Davanagere: ಕಾರಾಗೃಹದಿಂದ ತಪ್ಪಿಸಿಕೊಂಡ ಪೋಕ್ಸೋ ಕೇಸ್ ಆರೋಪಿ ಅರೆಸ್ಟ್
24 ಗಂಟೆಗಳೊಳಗೆ ಮತ್ತೆ ಬಲೆಗೆ
Team Udayavani, Aug 27, 2023, 9:38 PM IST
ದಾವಣಗೆರೆ: ದಾವಣಗೆರೆ ಉಪ ಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಯನ್ನ 24 ಗಂಟೆಯಲ್ಲೇ ಬಸವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಕರೂರು ವ್ಯಾಪ್ತಿಯ ಆಟೋ ಚಾಲಕ ವಸಂತ(23) ಬಂಧಿತ. ಪೋಕ್ಸೋ ಪ್ರಕರಣದಡಿಯಲ್ಲಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ದಾವಣಗೆರೆ ಮಹಿಳಾ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ದಾವಣಗೆರೆಯ ವಸಂತ ಚಿತ್ರಮಂದಿರದ ರಸ್ತೆಯಲ್ಲಿನ ಉಪ ಕಾರಾಗೃಹದಲ್ಲಿಡಲಾಗಿತ್ತು.
ಶನಿವಾರ ಮಧ್ಯಾಹ್ನದ ವೇಳೆ 40ಅಡಿಗೂ ಎತ್ತರದ ಗೋಡೆಯಿಂದ ಕೆಳಗೆ ಜಿಗಿದು ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿತ್ತು. ಆರೋಪಿ ವಸಂತ ನೆಲಕ್ಕೆ ಬಿದ್ದು ಕಾಲಿಗೆ ಪೆಟ್ಟಾಗಿದ್ದರೂ ಸಹ ಲೆಕ್ಕಿಸದೆ ಓಡಿ ಹೋಗಿದ್ದನು.ಪತ್ತೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಭಾನುವಾರ ಮತ್ತೆ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಆರೋಪಿ ಪರಾರಿಯಾದ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ಜೈಲಿನ ಸಿಬ್ಬಂದಿ ದೂರು ನೀಡಿದ್ದರು. ಕಾರಾಗೃಹದಿಂದ ತಪ್ಪಿಸಿ ಕೊಂಡ 24 ಗಂಟೆಯೊಳಗೆ ಆರೋಪಿ ವಸಂತನನ್ನು ಹರಿಹರ ತಾಲೂಕಿನ ದುಗ್ಗಾವತಿ ಗ್ರಾಮದ ಬಳಿ ಬಂಧಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.