ಬೆಳಕಿನ ಹಬ್ಬದಲ್ಲಿ ಹಸಿರು ಪಟಾಕಿ ಬಳಸಿ
Team Udayavani, Oct 26, 2021, 1:41 PM IST
ದಾವಣಗೆರೆ: ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಮಾತ್ರ ಮಾರಾಟ ಮಾಡಲು ಅವಕಾಶ ಇದ್ದು,ಸಾರ್ವಜನಿಕರು ಹಸಿರು ಪಟಾಕಿ ಬಳಸಬೇಕು.ಕಟ್ಟುನಿಟ್ಟಾಗಿ ಕೊರೊನಾ ಮಾರ್ಗಸೂಚಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು. ಕೊರೊನಾ ಸೋಂಕುತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿ ಹಬ್ಬದ ಆಚರಣೆಗೆರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳನ್ನುಪಾಲಿಸಬೇಕು.
ಸಾರ್ವಜನಿಕರು ಬೆಳಕಿನಹಬ್ಬವಾಗಿರುವ ದೀಪಾವಳಿಯನ್ನು ಸರಳ, ಶ್ರದ್ಧಾ ಭಕ್ತಿಹಾಗೂ ಸುರಕ್ಷಿತವಾಗಿ ಆಚರಿಸಬೇಕು ಎಂದರು.
ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರುಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂಬಳಸುವಂತಿಲ್ಲ. ಪಟಾಕಿಗಳ ಮಾರಾಟ ಹಾಗೂ ಬಳಕೆಕುರಿತಂತೆ ಕೇಂದ್ರ ಸರ್ಕಾರದ ಸ್ಫೋಟಕ ವಸ್ತುಗಳಉಪ ಮುಖ್ಯ ನಿಯಂತ್ರಕರು ಕಳೆದ ಅ. 12 ರಂದುಮಾರ್ಗಸೂಚಿ ಹೊರಡಿಸಿದ್ದಾರೆ.
ಇದರ ಅನ್ವಯಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಸಿರುಪಟಾಕಿ ಹೊರತುಪಡಿಸಿ ಬೇರೆ ಯಾವುದೇ ಪಟಾಕಿಮಾರಾಟ ಮಾಡುವಂತಿಲ್ಲ ಎಂದು ಮಾರಾಟಗಾರರಿಗೆ ಸೂಚಿಸಿದರು.
ಸಂಬಂಧಪಟ್ಟ ಇಲಾಖೆ, ಪ್ರಾ ಧಿಕಾರಗಳಿಂದಅಧಿಕೃತ ಪರವಾನಗಿ ಪಡೆದವರು ಮಾತ್ರ ಪಟಾಕಿಮಾರಾಟ ಮಾಡಬೇಕು. ಪಟಾಕಿ ಮಾರಾಟದಮಳಿಗೆಗಳನ್ನು ನಿಗದಿತ ಸ್ಥಳದಲ್ಲಿ ಮಾತ್ರ ನ. 2 ರಿಂದ6 ರವರೆಗೆ ಮಾತ್ರ ತೆರೆದಿರಬೇಕು. ಬೇರೆ ಸ್ಥಳದಲ್ಲಿಮತ್ತು ದಿನಾಂಕಗಳಲ್ಲಿ ಅಂಗಡಿ ತೆರೆಯಬಾರದು.
ಹಸಿರು ಪಟಾಕಿ ಹೊರತುಪಡಿಸಿ ಯಾವುದೇ ಬಗೆಯಪಟಾಕಿ ಮತ್ತು ಅನಧಿಕೃತವಾಗಿ ಪಟಾಕಿ ಮಾರಾಟಕಂಡುಬಂದಲ್ಲಿ ಪಟಾಕಿಗಳನ್ನು ಜಪ್ತಿ ಮಾಡಿ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ದಾವಣಗೆರೆಯಲ್ಲಿ 70, ಹರಿಹರದಲ್ಲಿ 15,ಮಲೆಬೆನ್ನೂರಿನಲ್ಲಿ 7, ನ್ಯಾಮತಿಯಲ್ಲಿ 4,ಚನ್ನಗಿರಿಯಲ್ಲಿ 7, ಜಗಳೂರಿನಲ್ಲಿ 2 ಸೇರಿದಂತೆ ಒಟ್ಟು105 ಅರ್ಜಿಗಳು ಸ್ವೀಕೃತಗೊಂಡಿವೆ. ದಾವಣಗೆರೆಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆ ಇಡಲುಅವಕಾಶ ಕಲ್ಪಿಸಲಾಗಿದೆ. ಮಳಿಗೆಗಳಲ್ಲಿ ಸುರಕ್ಷತಾಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ,ಹಬ್ಬ ಆಚರಣೆ ಭರದಲ್ಲಿ ಸುರಕ್ಷತೆ ಮರೆಯಬಾರದು.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪಟಾಕಿಮಳಿಗೆಗೆ ಅವಕಾಶ ನೀಡಲಾಗಿದೆ.ಮಾರಾಟಗಾರರುಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.ಸಾರ್ವಜನಿಕರು ಹಸಿರು ಪಟಾಕಿ ಬಗ್ಗೆ ಪರಿಶೀಲಿಸಿಯೇಖರೀದಿಸಬೇಕು ಎಂದರು.ಪಟಾಕಿ ಮಾರಾಟಗಾರರ ಸಂಘದ ಪ್ರತಿನಿ ಧಿಗಳುಮಾತನಾಡಿ, ಕಾನೂನಿಗೆ ಅನುಗುಣವಾಗಿ ಹಾಗೂಮಾರ್ಗಸೂಚಿ ಪಾಲಿಸುವ ಮೂಲಕ ಪಟಾಕಿಮಾರಾಟಕ್ಕೆ ಬದ್ಧರಿದ್ದೇವೆ.
ಪಟಾಕಿ ಮಾರಾಟಮಳಿಗೆಗಳಿರುವ ಆವರಣದಲ್ಲಿ ಹೂವು, ಹಣ್ಣು,ಜ್ಯೂಸ್ ಮುಂತಾದ ಮಾರಾಟಗಾರರು ವ್ಯಾಪಾರಮಾಡಲು ಅಂಗಡಿ ಹಾಕುವುದರಿಂದ ಸುರಕ್ಷತೆಹಾಗೂ ಜನಸಂದಣಿ ನಿಯಂತ್ರಣ ಕಾಯ್ದುಕೊಳ್ಳಲುತೊಂದರೆ ಆಗುತ್ತದೆ. ಪರವಾನಗಿ ಇಲ್ಲದವರೂ ತಳ್ಳುಗಾಡಿಗಳಲ್ಲಿ, ಬೀದಿಬದಿಯಲ್ಲಿ ಪಟಾಕಿ ಮಾರಾಟಮಾಡುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.