ಏ. 9ರಂದು “ಪರ್ವ’ ನಾಟಕ ಪ್ರದರ್ಶನ
Team Udayavani, Mar 30, 2022, 7:39 PM IST
ದಾವಣಗೆರೆ: ಮೈಸೂರಿನರಂಗಾಯಣವು ಇಲ್ಲಿನ ವೃತ್ತಿರಂಗಭೂಮಿ ರಂಗಾಯಣ ಹಾಗೂಚಿರಂತನ ಸಾಂಸ್ಕೃತಿಕ ಸಂಸ್ಥೆಗಳಸಹಯೋಗದಲ್ಲಿ ಏಪ್ರಿಲ್ 9ರಂದುನಗರದ ಗುಂಡಿ ಮಹಾದೇವಪ್ಪಕಲ್ಯಾಣಮಂಟಪದಲ್ಲಿ “ಪರ್ವ’ಮಹಾರಂಗ ಪ್ರಯೋಗ ಪ್ರದರ್ಶನನಡೆಯಲಿದೆ ಎಂದು ಮೈಸೂರುರಂಗಾಯಣದ ನಿರ್ದೇಶಕ ಅಡ್ಡಂಡಸಿ. ಕಾರ್ಯಪ್ಪ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, “ಪರ್ವ’ ನಾಟಕಪ್ರದರ್ಶನ ಏಪ್ರಿಲ್ 9ರಂದು ಸಂಜೆ4ರಿಂದ ರಾತ್ರಿ 11:30 ಗಂಟೆವರೆಗೆನಡೆಯಲಿದೆ.
ಇದು ಸಾಹಿತಿ ಎಸ್.ಎಲ್.ಬೈರಪ್ಪ ವಿರಚಿತ, ಪ್ರಕಾಶ ಬೆಳವಾಡಿನಿರ್ದೇಶಿಸಿರುವ ನಾಟಕವಾಗಿದ್ದು,ನಾಲ್ಕು ಊಟ, ಚಹಾ ವಿರಾಮಗಳುಸೇರಿದಂತೆ ಎಂಟು ಗಂಟೆಗಳ ಕಾಲಪ್ರದರ್ಶನಗೊಳ್ಳಲಿದೆ ಎಂದರು.ಮಹಾ ರಂಗಪ್ರಯೋಗ”ಪರ್ವ’ ರಾಜ್ಯದ ಬೇರೆ ಬೇರೆಜಿಲ್ಲೆಗಳಲ್ಲಿ, ರಾಷ್ಟ್ರದ ಐದು ಪ್ರಮುಖಸ್ಥಳಗಳಲ್ಲಿ ಪ್ರದರ್ಶನಗೊಳ್ಳಬೇಕೆಂಬಯೋಜನೆಯನ್ನು ರಂಗಾಯಣರೂಪಿಸಿದೆ. 35ಕ್ಕೂ ಹೆಚ್ಚು ಕಲಾವಿದರುಇದರಲ್ಲಿ ತೊಡಗಿಕೊಂಡಿದ್ದಾರೆ.
ಪ್ರದರ್ಶನಕ್ಕೆ ಎರಡು ನೂರು ರೂ.ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.ಆಸಕ್ತರು ಜಿಲ್ಲಾಡಳಿತ ಭವನದ ಕನ್ನಡಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ,ಚಿಂದೋಡಿ ಲೀಲಾ ಕಲಾಕ್ಷೇತ್ರದ ವೃತ್ತಿರಂಗಭೂಮಿ ರಂಗಾಯಣ ಕಚೇರಿ,ಶಂಕರಲೀಲಾ ಗ್ಯಾಸ್ ಏಜೆನ್ಸಿ, ಆಹಾರ್-2000, ರಸವಂತಿ ಕೋಲ್‌ಡ್ರಿಂಕ್ಸ್,ಶರಭೇಶ್ವರ ಹೋಟೆಲ್, ಕೊಟ್ಟೂರೇಶ್ವರಬೆಣ್ಣೆ ದೋಸೆ ಹೊಟೇಲ್, ಲವ್‌ಫುಡ್ಸ್‌ನಲ್ಲಿ ಟಿಕೆಟ್ ಪಡೆಯಬಹುದು.ಜೊತೆಗೆ ಆನ್‌ಲೈನ್ ಮೂಲಕ ಟಿಕೆಟ್‌ಪಡೆಯಬಹುದಾಗಿದೆ ಎಂದು ವಿವರಿಸಿದರು.
ವೃತ್ತಿ ರಂಗಭೂಮಿ ರಂಗಾಯಣದಯಶವಂತ ಸರದೇಶಪಾಂಡೆ, ಕನ್ನಡಮತ್ತು ಸಂಸ್ಕೃತಿ ಇಲಾಖೆ ಸಹಾಯಕನಿರ್ದೇಶಕ ರವಿಚಂದ್ರ, ಚಿರಂತನಸಂಸ್ಥೆಯ ದೀಪಾ ಎನ್. ರಾವ್‌ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.