ಸರ್ಕಾರಿ ಶಾಲೆ ಸಂರಕ್ಷಣೆಗೆ ಬದ್ಧ
Team Udayavani, Jun 15, 2022, 3:32 PM IST
ದಾವಣಗೆರೆ: ಆಧುನಿಕ ಯುಗದಲ್ಲಿ ಹಣಕ್ಕಿಂತಲೂ ಶಿಕ್ಷಣ ಅತ್ಯಂತ ಮುಖ್ಯ. ಹಾಗಾಗಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕರೆ ನೀಡಿದರು.ತಾಲೂಕಿನ ಹಳೆ ಬಿಸಲೇರಿ ಗ್ರಾಮದಲ್ಲಿ ದಾನಿಗಳಾದಗೌರಮ್ಮ ಕುಂದೂರು ವೀರಭದ್ರಪ್ಪ ಟ್ರಸ್ಟ್ ಹಾಗೂಕುಂದೂರು ಕನ್ಸಟ್ರಕ್ಷನ್ ನಿರ್ಮಿಸಿರುವ ನೂತನ ಶಾಲಾ ಕಟ್ಟಡದ ಹಸ್ತಾಂತರ ಸಮಾರಂಭದಲ್ಲಿ ಅವರುಮಾತನಾಡಿದರು.
ರಾಜ್ಯಾದ್ಯಂತ ಅವಶ್ಯಕತೆ ಇರುವಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡದೊಂದಿಗೆಮೂಲ ಸೌಲಭ್ಯಗಳನ್ನು ನೀಡಿ ಗುಣಮಟ್ಟದಶಿಕ್ಷಣ ನೀಡುವ ಧ್ಯೇಯವನ್ನು ಸರ್ಕಾರ ಹೊಂದಿದೆಎಂದರು.ಈ ಹಿಂದೆ ಗ್ರಾಮಗಳಲ್ಲಿ ಶಾಲೆಗೆ ಬೇಕಾದ ಅಗತ್ಯಮೂಲ ಸೌಲಭ್ಯಗಳನ್ನು ಗ್ರಾಮಸ್ಥರೇ ಒದಗಿಸುತ್ತಿದ್ದರು.ಗುರುಕುಲ ಪದ್ಧತಿಯಲ್ಲಿ ಋಷಿ ಮುನಿಗಳಿಗೆ ರಾಜರುಕಲಿಕೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದರು.
ಮುಂದುವರಿದ ಭಾಗದಂತೆ ಸರ್ಕಾರಿ ಶಾಲೆಯನ್ನುದತ್ತು ಪಡೆದು ಅಭಿವೃದ್ಧಿಗೊಳಿಸಿ ಸುಸಜ್ಜಿತಕಟ್ಟಡಗಳನ್ನು ನಿರ್ಮಿಸಿ ತಾನು ಹುಟ್ಟಿದ ನೆಲಕ್ಕೆ ಕೊಡುಗೆ ನೀಡಿದ ಕೆ.ವಿ. ಬಸವನಗೌಡ ಹಾಗೂ ಅವರಕುಟುಂಬದವರ ಸಾಮಾಜಿಕ ಸೇವಾ ಕಾರ್ಯವನ್ನುಎಲ್ಲರೂ ಸ್ಮರಿಸಲೇಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ರೂಪಿಸಿರುವ ನೂತನರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಿಳಿಸಿರುವಂತೆ ಸ್ಕೂಲ್‌ಕಾಂಪ್ಲೆಕ್ಸ್ ಎನ್ನುವ ಅಂಗನವಾಡಿ ಒಳಗೊಂಡ ಶಾಲಾ ಪರಿಕಲ್ಪನೆಯನ್ನು ಮೊದಲ ಬಾರಿಗೆ ಹಳೆಬಿಸಲೇರಿಯ ನೂತನ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಅಳವಡಿಸಿಕೊಂಡು ಕಟ್ಟಡ ನಿರ್ಮಾಣಮಾಡಿರುವುದು ಉತ್ತಮ ಆಲೋಚನೆಯಾಗಿದೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.