ಮಾ. 1ರಂದು “ಶಿವ ಸ್ಮರಣೆ ನೃತ್ಯಜಾಗರಣೆ’ ಕಾರ್ಯಕ್ರಮ: ದಿನೇಶ್
Team Udayavani, Feb 27, 2022, 1:14 PM IST
ದಾವಣಗೆರೆ: ಮಹಾ ಶಿವರಾತ್ರಿ ಅಂಗವಾಗಿದಾವಣಗೆರೆಯ ನಮನ ಅಕಾಡೆಮಿಯಿಂದಸತತ ಎರಡನೇ ವರ್ಷ “ಶಿವಸ್ಮರಣೆ ನೃತ್ಯಜಾಗರಣೆ’ ಎಂಬ ನೃತ್ಯರೂಪಕ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈವಿಷಯ ತಿಳಿಸಿದ ಅವರು, ಮಾ. 1ರಂದುಮಂಗಳವಾರ ಶಿವರಾತ್ರಿಯಂದು ರಾತ್ರಿ9:30 ರಿಂದ ಬೆಳಗಿನ ಜಾವ 3 ಗಂಟೆವರೆಗೆದಾವಣಗೆರೆ ನಗರದ ಪ್ರತಿಷ್ಠಿತ ನಾಲ್ಕುದೇವಸ್ಥಾನಗಳಲ್ಲಿ ಒಂದರ ನಂತರಒಂದರಂತೆ ನೃತ್ಯ ಸೇವೆ ಮಾಡುವಮೂಲಕ ನೃತ್ಯ ಜಾಗರಣೆ ಮಾಡಿ ಶಿವಸ್ಮರಣೆ ಮಾಡಲಾಗುತ್ತದೆ ಎಂದರು.ರಾತ್ರಿ 9:30ಕ್ಕೆ ನಿಜಲಿಂಗಪ್ಪಬಡಾವಣೆಯ ರಿಂಗ್ ರಸ್ತೆಯಲ್ಲಿರುವ ಶ್ರೀಶಾರದಾ ಮಂದಿರದಲ್ಲಿ ನಿವೃತ್ತ ಪ್ರಾಚಾರ್ಯಡಾ| ಬಿ.ಟಿ. ಅಚ್ಯುತ್, ರೆಡ್ಕ್ರಾಸ್ಸಂಸ್ಥೆ ಅಧ್ಯಕ್ಷ ಡಾ| ಎ.ಎಂ. ಶಿವಕುಮಾರಶಿವಸ್ಮರಣೆ ನೃತ್ಯ ಜಾಗರಣೆಗೆ ಚಾಲನೆನೀಡುವರು.
ಅಕಾಡೆಮಿಯ ಮಾಧವಿಗೋಪಾಲಕೃಷ್ಣ ಮತ್ತು ಸಂಗಡಿಗರುಪ್ರಸ್ತುತಪಡಿಸುವ ಶಿವಾಷ್ಟಕಂಗೆ ಹೆಸರಾಂತಕಲಾವಿದ ರವೀಂದ್ರ ಹುದ್ದಾರ್ ಚಿತ್ರ ರಚನೆಮಾಡುವರು. ಇದೇ ಮೊದಲ ಬಾರಿವಿಶೇಷ ಕಾರ್ಯಕ್ರಮ ಪ್ರಸ್ತುತಪಡಿಸಲಾಗುತ್ತಿದೆಎಂದು ಹೇಳಿದರು.ಗೀತಾಂಜಲಿ ಚಿತ್ರಮಂದಿರದಪಕ್ಕದಲ್ಲಿರುವ ಶ್ರೀ ಲಿಂಗೇಶ್ವರದೇವಸ್ಥಾನದಲ್ಲಿ 11 ಗಂಟೆಗೆ, ನಂತರ12:30ಕ್ಕೆ ಶ್ರೀ ಜಯದೇವ ವೃತ್ತದಲ್ಲಿರುವಕೂಡಲಿ ಶಂಕರ ಮಠದಲ್ಲಿ, ಅಂತಿಮವಾಗಿವಿದ್ಯಾನಗರದ ಮುಖ್ಯ ರಸ್ತೆಯಲ್ಲಿರುವಶಿವ-ಪಾರ್ವತಿ ದೇವಸ್ಥಾನದಲ್ಲಿ ರಾತ್ರಿ 2.00ರಿಂದ ನೃತ್ಯ ಸೇವೆಯನ್ನು ಮಾಡುವುದರಮೂಲಕ ಶಿವನಿಗೆ ನೃತ್ಯ ಜಾಗರಣೆಯನ್ನುಸಮರ್ಪಿಸುತ್ತಿದ್ದಾರೆ ಎಂದು ತಿಳಿಸಿದರು.
ಅಕಾಡೆಮಿ ಅಧ್ಯಕ್ಷೆ ಮಾಧವಿಗೋಪಾಲಕೃಷ್ಣ ಮಾತನಾಡಿ, ಹೆಸರಾಂತಕಲಾವಿದ ರವಿ ಹುದ್ದಾರರವರು ಶಿವಾಷ್ಟಕಂನೃತ್ಯಕ್ಕೆ ತಮ್ಮ ಕೌಶಲ್ಯದಿಂದ ಸಮಂಜಸವಾದಚಿತ್ರವನ್ನು ಬಿಡಿಸಲಿದ್ದಾರೆ. ಕಲಾವಿದರಾದಕೆ.ವಿ. ಪರಿಣಿಕ, ಎನ್. ಸಂಜನ, ಯುಕ್ತಎಸ್. ಕಠಾರೆ, ಎಂ.ಎಸ್. ವಂದಿತ ಪಟೇಲ್,ಎ.ವಿ. ಮನ್ವಿತ, ಭೂಮಿಕ ಎಸ್. ಕಠಾರೆಹಾಗೂ ಎಂ. ಜಾಹ್ನವಿ ನೃತ್ಯ ಪ್ರದರ್ಶನನೀಡುವರು. ಶಿವರಾತ್ರಿ ಜಾಗರಣೆ ಎಂದರೆಆಟೋಟ, ಸಿನಿಮಾ ಎನ್ನುವಂತಾಗಿದೆ.ಶಿವಸ್ಮರಣೆ, ನೃತ್ಯದ ಮೂಲಕ ಜಾಗರಣೆಮಾಡಲಾಗುವುದು ಎಂದರು.ಅಕಾಡೆಮಿಯ ಗೋಪಾಲಕೃಷ್ಣ, ಪಿ.ಸಿ.ರಾಮನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.