ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡಲು ವಿದ್ಯಾರ್ಥಿಗಳ ಒತ್ತಾಯ
Team Udayavani, Nov 12, 2021, 4:58 PM IST
ದಾವಣಗೆರೆ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಹಿಂಪಡೆಯುವುದು, ಉಚಿತವಾಗಿ ವಿದ್ಯಾರ್ಥಿ ಬಸ್‌ಪಾಸ್ ನೀಡಬೇಕು ಎಂದು ಒತ್ತಾಯಿಸಿ ಗುರುವಾರಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ಆರ್ಗನೈಜೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಿದ್ಧವಾಗಿದೆ.ನೀತಿಯು ಪ್ರಸ್ತಾವನೆಯಾದಾಗನಿಂದಲೂ ಶಿಕ್ಷಣತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು,ಪೋಷಕರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣ ಕ್ಷೇತ್ರದಲ್ಲಿತರಲು ಪ್ರಸ್ತಾಪಿಸಿದ್ದ ಹಲವಾರು ಬದಲಾವಣೆಗಳುಅಥವಾ ಸೇರ್ಪಡೆಗಳು, ಹಲವಾರು ಅಂಶಗಳುದೊಡ್ಡ ಮಟ್ಟದ ಚರ್ಚೆ ಮತ್ತು ಭಿನ್ನಾಭಿಪ್ರಾಯಕ್ಕೂಕಾರಣವಾಗಿವೆ. ಶಿಕ್ಷಕರು, ವಿದ್ಯಾರ್ಥಿ ಸಮುದಾಯದಭವಿಷ್ಯ ಮತ್ತು ಶಿಕ್ಷಣದ ಗುಣಮಟ್ಟ ಕಾಪಾಡುವಸದುದ್ದೇಶದಿಂದ ಕೂಡಲೇ ರಾಷ್ಟ್ರೀಯ ಶಿಕ್ಷಣನೀತಿಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಯಾವುದೇ ಪೂರ್ವ ತಯಾರಿಇಲ್ಲದೆ ಅತ್ಯಂತ ತರಾತುರಿಯಲ್ಲಿ ಏಕಾಏಕಿ ರಾಷ್ಟ್ರೀಯಶಿಕ್ಷಣ ನೀತಿ ಭಾಗವಾಗಿರುವ ನಾಲ್ಕು ವರ್ಷದ ಪದವಿಕೋರ್ಸ್ ಅನುಷ್ಠಾನಕ್ಕೆ ತರಲಾಗಿದೆ. ಈಗಾಗಲೇಪ್ರಥಮ ವರ್ಷದ ತರಗತಿ ಪ್ರಾರಂಭವೇನೋ ಆಗಿವೆ.ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರಿತ ಪಠ್ಯಕ್ರಮವೇತಯಾರಾಗಿಲ್ಲ ಮತ್ತು ಯಾರಿಗೂ ಪಠ್ಯಪುಸ್ತಕಗಳೇಲಭ್ಯವಾಗಿಲ್ಲ.
ಉಪನ್ಯಾಸಕರು, ಅಧ್ಯಾಪಕರಿಗೆ ಸೂಕ್ತತರಬೇತಿಯನ್ನೂ ನೀಡಲಾಗಿಲ್ಲ. ಇಂತಹ ರಾಷ್ಟ್ರೀಯಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯದ ಭವಿಷ್ಯಕ್ಕೆಹಾನಿ ಉಂಟು ಮಾಡುತ್ತಿದೆ. ಇನ್ನೊಂದು ಕಡೆ ಶಿಕ್ಷಣದಗುಣಮಟ್ಟಕ್ಕೆ ಮಾರಕವಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆಜನತೆ, ಶಿಕ್ಷಕರು, ವಿದ್ಯಾರ್ಥಿಗಳು, ಸಂಘಟನೆಗಳ ಅಭಿಪ್ರಾಯಗಳನ್ನು ಪ್ರಜಾತಾಂತ್ರಿಕವಾಗಿಕೂಲಂಕುಷವಾಗಿ ಗಣನೆಗೆ ತೆಗೆದುಕೊಳ್ಳಬೇಕು.
ನೀತಿಯ ಬಗ್ಗೆ ಪರಾಮರ್ಶೆ ಮಾಡಬೇಕು. ನಾಲ್ಕುವರ್ಷದ ಪದವಿ ಕೋರ್ಸ್ ತೆಗೆದುಹಾಕಬೇಕು ಎಂದುಆಗ್ರಹಿಸಿದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿಪೂಜಾ ನಂದಿಹಳ್ಳಿ, ಕಾವ್ಯ, ಪುಷ್ಪಾ, ಅಣಬೇರುತಿಪ್ಪೇಸ್ವಾಮಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Waqf Protest: ರೇಣುಕಾಚಾರ್ಯ, ಗಾಯಿತ್ರಿ ಸಿದ್ದೇಶ್ವರ ಸೇರಿ ಹಲವರು ಪೊಲೀಸ್ ವಶಕ್ಕೆ
Waqf Property: “ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಿಎಂ ಸಿಬಿಐ, ಎಸ್‌ಐಟಿ ತನಿಖೆ ಮಾಡಿಸಲಿ”
MUST WATCH
ಹೊಸ ಸೇರ್ಪಡೆ
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.