ಕೊರೊನಾ ಸೋಂಕಿನ ಕಾಟಕ್ಕೆ ಸೇತುಬಂಧ ಮಾರ್ಪಾಡು!
Team Udayavani, Jun 25, 2021, 4:33 PM IST
ಎಚ್.ಕೆ.ನಟರಾಜ
ದಾವಣಗೆರೆ : ಕೋವಿಡ್ ಸಾಂಕ್ರಾಮಿಕ ಕಾಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಾಥಮಿಕ ಶಾಲೆಗಳ ಸೇತುಬಂಧ (ಬ್ರಿಡ್ಜ್ ಕೋರ್ಸ್) ಕಲಿಕಾ ಪದ್ಧತಿಯಲ್ಲಿಯೇ ಮಾರ್ಪಾಡು ತಂದು ಮಕ್ಕಳ ಸ್ವಕಲಿಕೆಗೆ ಉತ್ತೇಜನ ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ವಿನ್ಯಾಸದ ಕ್ಯೂಆರ್ ಕೋಡ್ ಇರುವ ಅಭ್ಯಾಸ ಮತ್ತು ಚಟುವಟಿಕೆ ಹಾಳೆಗಳನ್ನು ಸಿದ್ಧಪಡಿಸಿದೆ. ಮಕ್ಕಳಿಗೆ ಅಗತ್ಯವಿರುವಂತೆ ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿ ಯಲ್ಲಿ ಈ ಅಭ್ಯಾಸ ಮತ್ತು ಚಟುವಟಿಕೆ ಹಾಳೆಗಳನ್ನು ಸಮಗ್ರ ಶಿಕ್ಷಣ ವತಿಯಿಂದ ಹೊಸದಾಗಿ ಸಿದ್ಧಗೊಳಿಸಲಾಗಿದೆ.
60 ದಿನಗಳ ನಲಿ-ಕಲಿ ಸೇತುಬಂಧ ಕಲಿಕಾ ಮಾದರಿಗೆ ಪೂರಕವಾಗಿ ವಿಷಯವಾರು, ತರಗತಿವಾರು ಅಗತ್ಯವಿರುವ ಸ್ವಕಲಿಕಾ ಆಧಾರಿತ ಚಟುವಟಿಕೆ ಮತ್ತು ಅಭ್ಯಾಸದ ಹಾಳೆಗಳನ್ನು ರಾಜ್ಯ ನಲಿ-ಕಲಿ ಸಂಪನ್ಮೂಲ ವ್ಯಕ್ತಿಗಳ ನೆರವಿನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಅಭ್ಯಾಸ ಮತ್ತು ಚಟುವಟಿಕೆಯ ಈ ಹೊಸ ವಿನ್ಯಾಸದ ಕೆಲವು ಹಾಳೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಿರುವುದು ವಿಶೇಷ. ವಿಡಿಯೋ ಮತ್ತು ಆಡಿಯೋಗಳನ್ನು ಉಪಯೋಗಿಸಿ ಮಕ್ಕಳು ಹೆಚ್ಚಿನ ಕಲಿಕಾ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹಾಗೆಯೇ ಇಲಾಖೆಯಿಂದ ಪ್ರಸಾರಕ್ಕೆ ಕ್ರಮ ವಹಿಸಿದ ರೇಡಿಯೋ, ದೂರದರ್ಶನ ಪಾಠ ಪ್ರಸಾರದ ಬಳಕೆಗೂ ಇದು ನೆರವು ನೀಡುವ ಸಾಧ್ಯತೆ ಇದೆ. ಈ ತಂತ್ರಜ್ಞಾನ ಮಕ್ಕಳ ಕಲಿಕೆಯನ್ನು ಸಾಧ್ಯವಾದಷ್ಟು ಪರಿಣಾಮಕಾರಿಗೊಳಿಸಲು ಹಾಗೂ ಏಕತಾನತೆಯನ್ನು ನೀಗಿಸಲು ಸಹಕಾರಿಯಾಗಬಲ್ಲದು ಎಂದು ಶಿಕ್ಷಣ ಇಲಾಖೆ ನಿರೀಕ್ಷಿಸಿದೆ.
ಅಭ್ಯಾಸ ಹಾಳೆ ಬಳಕೆ ಕಡ್ಡಾಯ: ಅಭ್ಯಾಸ ಹಾಳೆಗಳಲ್ಲಿರುವ ಕ್ಯೂಆರ್ ಕೋಡ್ ಸ್ಕಾನ್ ಮಾಡುವ ಬಗ್ಗೆ ಪೋಷಕರಿಗೆ ಅಥವಾ ಮಕ್ಕಳ ಮನೆಯಲ್ಲಿರುವ ಸುಗಮಕಾರರಿಗೆ ಆನ್‌ಲೈನ್ ಇಲ್ಲವೇ ದೂರವಾಣಿ ಮೂಲಕ ಮಾರ್ಗದರ್ಶನ ನೀಡಲು ಸಹ ಇಲಾಖೆ ಯೋಜನೆ ಹಾಕಿಕೊಂಡಿದೆ. ಈ ಹಾಳೆಗಳನ್ನು ಸೇತುಬಂಧ ಮಾದರಿಯೊಂದಿಗೆ ಎಲ್ಲ ಶಾಲೆಗಳ ಶಿಕ್ಷಕರಿಗೆ ತಲುಪಿಸಲಿದೆ.
ಪ್ರತಿ ಮಗುವೂ ವಿನ್ಯಾಸಗೊಳಿಸಿದ ಅಭ್ಯಾಸದ ಹಾಳೆಗಳನ್ನು (ವರ್ಕ್‌ಶೀಟ್) ಬಳಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಸೃಜನಾತ್ಮಕ ಹಾಳೆಗಳ ಅಗತ್ಯತೆ ಕಂಡು ಬಂದಲ್ಲಿ ವಿಷಯವಾರು ಶಿಕ್ಷಕರು ಸ್ಥಳೀಯ ಅವಶ್ಯಕತೆ ಹಾಗೂ ಲಭ್ಯ ಸಂಪನ್ಮೂಲ ಆಧರಿಸಿ ಕ್ರಿಯಾಶೀಲವಾಗಿ ರೂಪಿಸಿ ಬಳಸಿಕೊಳ್ಳಲು ಸಹ ಅವಕಾಶ ನೀಡಲಾಗಿದೆ. ಪ್ರತಿ ಶಾಲೆಯು ತಮ್ಮಲ್ಲಿ ಲಭ್ಯವಿರುವ ಶಾಲಾನುದಾನದಿಂದಲೇ ಅಭ್ಯಾಸ ಹಾಳೆಗಳನ್ನು ಝೆರಾಕ್ಸ್ ಮಾಡುವ ಮೂಲಕ ಮಕ್ಕಳಿಗೆ ಒದಗಿಸಬೇಕು.
ಆನ್‌ಲೈನ್ ಮಾಧ್ಯಮದ ಮೂಲಕ ಇಲ್ಲವೇ ಆಫ್‌ಲೈನ್ ಮಾಧ್ಯಮದ ಅಂದರೆ ನೇರವಾಗಿ ಮಕ್ಕಳಿಗೆ ಅಭ್ಯಾಸ ಹಾಳೆಗಳನ್ನು ತಲುಪಿಸಬಹುದಾಗಿದೆ. ಸೇತುಬಂಧ ಕಲಿಕೆಗೆ ಸಂಬಂಧಿಸಿ ಮೌಲ್ಯಮಾಪನಕ್ಕೆ ಕಲಿಕಾ ಅಭ್ಯಾಸದ ಹಾಳೆಗಳನ್ನೇ ಬಳಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಅಭ್ಯಾಸ ಪೂರ್ಣಗೊಳಿಸಿದ ಹಾಳೆಗಳನ್ನು ಮಕ್ಕಳಿಂದ ನೇರವಾಗಿ ಇಲ್ಲವೇ ಆನ್‌ಲೈನ್ ಮೂಲಕ ಮರಳಿ ಪಡೆದು ಮಕ್ಕಳ ಕಲಿಕೆಯ ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಪೂರ್ಣ ಸರಿ ಉತ್ತರ ಇದ್ದರೆ “ಎ’ ಎಂದೂ, ತಪ್ಪಾದ ಉತ್ತರ ಇದ್ದರೆ “ಬಿ’ ಎಂದೂ ಶ್ರೇಣಿಗಳನ್ನು ನೀಡಬೇಕು.
“ಬಿ’ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಹಿಮ್ಮಾಹಿತಿ ನೀಡುವ ಮೂಲಕ ಪೂರಕ ಚಟುವಟಿಕೆ ಮಾಡಿಸಿ ಕಲಿಕಾ ಕೊರತೆ ನೀಗಿಸಬೇಕು. ಮಕ್ಕಳ ಈ ಅಭ್ಯಾಸದ ಹಾಳೆಗಳನ್ನು ಮಕ್ಕಳ ಪೋರ್ಟ್ ಪೊಲಿಯೋದಲ್ಲಿ ಸಂಗ್ರಹಿಸಿಟ್ಟು ಕೊಳ್ಳಬೇಕು. ಸೇತುಬಂಧ ಕಲಿಕೆಗೆ ನಿರ್ದಿಷ್ಟಪಡಿಸಿದ ಕಲಿಕಾ ದಿನಗಳು ಪೂರ್ಣಗೊಂಡ ಬಳಿಕವೇ ಪ್ರತಿ ಮಗು ತರಗತಿವಾರು ಪ್ರಸಕ್ತ ಸಾಲಿನ ಕಲಿಕೆಗೆ ಪ್ರವೇಶ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ಶಿಕ್ಷಕರಿಗೆ ತರಬೇತಿ: ಅಭ್ಯಾಸ ಹಾಳೆಗಳ ಬಳಕೆಯ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ನೆರವು ನೀಡಲು ಅಗತ್ಯವಿರುವ ಸೂಚನೆ, ಮಾರ್ಗದರ್ಶನಗಳನ್ನು ಸಹ ಪೋಷಕರಿಗೂ ಸ್ಪಷ್ಟಪಡಿಸಬೇಕು. ಈ ಅಭ್ಯಾಸ ಹಾಳೆಗಳನ್ನು ಮಕ್ಕಳಿಗೆ ನೀಡಿರುವ ಮತ್ತು ಹಿಂಪಡೆದಿರುವ ಬಗ್ಗೆ ಸೂಕ್ತ ದಾಖಲೆಯನ್ನು ಶಿಕ್ಷಕರು ನಿರ್ವಹಿಸಬೇಕು.
ಅಭ್ಯಾಸ ಹಾಳೆಗಳ ಬಳಕೆಯ ಬಗ್ಗೆ ಶಿಕ್ಷಕರಿಗೆ ಕ್ಲಸ್ಟರ್ ಹಂತದಲ್ಲಿ ಗೂಗಲ್, ಝೂಮ್, ವಿಡಿಯೋ ಮಾಧ್ಯಮ ಆಧಾರಿತ ಸಭೆಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.