Davanagere; ಆನ್‌ಲೈನ್ ಷೇರು ಮಾರುಕಟ್ಟೆ ಹೆಸರಿನಲ್ಲಿ 10.45 ಕೋಟಿ ರೂ ವಂಚನೆ!
ವಿದ್ಯಾ ಸಂಸ್ಥೆಯ ಮುಖ್ಯಸ್ಥೆಗೆ ಭಾರೀ ವಂಚನೆ..
Team Udayavani, Nov 11, 2024, 8:08 PM IST
ದಾವಣಗೆರೆ: ಆನ್‌ಲೈನ್ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆಯ ಮೂಲಕ ಹೆಚ್ಚಿನ ಲಾಭಾಂಶ ದೊರೆಯಲಿದೆ ಎಂದು ನಂಬಿಸಿ ದಾವಣಗೆರೆಯ ಚೇತನಾ ವಿದ್ಯಾಸಂಸ್ಥೆಯ ಡಾ| ವಿಜಯಲಕ್ಷ್ಮಿ ವೀರಮಾಚಿನೇನಿ ಅವರಿಗೆ 10.45 ಕೋಟಿ ಯಷ್ಟು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಂತಾರಾಷ್ಟ್ರೀಯ ಗೋಲ್ಡ್ ಮ್ಯಾನ್ ಸ್ನಾಚ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯ ಲಿದೆ ಎಂದು ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಯೊಬ್ಬರ ಮಾತಿಗೆ ಒಪ್ಪಿದ ಅವರು ಆನ್‌ಲೈನ್‌ನಲ್ಲಿ ಹಂತ ಹಂತವಾಗಿ10,45,50,000 ರೂಪಾಯಿ ವರ್ಗಾವಣೆ ಮಾಡಿದ್ದರು. ಯಾವಾಗ ಹೂಡಿಕೆ ಮಾಡಿರುವ ಹಣ ವಾಪಾಸ್ ಪಡೆ ಯಲು ಅವಕಾಶ ಇಲ್ಲ… ಎಂಬುದಾಗಿ ಕಂಪನಿಯವರು ಮಾಹಿತಿ ನೀಡಿದಾಗಲೇ ವಂಚನೆ ಬಯಲಿಗೆ ಬಂದಿದೆ. ಈ ಸಂಬಂಧ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚೇತನ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ ಡಾ|ವಿಜಯಲಕ್ಷ್ಮಿ ವೀರಮಾಚಿನೇನಿ ಅವರಿಗೆ ದಾವಣಗೆರೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ| ಡಿ. ಉಮೇಶ್ ಅಂತಾರಾಷ್ಟ್ರೀಯ ಗೋಲ್ಡ್ ಮ್ಯಾನ್ ಸ್ನಾಚ್ ಕಂಪನಿಯಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ಹೆಚ್ಚು ಹೆಚ್ಚು ಲಾಭ ಬರುತ್ತದೆಂದು ಹೇಳಿದ್ದ ಮಾತು ಕೇಳಿ ಹಂತ ಹಂತವಾಗಿ ಜೂ.12 ರಿಂದ ಆ.2 ರ ವರೆಗೆ 10.45 ಕೋಟಿ ರೂಪಾಯಿಗೂ ಹೆಚ್ಚು ಹಣ ತೊಡಗಿಸಿದ್ದರು.
ಹೂಡಿದ್ದ ಹಣ 10.45 ಕೋಟಿಯಾಗಿದ್ದರೂ ಆನ್‌ಲೈನ್‌ನಲ್ಲಿ ೨೩ ಕೋಟಿ ರೂಪಾಯಿ ಎಂದು ತೋರಿಸುತ್ತಿತ್ತು. ಹೂಡಿಕೆಯ ಜತೆಗೆ ಹೆಚ್ಚುವರಿಯಾಗಿ ಬಂದ ಹಣವನ್ನು ಸೇರಿದಂತೆ ಎಲ್ಲ ಹಣವನ್ನು ಬಿಡಿಸಿಕೊಳ್ಳಲು ಮುಂದಾ ದಾಗ ಕಂಪನಿಯವರು ಅರ್ಧಕ್ಕೆ ಹಣವನ್ನು ಡ್ರಾ ಮಾಡಿಕೊಳ್ಳಲು ಬರುವುದಿಲ್ಲ. ಮತ್ತಷ್ಟು ಹಣ ಹೂಡಿಕೆ ಮಾಡು ವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ವಂಚನೆಗೊಳಗಾಗಿರುವ ಬಗ್ಗೆ ಡಾ| ಡಾ| ವಿಜಯಲಕ್ಷ್ಮಿ ವೀರ ಮಾಚಿನೇನಿ ದೂರು ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renovation: ಹುಟ್ಟೂರಿನ ಶಾಲೆಗೆ ಆಧುನಿಕ ಸ್ಪರ್ಶ ಕೊಟ್ಟ ಎಂಎಲ್‌ಸಿ ಎನ್. ರವಿಕುಮಾರ್
Davanagere: ಖಾಸಗಿ ವಸತಿ ಶಾಲೆಯಲ್ಲಿ ಬಾಯ್ಲರ್ ಡ್ರಮ್ ಬಿದ್ದು ವಿದ್ಯಾರ್ಥಿ ಮೃತ್ಯು
BJP Rift: ನಾವು ಕೂಡ ದಿಲ್ಲಿಗೆ ಹೋಗಲು ಸಿದ್ಧ, ನಮಗೇನು ದಾರಿ ಗೊತ್ತಿಲ್ವಾ?: ರೇಣುಕಾಚಾರ್ಯ
Davanagere; ಭದ್ರಾ ನಾಲೆಯಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿಯ ಶವಕ್ಕಾಗಿ ಮುಂದುವರಿದ ಶೋಧ
Davanagere: ಸಾಲಬಾಧೆ ತಾಳಲಾರದೆ ಆತ್ಮಹ*ತ್ಯೆಗೆ ಶರಣಾದ ರೈತ
MUST WATCH
ಹೊಸ ಸೇರ್ಪಡೆ
Editorial: ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೆ ಬರಲಿ
Raid: ಆದಾಯ ತೆರಿಗೆ ವಂಚನೆ: 30ಕ್ಕೂ ಅಧಿಕ ಸ್ಥಳಗಳಲ್ಲಿ ಐ.ಟಿ. ದಾಳಿ
Award: ದಕ್ಷಿಣ ಕನ್ನಡ ಸಹಿತ 4 ಜಿಲ್ಲಾ ಪಂಚಾಯಿತಿಗೆ “ನರೇಗಾ ಪುರಸ್ಕಾರ’
ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಶೀಘ್ರ ಬೆಂಗಳೂರಿಗೆ
ಕಾಡಾನೆಗಳಿಗೆ ದೇಶಿ ನಿರ್ಮಿತ ರೇಡಿಯೋ ಕಾಲರ್: ಸಚಿವ ಈಶ್ವರ ಖಂಡ್ರೆ