ಜಯದೇವ ಜಗದ್ಗುರುಗಳ ಕೊಡುಗೆ ಅಪಾರ: ಮುರುಘಾ ಶ್ರೀ


Team Udayavani, Oct 5, 2021, 6:12 PM IST

davanagere news

ದಾವಣಗೆರೆ: ಬಸವ ಚೇತನ ಜಯದೇವಜಗದ್ಗುರುಗಳು ಮಹಾನ್‌ ಕಾರ್ಯಗಳ ಮೂಲಕವೇಮಹಾಸ್ವಾಮಿಗಳಾದವರು ಎಂದು ಚಿತ್ರದುರ್ಗಬೃಹನ್ಮಠದ ಡಾ| ಶಿವಮೂರ್ತಿ ಮುರುಘಾಶರಣರು ಹೇಳಿದರು.

ಸೋಮವಾರ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ69ನೇ ಸ್ಮರಣೋತ್ಸವ ಅಂಗವಾಗಿ ಏರ್ಪಡಿಸಿದ್ದಶ್ರೀ ಜಯದೇವಲೀಲೆ ಪ್ರವಚನ ಮಂಗಲಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಯದೇವ ಶ್ರೀಗಳು ಶೂನ್ಯದಿಂದ, ಅತಿಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದರೂತಮ್ಮ ಅಸಾಮಾನ್ಯ ಸಾಮಾಜಿಕ, ಧಾರ್ಮಿಕ,ಆಧ್ಯಾತ್ಮಿಕ, ಶೈಕ್ಷಣಿಕ ಕಾರ್ಯಗಳ ಮೂಲಕಮಹಾಸ್ವಾಮಿಗಳಾಗಿದ್ದಾರೆ. ಪ್ರತಿಯೊಬ್ಬ ಸ್ವಾಮೀಜಿಮಹಾಸ್ವಾಮಿಗಳಾಗಬೇಕು ಎಂದು ಆಶಿಸಿದರು.

ಜೀವನದಲ್ಲಿ ಸಂದರ್ಭಗಳ ಮೂಲಕ ನಾವುಕಲಿಯುತ್ತಾ, ಬೆಳೆಯುತ್ತಾ ಸಾಗಬೇಕು ಎಂಬುದನ್ನುಜಯದೇವ ಶ್ರೀಗಳು ಬಲ್ಲವರಾಗಿದ್ದರು. ಅವರಿಗೆ ಅಂತಹ ತಾತ್ವಿಕಧಾರೆಯ ಒಳನೋಟದಚಿಂತನೆಯೂ ಸಿದ್ಧಿಸಿತ್ತು. ಹಾಗಾಗಿಯೇ ಅವರುಜನ ಸಾಮಾನ್ಯರ ಕಲ್ಯಾಣಕ್ಕಾಗಿ ಮಹಾನ್‌ ಮತ್ತುಮಹತ್ಕಾರ್ಯಗಳ ಮಾಡಲು ಸಾಧ್ಯವಾಯಿತುಎಂದು ಸ್ಮರಿಸಿದರು.

ಜಯದೇವ ಶ್ರೀಗಳು ಅಸಹಾಯಕರು,ಅಸಹಾಯಕತೆಯಲ್ಲಿ ಇರುವಂತಹ ಮೇಲೆಅನುಭೂತಿ ತೋರುವ ಮೂಲಕ ಮಹಾನ್‌ವಿಭೂತಿಪುರುಷರಾಗಿದ್ದಾರೆ. ಜನಸಾಮಾನ್ಯರುಮಾಡಲಿಕ್ಕೆ ಸಾಧ್ಯವೇ ಇಲ್ಲದಂತಹ ಕಾರ್ಯಮಾಡುವಂತಹ ಧ್ಯೇಯ, ಧೋರಣೆ ವಿಭೂತಿಪುರುಷರಲ್ಲಿತ್ತದೆ. ಪ್ರಸ್ತುತ ವಾತಾವರಣದಲ್ಲಿಮಹತ್ಕಾರ್ಯ ಸಾಧಿಸುವಂತಹ ಮಹಾಸ್ವಾಮೀಜಿ,ಶರಣರು, ಮಾನವರು ಬೇಕಾಗಿದ್ದಾರೆ ಎಂದು ತಿಳಿಸಿದರು.

ಜಯದೇವ ಸ್ವಾಮೀಜಿಯವರ ಗರಡಿಯಲ್ಲಿಬೆಳೆದಂತಹ ಶ್ರೀ ಮಲ್ಲಿಕಾರ್ಜುನಸ್ವಾಮೀಜಿಮತ್ತು ಶ್ರೀ ಜಯವಿಭವ ಸ್ವಾಮೀಜಿ ಮತ್ತು ನಮ್ಮನಡುವೆ ಜಂಗಮಬಳ್ಳಿಯ ಸಂಬಂಧ ಇದೆ. ನಮ್ಮನಡುವಿನ ಅವಿನಾಭಾವ ಸಂಬಂಧ ಬಳಿವಿದಿರು ಸಂಬಂಧದ ಪ್ರತೀಕ. ದಾವಣಗೆರೆಯಲ್ಲಿನಡೆಯುತ್ತಿದ್ದ ಜಯದೇವಲೀಲೆ ಪ್ರವಚನ ಕೇಳಲುಮಲ್ಲಿಕಾರ್ಜುನ ಸ್ವಾಮೀಜಿಯವರೊಂದಿಗೆಆಗಮಿಸುತ್ತಿದ್ದಂತಹ ನಾವು ಅವರ ಪಾದತಳದಲ್ಲಿಕುಳಿತು ಪ್ರವಚನ ಆಲಿಸುತ್ತಿದ್ದೆವು. ಮಲ್ಲಿಕಾರ್ಜನಸ್ವಾಮೀಜಿಯವರು ಆಶೀರ್ವಚನ ನೀಡುವಸಂದರ್ಭದಲ್ಲಿ ಕಂಬನಿ ಹರಿಯುತ್ತಿತ್ತು.

ಆ ಕಂಬನಿ ಜಯದೇವ ಜಗದ್ಗುರುಗಳ ಕಾರ್ಯಧಾರೆ,ಕ್ರಿಯಾಶೀಲತೆಯ ಬಾಂಧವ್ಯವನ್ನು ಮೆಲುಕುಹಾಕುವಂತಿರುತ್ತಿತ್ತು. ಮಲ್ಲಿಕಾರ್ಜುನಸ್ವಾಮೀಜಿಯವರು ಜಯದೇವ ಲೀಲೆಪ್ರವಚನವನ್ನು “ಕಣ್ಣು ತೊಳೆಯುವ ಹಬ್ಬ’ಎಂದೇ ಕರೆಯುತ್ತಿದ್ದರು. ಅವರೊಂದಿಗಿನ ನಮ್ಮಒಡನಾಡಿತನ ಕಂಬನಿ ತರಿಸುತ್ತದೆ ಎಂದು ತಮಗೆಹೇಳುತ್ತಿದ್ದರು ಎಂದರು.

ಆಕಾಶದಲ್ಲಿ ಮಾತ್ರ ಮಿಂಚಿನ ಬಳ್ಳಿ ಸಂಭವಿಸುತ್ತದೆ. ಜಯದೇವ ಜಗದ್ಗುರುಗಳವರುಮಿಂಚಿನ ಬಳ್ಳಿಯನ್ನು ಅರ್ಥ ಮಾಡಿಕೊಂಡುತಮ್ಮ ಜೀವಿತಾವಧಿಯಲ್ಲಿ ಅದ್ವಿತೀಯ,ಅಸಾಮಾನ್ಯ ಸಾಧನೆಯ ಮಾಡಿದಂತಹವರು.ಸಂಸಾರ ಮತ್ತು ಜಂಗಮ ಹಾಗೂ ಮಿಂಚಿನಬಳ್ಳಿಯ ಸಂಗಮವಾಗಿರಬೇಕು ಎಂದು ಶರಣರುಪ್ರತಿಪಾದಿಸಿದರು.

ಜಯದೇವ ಜಗದ್ಗುರುಗಳವಸ್ಮರಣೋತ್ಸವದ ಅಂಗವಾಗಿ ಪ್ರತಿ ವರ್ಷಜಯದೇವಲೀಲೆ ಪ್ರವಚನ ನಡೆಸಿ ಕೊಂಡುಬರಲಾಗುತ್ತಿದೆ. ಮುಂದಿನ ವರ್ಷದಿಂದ ಮೂರುದಿನಗಳ ಬದಲಿಗೆ 4-5 ದಿನಗಳ ಕಾಲ ಪ್ರವಚನನಡೆಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಫೈರಿಂಗ್

ಸಮ್ಮುಖ ನುಡಿಗಳಾಡಿದ ದಾವಣಗೆರೆವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ,ಜನನ ಮತ್ತು ಮರಣ ಎಂಬ ಮೂರುಅಕ್ಷರಗಳ ನಡುವಿನ ಮೂರು ಅಕ್ಷರದ ಜೀವನಸಾರ್ಥಕತೆ ಪಡೆಯುವಂತೆ ನಡೆದುಕೊಳ್ಳಬೇಕು.ಜೀವಿತಾವಧಿಯಲ್ಲಿ ದೇಶ ಮತ್ತು ಸಮಾಜಕ್ಕೆಅತ್ಯುತ್ತಮ ಕಾಣಿಕೆ ನೀಡಬೇಕು. ಅಂತಹಮಹಾನ್‌ ಕಾರ್ಯಗಳಿಂದಾಗಿಯೇ ವಿಶ್ವಗುರುಗಳಸಾಲಿನಲ್ಲಿ ಶ್ರೀ ಜಯದೇವ ಜಗದ್ಗುರುಗಳ ಹೆಸರುಇದೆ. ಅವರೊಬ್ಬ ಮಿಂಚುವ ಮಾಣಿಕ್ಯ ಎಂದುಬಣ್ಣಿಸಿದರು.ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿಜಯದೇವ ಜಗದ್ಗುರುಗಳವರು ಲೆಕ್ಕ ಹಾಕಲುಸಾಧ್ಯವಾಗದಷ್ಟು ಅಗಣಿತ ಮಹತ್ಕಾರ್ಯಮಾಡಿದ್ದಾರೆ. ದೇಶ ಮತ್ತು ಸಮಾಜದ ಅಭಿವೃದ್ಧಿಶಿಕ್ಷಣದಿಂದ ಮಾತ್ರ  ಸಾಧ್ಯ ಎಂಬುದನ್ನುಮನಗಂಡು ಸ್ವಾತಂತ್ರ್ಯ ಪೂರ್ವದಲ್ಲೇ ಉಚಿತಪ್ರಸಾದ ನಿಲಯಗಳನ್ನು ಸ್ಥಾಪಿಸಿದವರು.
ಎಲ್ಲ ಮಠಗಳಿಂತಲೂ ಮೊದಲೇ ಅಡುಗೆಮನೆಯಲ್ಲಿ ಒಲೆಯನ್ನ ಹತ್ತಿಸಿ ಮಕ್ಕಳಿಗೆ ಅನ್ನ,ಅಕ್ಷರ, ಅರಿವಿನ ದಾಸೋಹ ಉಣಬಡಿಸಿವರು.ಎಲ್ಲರೂ ಅವರಂತೆ ಸಮಾಜಮುಖೀ ಕಾರ್ಯಗಳನ್ನುಮಾಡಬೇಕು ಎಂದರು.

ಅಥಣಿ ಗಚ್ಚಿನಮಠದಶ್ರೀ ಶಿವಬಸವ ಸ್ವಾಮೀಜಿ, ಗುರುಮಠಕಲ್‌ನ ಶ್ರಿಶಾಂತವೀರ ಸ್ವಾಮೀಜಿ, ಚನ್ನಗಿರಿಯ ಶ್ರೀ ಜಯಬಸವಚಂದ್ರ ಸ್ವಾಮೀಜಿ, ಹಾವೇರಿಯ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಇತರರು ಇದ್ದರು. ಎಸ್‌.ಓಂಕಾರಪ್ಪ ಸ್ವಾಗತಿಸಿದರು. ಫಾರೂಖ್‌ ಉಲ್ಲ ನಿರೂಪಿಸಿದರು.

 

ಟಾಪ್ ನ್ಯೂಸ್

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.