ30 ಸಾವಿರ ಕೋಟಿ ರೂ. ಕಾಯ್ದಿರಿಸಬೇಕು. ಮಕ್ಕಳ ಅಪೌಷ್ಟಿಕತೆಕೊರತೆ ನಿವಾರಣೆಗೆ ಒತ್ತು ನೀಡಬೇಕು. ಎಲ್ಲ ತಾಲೂಕು, ಹೋಬಳಿಮಟ್ಟದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು.
ವಿದ್ಯಾರ್ಥಿಗಳಭವಿಷ್ಯಕ್ಕೆ ಮಾರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನುರಾಜ್ಯದಲ್ಲಿ ಅನುಷ್ಠಾನ ಮಾಡದಂತೆ ವಿಧಾನಸಭೆಯಲ್ಲಿ ನಿರ್ಣಯಅಂಗೀಕರಿಸಬೇಕು. ಪ್ರತಿ ತಾಲೂಕು. ಹೋಬಳಿಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕು.ಅಲ್ಪಸಂಖ್ಯಾತರ ಇಲಾಖೆಯ ಬಜೆಟ್‌ನ್ನು 10 ಸಾವಿರ ಕೋಟಿ ರೂ.ಗಳಿಗೆ ಏರಿಸಬೇಕು. ಪೆಟ್ರೋಲ್, ಡಿಸೇಲ್ ಬೆಲೆ ತಗ್ಗಿಸಲು ರಾಜ್ಯದತೆರಿಗೆ ಕಡಿಮೆ ಮಾಡಬೇಕು. ಇವರೆಡನ್ನೂ ಜಿ.ಎಸ್.ಟಿ. ವ್ಯಾಪ್ತಿಗೆತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿಬೇಕು.
ರಾಜ್ಯ ಸರ್ಕಾರವಾರ್ಷಿಕ ಆದಾಯದ ಶೇ. 24ರಷ್ಟನ್ನು ಸಾಲಗಳ ಬಡ್ಡಿ ಪಾವತಿಗಾಗಿಕೊಡುತ್ತಿದೆ. ಯಾವ ಕಾರಣಕ್ಕಾಗಿ ಸಾಲ ಮಾಡಲಾಗುತ್ತಿದೆಹಾಗೂ ಅದು ಉತ್ಪಾದಕ ಯೋಜನೆಗಾಗಿಯೋ ಅಥವಾಅನುತ್ಪಾದಕ ವೆಚ್ಚಗಳಿಗಾಗಿಯೋ ಎಂಬ ಬಗ್ಗೆ ಪಾರದರ್ಶಕ ನೀತಿಅಳವಡಿಸಬೇಕು. ಮುಂದಿನ ದಿನಗಳಲ್ಲಿ ಸಾಲ ಮಾಡುವಾಗಸರ್ವ ಪಕ್ಷಗಳ ಸದಸ್ಯರು, ಆಯ್ದ ತಜ್ಞರ ಸಮಿತಿ ಪರಿಶೀಲನೆ,ಅನುಮೋದನೆ ಪಡೆಯುವ ಹೊಸ ನೀತಿ ಜಾರಿಯಾಗಬೇಕು.ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ ಬ್ಯಾಂಕ್‌ಗಳನ್ನು ಉತ್ತರಭಾರತದ ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸದಂತೆಒತ್ತಾಯಿಸಬೇಕು.
ಇದುವರಿಗೆ ಮಾಡಲಾಗಿರುವ ಸಾಲದಬಗ್ಗೆ ಶ್ವೇತಪತ್ರ ಹೊರಡಿಸಬೇಕು. ರಸ್ತೆ ಸುಂಕ, ಸೇತುವೆ, ರೇಲ್ವೆ,ಜಲ ಸಾರಿಗೆ ಮೂಲಕ ಲಭ್ಯವಾಗುವ ಹಣದಲ್ಲಿ ರಾಜ್ಯಗಳನ್ಯಾಯಯುತ ಪಾಲಿಗಾಗಿ ಒತ್ತಾಯಿಸಬೇಕು ಎಂದರು.ಸಂಘಟನೆಯ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಬೀವುಲ್ಲಾ,ಪ್ರಮುಖರಾದ ರಝಿÌ ರಿಯಾಜ್ ಅಹ್ಮದ್, ಸೈಯದ್‌ಅಶ್ಪಾಕ್, ಎ.ಆರ್. ತಾಹೀರ್, ಸೈಯದ್ ಇರ್ಷಾದ್‌ಅಹ್ಮದ್, ಎಂ.ಸಾದಿಕ್, ದಾದಾಪೀರ್ ಇನ್ನಿತರರುಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.