ಬಜೆಟ್ ಮಂಡನೆಗೂ ಮುನ್ನ 2ಎ ಮೀಸಲಾತಿಯ ಭರವಸೆ
Team Udayavani, Feb 22, 2022, 2:55 PM IST
ದಾವಣಗೆರೆ: ಪಂಚಮಸಾಲಿ ಸಮಾಜದ2ಎ ಮೀಸಲಾತಿ ಬೇಡಿಕೆಯನ್ನು ಬಜೆಟ್‌ಮಂಡನೆಗೂ ಮುನ್ನ ಈಡೇರಿಸುವುದಾಗಿಸ್ವತಃ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರೇ ಮಾತುಕೊಟ್ಟಿದ್ದಾರೆ.ಸಿಎಂ ಆ ಮಾತು ಉಳಿಸಿಕೊಳ್ಳುವವಿಶ್ವಾಸವಿದೆ ಎಂದು ಕೂಡಲಸಂಗಮದಬಸವ ಜಯಮೃತ್ಯುಂಜಯ ಸ್ವಾಮೀಜಿಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದಅವರು, ಬೆಳಗಾವಿಯಲ್ಲಿ ಡಿಸೆಂಬರ್‌ತಿಂಗಳಿನಲ್ಲಿ ಸಮಾಜದ ಶಾಸಕರು,ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿಮುಖ್ಯಮಂತ್ರಿಯವರೇ ಬಜೆಟ್ ಮುನ್ನಬೇಡಿಕೆ ಈಡೇರಿಸುವ ಸಮಯದಗಡುವು ನೀಡಿದ್ದಾರೆ. ಆದ್ದರಿಂದ ನಾವುಅವರಿಗೆ ಮತ್ತೆ ಸಮಯದ ಗಡುವುಕೊಡುವ ಪ್ರಶ್ನೆಯೇ ಇಲ್ಲ ಎಂದರು.ಒಂದು ವೇಳೆ ಕೊಟ್ಟ ಮಾತು ತಪ್ಪಿದರೆಶಾಸಕ ಬಸನಗೌಡ ಪಾಟೀಲ ಯತ್ನಾಳಅಧ್ಯಕ್ಷತೆಯಲ್ಲಿ ಶಾಸಕರ ಸಭೆ ಕರೆದುಮತ್ತೂಮ್ಮೆ ಸರ್ಕಾರದ ಮೇಲೆ ಒತ್ತಡಹೇರಲಾಗುವುದು.
ಅದಕ್ಕೂ ಸರ್ಕಾರಮಣಿಯದ್ದಿದ್ದರೆ ಮುಂದಿನ ಹೋರಾಟದರೂಪುರೇಷೆ ಸಿದ್ಧಪಡಿಸಲಾಗುವುದು.ಈ ಕುರಿತು ಸೋಮವಾರ ನಡೆದಮಹಾರ್ಯಾಲಿಯ ವಾರ್ಷಿಕೋತ್ಸವಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.ಪಂಚಮಸಾಲಿ ಸಮಾಜ ಮೀಸಲಾತಿಗೆಆಗ್ರಹಿಸಿ ದಶಲಕ್ಷ ಸಂಖ್ಯೆಯಲ್ಲಿ ಸೇರಿದಬೆಂಗಳೂರು ಮಹಾರ್ಯಾಲಿ ಆಗಿ ಒಂದುವರ್ಷವಾಗಿದೆ.
ಒಂದು ವರ್ಷವಾದರೂನಮ್ಮ ಬೇಡಿಕೆ ಈಡೇರಿಲ್ಲ ಎಂಬ ನೋವುಸಮಾಜದವರನ್ನು ಕಾಡುತ್ತಿದೆ. ಜತೆಗೆ ಆಕುರಿತ ಆಕ್ರೋಶವೂ ಇದೆ. ಆದ್ದರಿಂದಮತ್ತೆ ಮುಂದಿನ ಹೋರಾಟದ ಬಗ್ಗೆಸಲಹೆ ನೀಡುತ್ತಿದ್ದಾರೆ ಎಂದರು.ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ್, ನಂದಿಹಳ್ಳಿ ಹಾಲಪ್ಪ,ಪ್ರಮುಖರಾದ ತೇಜಸ್ವಿ ಪಟೇಲ್, ಮೋತಿಶಂಕರಪ್ಪ, ಅಶೋಕ ಗೋಪನಾಳ, ಕಂಚಿಕೆರೆಕೊಟ್ರೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.