ಕ್ಷಯ ರೋಗ ದಿನಾಚರಣೆ ಇಂದು
Team Udayavani, Mar 24, 2022, 2:43 PM IST
ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾ. 24 ರಂದು ವಿಶ್ವಕ್ಷಯರೋಗ ದಿನ ಆಚರಿಸಲಾಗುವುದುಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿ ಡಾ|ನಾಗರಾಜ್ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, 1882ರಮಾ. 24ರಂದು ಜರ್ಮನಿಯವಿಜ್ಞಾನಿ ರಾಬರ್ಟ್ ಕಾಕ್ ಮೈಕೋಬ್ಯಾಕೀrರಿಯಂ ಟ್ಯೂಬರ್‌ಕ್ಯೂಲೇಸಿಸ್‌ನಿಂದ ಕ್ಷಯ ಬರುತ್ತದೆ ಎಂದುಕಂಡು ಹಿಡಿದ ಹಿನ್ನೆಲೆಯಲ್ಲಿ ಪ್ರತಿವರ್ಷ ಮಾ. 24ರಂದು ವಿಶ್ವ ಕ್ಷಯರೋಗ ದಿನ ಆಚರಿಸಲಾಗುವುದು.
ಈ ವರ್ಷ “ಕ್ಷಯ ಕೊನೆಗೊಳಿಸಲುಹೂಡಿಕೆ ಮಾಡಿ, ಜೀವಗಳನ್ನು ಉಳಿಸಿ’ಎಂಬ ಘೋಷವಾಕ್ಯದೊಂದಿಗೆಆಚರಿಸಲಾಗುವುದು ಎಂದರು.ವಿಶ್ವ ಕ್ಷಯರೋಗ ದಿನದ ಅಂಗವಾಗಿಗುರುವಾರ ಬೆಳಗ್ಗೆ 7ಕ್ಕೆ ನಿಜಲಿಂಗಪ್ಪಬಡಾವಣೆಯಿಂದ ಹಮ್ಮಿಕೊಂಡಿರುವಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಚಾಲನೆನೀಡುವರು. ಜಿಲ್ಲಾ ರಕ್ಷಣಾಧಿಕಾರಿಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯತ್‌ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ|ಚನ್ನಪ್ಪ ಇತರರು ಭಾಗವಹಿಸುವರು.ಸೈಕಲ್ ಜಾಥಾ ಶಿವಾಲಿ ಚಿತ್ರಮಂದಿರರಸ್ತೆ, ಹೊಂಡದ ವೃತ್ತ, ದೊಡ್ಡಪೇಟೆಮೂಲಕ ಜಿಲ್ಲಾ ಆಸ್ಪತ್ರೆ ಆವರಣದಲ್ಲಿಮುಕ್ತಾಯವಾಗಲಿದೆ. ಸಂಜೆ 6.30ಕ್ಕೆರಾಂ ಅಂಡ್ ಕೋ ವೃತ್ತದಲ್ಲಿ ದೀಪಬೆಳಗಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆಎಂದು ಹೇಳಿದರು.
ಯಾವ ವ್ಯಕ್ತಿಯಲ್ಲಿ 15 ದಿನಗಳಿಗೂಹೆಚ್ಚು ಕಾಲ ಕೆಮ್ಮು, ಮಧ್ಯಾಹ್ನದ ವೇಳೆಜ್ವರ, ರಾತ್ರಿ ವಿಪರೀತ ಬೆವರುವುದುಮತ್ತು ತೂಕ ಕಡಿಮೆಯಾಗುವಲಕ್ಷಣಗಳು ಕಂಡು ಬಂದಲ್ಲಿ ಕೂಡಲೇಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರಾರಂಭಿಕಹಂತದಲ್ಲೇ ಕ್ಷಯವನ್ನು ಗುರುತಿಸಿ ಚಿಕಿತ್ಸೆನೀಡುವುದರಿಂದ ಸಂಪೂರ್ಣವಾಗಿಗುಣಪಡಿಸಬಹುದು. 4 ಸಾವಿರವರ್ಷಗಳ ಇತಿಹಾಸ ಹೊಂದಿರುವಕ್ಷಯದಿಂದ ಸಾಕಷ್ಟು ಜನ ಸಾಯುವಕಾಲ ಇತ್ತು. ಈಗ ಉತ್ತಮ ಚಿಕಿತ್ಸೆ ಇದೆ.ಒಬ್ಬ ಕ್ಷಯ ರೋಗಿ ವರ್ಷದಲ್ಲಿ 10-15ರಿಂದ ಜನ ರಿಗೆ ಕ್ಷಯ ಹರಡಬಲ್ಲ.ಹಾಗಾಗಿ ಜಾಗ್ರತೆ ವಹಿಸಬೇಕು. ಸಕ್ಕರೆಕಾಯಿಲೆ, ಎಚ್‌ಐವಿ ಇದ್ದವರನ್ನು ಹೆಚ್ಚಾಗಿಬಾಧಿಸುತ್ತದೆ.
2025ರ ವೇಳೆಗೆ ಕ್ಷಯಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿನರೇಂದ್ರ ಮೋದಿ ಕರೆ ನೀಡಿದ್ದಾರೆ. ಆಗುರಿ ತಲುಪುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿಸಾಕಷ್ಟು ಕಾರ್ಯ ಚಟುವಟಿಕೆ ನಡೆಯುತ್ತಿವೆಎಂದರು.ಡಾ| ನಟರಾಜ್ ಮಾತನಾಡಿ,ದಾವಣಗೆರೆ ಜಿಲ್ಲೆಯ ಆಯ್ದ10 ಗ್ರಾಮಗಳಲ್ಲಿ ಫೆ. 21ರಿಂದಮಾ.13ರವರೆಗೆ 9,500 ಮನೆಗಳಿಗೆ ಭೇಟಿನೀಡಿ 464 ಜನರ ಕಫ ಪರೀಕ್ಷೆ ನಡೆಸಿದಾಗ9 ಪ್ರಕರಣಗಳು ಪತ್ತೆಯಾಗಿವೆ. ಕ್ಷಿಪ್ರವಾಗಿಕ್ಷಯ ಪರೀಕ್ಷೆ ನಡೆಸಿದ ಕಾರಣಕ್ಕೆದಾವಣಗೆರೆ ಜಿಲ್ಲೆಗೆ ಕೇಂದ್ರ ಸರ್ಕಾರದಕಂಚಿನ ಪದಕ ದೊರೆತಿದೆ ಎಂದುತಿಳಿಸಿದರು. ಡಾ| ಸುರೇಶ್ ಬಾರ್ಕಿಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.