ದಣಿವರಿಯದ ಕೊರೊನಾ ಸೇನಾನಿ ಶಾಸಕ ರೇಣುಕಾಚಾರ್ಯ!
Team Udayavani, Oct 19, 2021, 5:20 PM IST
ಹೊನ್ನಾಳಿ: ಕೊರೊನಾ ಮಹಾಮಾರಿ ಜನರನ್ನುಕಾಡುತ್ತಿದ್ದ ವೇಳೆ ಜನರ ಕಣ್ಣಿರು ಒರೆಸಿ ಅವರಕಷ್ಟಕ್ಕೆ ಸ್ಪಂದಿಸಿದ ಜನಾನುರಾಗಿ ಶಾಸಕರಲ್ಲಿ ಎಂ.ಪಿ.ರೇಣುಕಾಚಾರ್ಯ ಅವರೂ ಒಬ್ಬರು.ಇಂದು ಕೊರೊನಾ ಕಡಿಮೆಯಾಗುತ್ತಿದ್ದರೂಅದು ಸಂಪೂರ್ಣವಾಗಿ ನಿವಾರಣೆಯಾಗಿಲ್ಲ.
ಆದರೆಈ ಸಾಂಕ್ರಾಮಿಕ ಎಲ್ಲೆಡೆ ತನ್ನ ಕಬಂಧಬಾಹುಗಳನ್ನುಚಾಚಿದ್ದ ಸಮಯದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ,ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕೈಗೊಂಡಕಾರ್ಯ ಮಾತ್ರ ಅನನ್ಯ.ಸೋಂಕು ಹೆಚ್ಚುತ್ತಿದ್ದಂತೆ ತಮ್ಮ ಕ್ಷೇತ್ರ ಹೊನ್ನಾಳಿಹಾಗೂ ನ್ಯಾಮತಿ ತಾಲೂಕಿನ ಪ್ರತಿ ಗ್ರಾಮಗಳಿಗೆನಿರಂತರವಾಗಿ ಭೇಟಿ ನೀಡಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದರು.
ಅಸಂಘಟಿತ ಕಾರ್ಮಿಕರು, ಬಡವರು,ಗೃಹ ರಕ್ಷಕದಳ, ಪೊಲೀಸ್ ಹಾಗೂ ಇತರ ಸರ್ಕಾರಿನೌಕರರಿಗೆ ಮಧ್ಯಾಹ್ನದ ಉಚಿತ ಊಟ, ನಿರ್ಗತಿಕರಿಗೆಉಚಿತ ಔಷ ಧ, ಆಹಾರ ಕಿಟ್ ಸೇರಿದಂತೆಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರ ಕೈ ಹಿಡಿದುಅವರ ಸಂಕಷ್ಟಕ್ಕೆ ಸ್ಪಂದಿಸಿದರು.ಎರಡುಬಾರಿ ಕೊರೊನಾ ಪಾಸಿಟಿವ್ ಬಂದಾಗಲೂಕೆಲವೇ ದಿನ ಮನೆಯಲ್ಲಿ ವಿಶ್ರಾಂತಿ ಪಡೆದುಮತ್ತೆ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿಜಾಗೃತಿ ಮೂಡಿಸಿದರು.
ಎರಡನೇ ಅಲೆ ಅಪ್ಪಳಿಸಿದಸಂದರ್ಭದಲ್ಲಿ ಪ್ರತಿನಿತ್ಯ ಆಸ್ಪತ್ರೆಯ ಕೊರೊನಾ ವಾಡ್ìಗೆ ಹೋಗಿ ಪ್ರತಿಯೊಬ್ಬ ರೋಗಿಗಳನ್ನು ಮಾತನಾಡಿಸಿಆತ್ಮಸ್ಥೈರ್ಯ ತುಂಬಿದರು. ಸ್ವತಃ ಆಂಬ್ಯುಲೆನ್ಸ್‌ಚಾಲಕರಾಗಿ ಮೃತಪಟ್ಟ ಸೋಂಕಿತರ ಶವಗಳನ್ನುಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದರು.ಇವರ ಕಾರ್ಯಕ್ಕೆ ಇಡೀ ರಾಜ್ಯದ ಜನರಿಂದ ಅಲ್ಲದೆ ದೇಶವಿದೇಶಗಳಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರೆನ್ನದೆ ಕೊರೊನಾದಿಂದಯಾರೇ ಮೃತಪಟ್ಟರೂ ಅವರ ದೇಹವನ್ನುಅವರವರ ಧರ್ಮದ ಅನುಸಾರವಾಗಿಅಂತ್ಯಕ್ರಿಯೆ ಮಾಡಿಸಿ ಮಾನವೀಯತೆ ಮೆರೆದಿದ್ದರು.
ಕೊರೊನಾದಿಂದ ಮನೆಯಯಜಮಾನ ಮೃತಪಟ್ಟು ದಿಕ್ಕು ಕಾಣದೆ ಮನೆಮಂದಿ ಗೋಳಾಡುತ್ತಿರುವುದನ್ನು ಕಂಡು ಕಣ್ಣೀರಿಟ್ಟುಕುಟುಂಬಸ್ಥರಿಗೆ ಸಮಾಧಾನ ಹೇಳಿ ಧನ ಸಹಾಯಮಾಡಿ ಆ ಕುಟುಂಬಕ್ಕೆ ಶಕ್ತಿ ತುಂಬಿದ ಜನಾನುರಾಗಿಶಾಸಕರು ಇವರು.
75 ಜನರ ಪ್ರಾಣ ಉಳಿಸಿದ ಪ್ರಜ್ಞಾವಂತ : ಎರಡನೇಅಲೆಯಲ್ಲಿ ಕೊರೊನಾ ಉಲ್ಬಣಗೊಂಡಿದ್ದ ವೇಳೆಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ದಿಢೀರ್ ಆಕ್ಸಿಜನ್‌ಖಾಲಿಯಾಗಿತ್ತು. ಎರಡು ಬಾರಿ 75 ಸೋಂಕಿತರುಜೀವನ್ಮರಣ ಹೋರಾಟದಲ್ಲಿದ್ದಾಗ ವೈದ್ಯರು ಆಕ್ಸಿಜನ್‌ಇಲ್ಲ ಎಂದು ಕೈಚೆಲ್ಲಿದರು. ಆಗ ಕೊರೊನಾ ಬಗ್ಗೆ ಸಭೆನಡೆಸುತ್ತಿದ್ದ ರೇಣುಕಾಚಾರ್ಯರು ಸಭೆ ಮೊಟಕುಗೊಳಿಸಿತಕ್ಷಣ ಹರಿಹರ ಸದರನ್ ಗ್ಯಾಸ್ ಏಜೆನ್ಸಿಗೆ ಹೋಗಿಆಕ್ಸಿಜನ್ ತಂದರು.
ಮತ್ತೂಮ್ಮೆ ಭದ್ರಾವತಿಯಸದರನ್ ಗ್ಯಾಸ್ ಏಜನ್ಸಿಗೆ ರಾತ್ರೋರಾತ್ರಿ ಹೋಗಿಆಕ್ಸಿಜನ್ ತಂದು 75 ಜನರ ಪ್ರಾಣ ಉಳಿಸಿದರು.ಬೆಳಗಿನ ಉಪಹಾರ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಕೊರೊನಾ ಪೀಡಿತರು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೋಗಿಗಳು, ಪೊಲೀಸರು, ಆರೋಗ್ಯ ಇಲಾಖೆಯ ನೌಕರರಿಗೆ ಸೇರಿದಂತೆ ಇತರರಿಗೆ ಪ್ರತಿದಿನ ಸುಮಾರು ಎರಡರಿಂದ ಮೂರು ಸಾವಿರ ಜನರಿಗೆ ಉಪಹಾರದವ್ಯವಸ್ಥೆ ಮಾಡಿ ಸ್ವತಃ ಬಡಿಸುವ ಮೂಲಕ ಅನ್ನದಾತಎನಿಸಿಕೊಂಡವರು.
ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ದಿನದಿಂದದಿನಕ್ಕೆ ನೂರಾರು ಕೊರೊನಾ ಸೋಂಕಿತರಿಗೆ ಆಸ್ಪತ್ರೆಗೆದಾಖಲಾಗುತ್ತಿದ್ದಾಗ ಬೆಡ್‌ಗಳ ಕೊರತೆ ಉಂಟಾದಾಗ ತಕ್ಷಣ ಅರಬಗಟ್ಟೆ ವಸತಿ ನಿಲಯವನ್ನು 800 ಬೆಡ್‌ಗಳಕೊರೊನಾ ಕೇರ್ ಸೆಂಟರ್ ಅನ್ನು ಪ್ರಾರಂಭಿಸಿದರು.ಆ ಸೆಂಟರ್‌ನಲ್ಲಿ ಪ್ರತಿದಿನ ದಾಖಲಾಗುವವರಸಂಖ್ಯೆ ದ್ವಿಗುಣಗೊಳ್ಳುತ್ತಿದ್ದಂತೆ ಅವರಿಗೆಲ್ಲ ಪ್ರತಿನಿತ್ಯಊಟ ಉಪಹಾರ ವ್ಯವಸ್ಥೆ ಮಾಡಿದರು.
ಕೇಂದ್ರದಲ್ಲಿಮನರಂಜನಾ ಕಾರ್ಯಕ್ರಮ ಆಯೋಜಿಸಿ ಒಂದು ತಿಂಗಳಕಾಲ ಅವರೇ ಕೇಂದ್ರದಲ್ಲಿ ವಾಸ್ತವ್ಯ ಮಾಡಿದರು.ಸೋಂಕಿತರಿಗೆ ಯೋಗ ಕಲಿಸಿದರು.ಪಕ್ಷಾತೀತ ಕಾರ್ಯಕ್ಕೆ ಪ್ರಶಂಸೆ ಸುರಿಮಳೆ:ರೇಣುಕಾಚಾರ್ಯರ ಬಗ್ಗೆ ದೇಶ-ವಿದೇಶಗಳಲ್ಲಿ,ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆವ್ಯಕ್ತವಾಯಿತು. ವಿವಿಧ ಪಕ್ಷದ ಮುಖಂಡರು ಸಹ ಅವರಸೇವಾಕಾರ್ಯವನ್ನು ಮೆಚ್ಚಿ ಮಾತನಾಡಿದರು. ಮಾಜಿಸಿಎಂ ಯಡಿಯೂರಪ್ಪ ಅವರು “ರಾಜ್ಯದ ಮಾದರಿಶಾಸಕ’ ಎಂದು ಹೊಗಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.