ಲಾಭದತ್ತ ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ: ಪ್ರಸನ್ನಕುಮಾರ್
Team Udayavani, Nov 23, 2021, 3:25 PM IST
ದಾವಣಗೆರೆ: ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ2020-21 ನೇ ಸಾಲಿನಲ್ಲಿ 7.26 ಕೋಟಿಷೇರು ಬಂಡವಾಳ, 142.30 ಕೋಟಿ ಠೇವಣಿಸಂಗ್ರಹಿಸಿ 2.30 ಕೋಟಿ ರೂ. ಲಾಭ ಗಳಿಸುವತ್ತದಾಪುಗಾಲು ಹಾಕಿದೆ ಎಂದು ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ್ ತಿಳಿಸಿದರು.
ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿನಿಯಮಿತದ ವಾರ್ಷಿಕ ಮಹಾಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸತತ ಲಾಭ, ಗಳಿಕೆ ನಿರಂತರ ಅಭಿವೃದ್ಧಿ ನಮ್ಮಸಂಸ್ಥೆಯ ಹೆಗ್ಗಳಿಕೆ. 2009-10ನೇ ಸಾಲಿನಲ್ಲಿ18.9 ಲಕ್ಷ ಷೇರು ಬಂಡವಾಳ, 38.3 ಲಕ್ಷ ರೂ.ಠೇವಣಿ ಸಂಗ್ರಹಿಸಿದ್ದು, 6.48 ಲಕ್ಷ ರೂ. ಲಾಭಗಳಿಸಿತ್ತು. ಪ್ರತಿ ವರ್ಷ ವ್ಯವಹಾರದಲ್ಲಿ ಅಭಿವೃದ್ಧಿಹೊಂದುತ್ತಾ 2020-21ನೇ ಸಾಲಿನಲ್ಲಿ 7.26ಕೋಟಿ ರೂ. ಷೇರು ಬಂಡವಾಳ 142.30ಕೋಟಿ ಠೇವಣಿ ಸಂಗ್ರಹಿಸಿ 2.30 ಕೋಟಿರೂ. ಲಾಭ ಗಳಿಸುವತ್ತ ದಾಪುಗಾಲು ಹಾಕಿದೆ ಎಂದರು.
ಮುಂದಿನ ದಿನಗಳಲ್ಲಿ ಜಿ.ಎಂ.ಸೌಹಾರ್ದ ಪತ್ತಿನ ಸಹಕಾರಿ ಸದಸ್ಯರಿಗೆ ಎಸ್‌ಎಂಎಸ್ ಅಲರ್ಟ್, ಮೊಬೈಲ್ ಬ್ಯಾಂಕಿಂಗ್,ನೆಫ್ಟ್, ಆರ್‌ಟಿಜಿಎಸ್ ಸರಳೀಕರಣಗೊಳಿಸುವಸೌಲಭ್ಯಗಳನ್ನು ನೀಡಲಿದೆ. ಈಗಾಗಲೇ ಸಿಬಿಎಸ್‌ವ್ಯವಸ್ಥೆ ಅಳವಡಿಸಲಾಗಿದೆ. ಸಾಲ ನೀಡಿ ಬಡ್ಡಿ ಗಳಿಕೆಯೋಜನೆಯಲ್ಲಿ ಮಾತ್ರ ತೊಡಗಿದೆ. ಜೀವವಿಮಾಯೋಜನೆ, ಆರೋಗ್ಯ ವಿಮಾ ಯೋಜನೆ,ಕ್ರೆಡಿಟ್ ಕಾರ್ಡ್ ಸೌಲಭ್ಯ ಮತ್ತು ಇನ್ನಿತರೆಹೊಸ ಯೋಜನೆಗಳನ್ನು ಆರಂಭಿಸುವ ಚಿಂತನೆಮಾಡಬೇಕಾಗಿದೆ ಎಂದು ಆಡಳಿತ ಮಂಡಳಿಗೆಸಲಹೆ ನೀಡಿದರು.
ಈಗಾಗಲೇ ಕೇಂದ್ರ ಕಚೇರಿಗೆಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಮಾಡಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಸಾಧಿ ಸುವಹಂಬಲವಿದ್ದು, ಇನ್ನೆರಡು ವರ್ಷಗಳಲ್ಲಿ 200ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಇದೆಎಂದರು.ನಿರ್ದೇಶಕ ಜಿ.ಎಸ್. ಅನಿತ್‌ಕುಮಾರ್,ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ ನಡೆದ ಬಂದದಾರಿ ಬಗ್ಗೆ ವಿವರಿಸಿದರು. ಮುಖ್ಯ ಪ್ರವರ್ತಕಜಿ.ಎಂ. ಲಿಂಗರಾಜು, ಗಾಯತ್ರಿ ಸುಭಾಶ್ಚಂದ್ರ,ಎ.ಸಿ. ಬಸವರಾಜ್, ಎ.ಎಸ್ ಗುರುಮೂರ್ತಿ,ಸಿದ್ದನಗೌಡ ಸಿ. ಪಾಟೀಲ್, ಕೆ.ಎಸ್‌ವಿಜಯಕುಮಾರ್, ಎ.ಬಿ. ರವೀಂದ್ರನಾಥ್,ಸುರೇಶ್ ಬಾಬು, ಬಿ. ಚನ್ನಬಸಪ್ಪ, ಎಂ.ಪಿ.ಚಂದನ್ ಪಟೇಲ್, ಜಿಎಂಐಟಿ ಕಾಲೇಜಿನಆಡಳಿತಾಧಿಕಾರಿ ಸುಭಾಶ್ಚಂದ್ರ, ಪ್ರಾಂಶುಪಾಲಡಾ| ವೈ. ವಿಜಯ್‌ಕುಮಾರ್ ಇತರರು ಇದ್ದರು.ಹಿರಿಯ ನಿರ್ದೇಶಕ ಬಿ.ಆರ್. ನೀಲಕಂಠಪ್ಪ ಸಾಲಬಳಕೆ ಕುರಿತು ವರದಿ ಮಂಡಿಸಿದರು. ಪ್ರಧಾನವ್ಯವಸ್ಥಾಪಕ ಎಸ್.ಎನ್. ಮಲ್ಲಪ್ಪ ಸಹಕಾರಿಯ2020-21ನೇ ಸಾಲಿನ ಆಡಳಿತ ವರದಿಮಂಡಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಐ.ಬಿಕಡದಕಟ್ಟೆ ಲಾಭ ಹಂಚಿಕೆ ವರದಿ ವಾಚಿಸಿದರು.ಯಶೋದಮ್ಮ, ಜಿ.ಪಿ. ಕವಿತಾ, ಶ್ರುತಿ, ನಾಗಶ್ರೀಪ್ರಾರ್ಥಿಸಿದರು. ಎಸ್.ಸಿ. ಮಹಾರುದ್ರಪ್ಪಸ್ವಾಗತಿಸಿದರು. ಕೆ.ಎನ್ ಗುರುಮೂರ್ತಿವಂದಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.