ಜಿಲ್ಲೆಯ ಜನರಲ್ಲಿದೆ ಬೆಟ್ಟದಷ್ಟು ನಿರೀಕ್ಷೆ
Team Udayavani, Mar 2, 2022, 5:24 PM IST
ದಾವಣಗೆರೆ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.4 ರಂದು ಮಂಡಿಸಲಿರುವ ಚೊಚ್ಚಲ ಬಜೆಟ್‌ನಲ್ಲಿಸರ್ಕಾರಿ ವೈದ್ಯಕೀಯ ಕಾಲೇಜು, ಕೃಷಿ ಕಾಲೇಜು,ಪ್ರತ್ಯೇಕ ಹಾಲು ಒಕ್ಕೂಟ, ಜವಳಿ ಪಾರ್ಕ್‌ಗೆ ಉತ್ತೇಜನ ಒಳಗೊಂಡಂತೆ ಅಭಿವೃದ್ಧಿಗೆ ಪೂರಕ ಕೊಡುಗೆಗಳ ಘೋಷಣೆ ಮಾಡುವರೇ ಎಂಬುದುನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಜನರ ನಿರೀಕ್ಷೆ.ಈ ಬಾರಿಯ ಬಜೆಟ್ ಹೇಳಿ ಕೇಳಿ ಚುನಾವಣಾವರ್ಷದ ಬಜೆಟ್.
ಹಾಗಾಗಿ ಜಿಲ್ಲೆಯ ಜನರಬಹು ದಿನಗಳ ಬೇಡಿಕೆ ಈಡೇರಿಸುವ ಮೂಲಕಮುಂದಿನ ವಿಧಾನಸಭಾ ಚುನಾವಣೆಗೆ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಲೆಕ್ಕಾಚಾರದಹಿನ್ನೆಲೆಯಲ್ಲಿ ನೆರೆಯ ಹಾವೇರಿ ಜಿಲ್ಲೆಯಶಿಗ್ಗಾಂವಿ ಕ್ಷೇತ್ರ ಪ್ರತಿನಿಧಿಸುವ ಬಸವರಾಜಬೊಮ್ಮಾಯಿ ದಾವಣಗೆರೆಗೂ ಭರಪೂರ ಕೊಡುಗೆನೀಡಬಹುದು ಎಂಬ ಕಾತರ ಮನೆ ಮಾಡಿದೆ.”ಮೆಡಿಕಲ್ ಹಬ್’ ಖ್ಯಾತಿಯದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯಕಾಲೇಜು ಆಗಬೇಕು ಎಂಬ ಬಹು ದಶಕಗಳಬೇಡಿಕೆ ಕಳೆದ ಬಜೆಟ್‌ನಲ್ಲಿ ಈಡೇರಿತ್ತು.ಆದರೆ ಪೂರ್ಣ ಪ್ರಮಾಣದಲ್ಲಿ ಆಗದೆ ಖಾಸಗಿಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಸರ್ಕಾರಿವೈದ್ಯಕೀಯ ಕಾಲೇಜು ಆದ ಕಾರಣ ಎಲ್ಲರಿಗೂಬೇಸರ ಇದೆ. ಪಿಪಿಪಿ ಮಾದರಿಯಲ್ಲಿ ಸರ್ಕಾರಿವೈದ್ಯಕೀಯ ಕಾಲೇಜು ಪ್ರಾರಂಭಿಸಿದರೆಜನಸಾಮಾನ್ಯರಿಗೆ ಆರ್ಥಿಕ ಹೊರೆ ತಪ್ಪಿದ್ದಲ್ಲ.
ಹೆಸರಿಗೆ ಮಾತ್ರ ಸರ್ಕಾರಿ ಆಗುತ್ತದೆ. ಹಾಗಾಗಿಪೂರ್ಣ ಪ್ರಮಾಣದಲ್ಲೇ ಸರ್ಕಾರಿ ವೈದ್ಯಕೀಯಕಾಲೇಜು ಆಗ ಬೇಕು ಎಂಬ ಆಗ್ರಹ ಇದೆ.ಬೊಮ್ಮಾಯಿಯವರು ಅದಕ್ಕೆ ಸ್ಪಂದಿಸುವರೇಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ.ಒಂದು ಕಡೆ ಭದ್ರಾ ಅಚ್ಚುಕಟ್ಟು, ಇನ್ನೊಂದುಕಡೆ ಮಳೆಯಾಶ್ರಿತ ಪ್ರದೇಶದೊಂದಿಗೆ ಅರೆಮಲೆನಾಡಿನಂತಿರುವ ದಾವಣಗೆರೆ ಜಿಲ್ಲೆಯಲ್ಲಿಕೃಷಿ ಕಾಲೇಜು ಆಗಬೇಕು ಎಂಬ ಒತ್ತಾಯವೂಇದೆ. ಪ್ರತಿ ಬಾರಿಯ ಬಜೆಟ್ ಸಮಯದಲ್ಲಿಕೃಷಿ ಕಾಲೇಜಿಗೆ ಒತ್ತಾಯ ಕೇಳಿ ಬರುತ್ತದೆ. ಆದರೆಈವರೆಗೂ ಬೇಡಿಕೆ ಈಡೇರಿಲ್ಲ. ಈ ಬಾರಿಯಬಜೆಟ್‌ನಲ್ಲಿ ಈಡೇರುವುದೂ ಇಲ್ಲ.
ಏಕೆಂದರೆ ಕೃಷಿಕಾಲೇಜು ಎಂಬ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ.ಹಾಗಾಗಿ ಕೃಷಿ ಕಾಲೇಜು ಆಗುವುದು ಗಾವುದದೂರದ ಮಾತುಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರಮುಖಪಾಲುದಾರಿಕೆ ಹೊಂದಿರುವ ದಾವಣಗೆರೆ ಮತ್ತುಚಿತ್ರದುರ್ಗ ಜಿಲ್ಲೆ ಸೇರಿಕೊಂಡು ಪ್ರತ್ಯೇಕ ಹಾಲುಒಕ್ಕೂಟ (ದಾಮುಲ್) ರಚಿಸಬೇಕು ಎಂಬಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ನೇತೃತ್ವದಸರ್ಕಾರ ಪ್ರತ್ಯೇಕ ಹಾಲು ಒಕ್ಕೂಟವನ್ನು ಬಜೆಟ್‌ನಲ್ಲೇ ಘೋಷಣೆ ಮಾಡಿತ್ತು. ಆದರೆ ಈ ಕ್ಷಣಕ್ಕೂಅದು ಘೋಷಣೆಯಾಗಿಯೇ ಉಳಿದಿದೆ. ರಸ್ತೆಕಾರಣಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಅಸ್ತಿತ್ವಕ್ಕೆಬಂದಿಲ್ಲ.
ಬಸವರಾಜ ಬೊಮ್ಮಾಯಿ ಅವರು ತಮ್ಮಬಜೆಟ್‌ನಲ್ಲಿ ಹಾಲು ಒಕ್ಕೂಟದಸಮಸ್ಯೆ ಇತ್ಯರ್ಥಕ್ಕೆ ದಿಟ್ಟ ಕ್ರಮತೆಗೆದುಕೊಳ್ಳಲೇಬೇಕಾಗಿದೆ.ಮಾಜಿ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ2021ರ ಮಾ. 8ರಂದುಮಂಡಿಸಿದ ಬಜೆಟ್‌ನಲ್ಲಿದಾವಣಗೆರೆಗೆ ಜಯದೇವಹೃದಯರೋಗ ಉಪ ಕೇಂದ್ರದಘೋಷಣೆ ಮಾಡಿದ್ದರು.ಉಪಕೇಂದ್ರ ಆರಂಭದಪ್ರಾರಂಭಿಕ ಹಂತದ ಕಾರ್ಯಗಳನ್ನು ಹೊರತುಪಡಿಸಿದರೆ ಮಹತ್ವದ ಕೆಲಸಗಳು ನಡೆದಿಲ್ಲ.
ಬಜೆಟ್‌ನಲ್ಲಿ ಉಪ ಕೇಂದ್ರದ ಬಗ್ಗೆ ದಿಟ್ಟ ಹೆಜ್ಜೆ ಇಡುವಮೂಲಕ ಬಸವರಾಜ ಬೊಮ್ಮಾಯಿಯವರುಯಡಿಯೂರಪ್ಪ ಅವರ ಘೋಷಣೆಗೆ ಪೂರಕವಾಗಿಸ್ಪಂದಿಸುವ ಮೂಲಕ ವಿವಿಧ ಜಿಲ್ಲೆಯ ಜನರಿಗೆಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.ಜವಳಿ ಮಿಲ್‌ಗಳಿಂದ ಒಂದೊಮ್ಮೆ”ಮ್ಯಾಂಚೆಸ್ಟರ್’ ಖ್ಯಾತಿ ಹೊಂದಿದ್ದದಾವಣಗೆರೆಯಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರಸರ್ಕಾರದಲ್ಲಿ ಮಂಜೂರಾಗಿದ್ದ ಜವಳಿ ಪಾರ್ಕ್‌ಇನ್ನೂ ಹೆಚ್ಚಿನ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.
ಈ ಬಾರಿಯ ಬಜೆಟ್‌ನಲ್ಲಿ ಜವಳಿ ಪಾರ್ಕ್‌ಗೆಇನ್ನಷ್ಟು ಉತ್ತೇಜನ ನೀಡಿದಲ್ಲಿದಾವಣಗೆರೆಯ ಇತಿಹಾಸಒಂದಷ್ಟು ಮರುಕಳಿಸುವ,ಸಾವಿರಾರು ಜನರಿಗೆ ಉದ್ಯೋಗಭದ್ರತೆ ದೊರೆಯಲಿದೆ.ಪ್ರವಾಸೋದ್ಯಮ ಕ್ಷೇತ್ರದಲ್ಲಿಹಿಂದುಳಿದಿರುವ ಜಿಲ್ಲೆಯಲ್ಲಿಪ್ರವಾಸಿ ತಾಣಗಳ ಅಭಿವೃದ್ಧಿ ಕ್ರಮಕೈಗೊಂಡಲ್ಲಿ ಪ್ರವಾಸೋದ್ಯಮದಜೊತೆಗೆ ಜನರ ಆರ್ಥಿಕ ಸ್ಥಿತಿಯೂಉತ್ತಮವಾಗಲಿದೆ. ಕಳೆದಭಾನುವಾರ ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸೋದ್ಯಮಅಭಿವೃದ್ಧಿ ಬಗ್ಗೆ ಮಾತನಾಡಿದ್ದರು. ಬಹು ನಿರೀಕ್ಷಿತದಾವಣಗೆರೆ-ಬೆಂಗಳೂರು ರೈಲ್ವೆ ಯೋಜನೆ,ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯ ತನ್ನ ಪಾಲುನೀಡಲಿ ಎಂಬ ಬೇಡಿಕೆಯೂ ಇದೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.