ಆರೋಗ್ಯ ಸೇವೆಗೂ ತುರ್ತು “ಸ್ಪಂದನ’ ಬಳಕೆ

Team Udayavani, May 11, 2021, 8:18 PM IST

11-11

„ಎಚ್‌.ಕೆ. ನಟರಾಜ

ದಾವಣಗೆರೆ: ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಹಾಗೂ ನಾನಾ ವಿಧದ ಜಾಡ್ಯಗಳಿಂದ ಜನ ಹೈರಾಣಾಗಿದ್ದು,ಆರೋಗ್ಯ ಸೇವೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಪೊಲೀಸ್‌ ಇಲಾಖೆ, ತುರ್ತು ಕರೆ ಸಂಖ್ಯೆ-112 “ಸ್ಪಂದನ ‘ ಸಹಾಯ ವ್ಯವಸ್ಥೆಯನ್ನು ಆರೋಗ್ಯ ಸೇವೆ ಸಹಾಯಕ್ಕೂ ಬಳಸಿಕೊಳ್ಳಲು ನಿರ್ಧರಿಸಿದೆ.

ಪೊಲೀಸ್‌ ಇಲಾಖೆಯ ಈ ನಿರ್ಧಾರದಿಂದಾಗಿ ತುರ್ತು ಕರೆ-112 ವ್ಯವಸ್ಥೆ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಸಾರ್ವಜನಿಕರು ಆರೋಗ್ಯ, ವೈದ್ಯಕೀಯ ಸೇವೆಯ ಸಹಾಯಕ್ಕಾಗಿಯೂ ಜನ ಈ ಸಂಖ್ಯೆಗೆ ಕರೆಮಾಡಬಹುದು. ಈ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (ಇಆರ್‌ಎಸ್‌ಎಸ್‌- ಎಮರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಮ್‌)ಯಡಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ 10-15 ವಾಹನಗಳು ಪ್ರತಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ವಾಹನಗಳು ಇನ್ನು ಮುಂದೆ ಅಪರಾಧ, ದುರಂತ ಸನ್ನಿವೇಶಗಳ ಜತೆಗೆ ಆರೋಗ್ಯ ತುರ್ತು ಸಹಾಯಕ್ಕೂ ನೆರವಾಗುವ ರೀತಿಯಲ್ಲಿ ಕೆಲಸ ಮಾಡಲಿವೆ. ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಯೋಜನೆ ಮೂಲಕ ಈವರೆಗೆ ಅಪರಾಧ, ದುರಂತ, ಅವಘಡ, ವಿಪತ್ತು ಸೇರಿದಂತೆ ಇನ್ನಿತರ ಸಮಸ್ಯೆಯಲ್ಲಿ ಸಿಲುಕಿದವರು ಕರೆ ಮಾಡಿದಾಗ ಅತಿ ಶೀಘ್ರದಲ್ಲಿ ಪೊಲೀಸ್‌ ಸಂಪರ್ಕದ ಮೂಲಕ 24×7 ರೀತಿಯಲ್ಲಿ ಸಹಾಯ ಮಾಡಲಾಗುತ್ತಿತ್ತು.

ಪ್ರಸ್ತುತ ಕೊರೊನಾ ಸಂಕಷ್ಟ ಎದುರಾಗಿದ್ದು ಅಲ್ಲಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌ ಬ್ಲಾಕ್‌ ವ್ಯವಹಾರ, ಕಾಳಸಂತೆಯಲ್ಲಿ ರೆಮ್‌ಡಿಸಿವಿಯರ್‌ ಸೇರಿದಂತೆ ವಿವಿಧ ಔಷಧ ಮಾರಾಟ, ಆಕ್ಸಿಜನ್‌ ಮಾರಾಟ, ಕೃತಕ ಅಭಾವ ಸೃಷ್ಟಿಯಂಥ ಘಟನೆಗಳು ನಡೆಯುತ್ತಿವೆ. ಈ ತರಹದ ಆರೋಗ್ಯ ಸೇವೆಗೆ ಸಂಬಂಧಿಸಿದ ದೂರುಗಳಿಗೂ ಈ ವಾಹನಗಳು ಈಗ ತುರ್ತಾಗಿ ಸ್ಪಂದಿಸುವ ಕಾರ್ಯ ಮಾಡಲಿವೆ.

ಹೀಗಿದೆ ಕಾರ್ಯ ವೈಖರಿ: ತುರ್ತು ಸ್ಪಂದನ ಸಹಾಯ ವ್ಯವಸ್ಥೆಯಲ್ಲಿ ಸಾರ್ವಜನಿಕರು 112ಗೆ ಮಾಡುವ ಕರೆಗಳನ್ನು ಬೆಂಗಳೂರಿನಲ್ಲಿರುವ ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರದ ಸೇವಾ ಸಮನ್ವಯ ಘಟಕ ಸ್ವೀಕರಿಸಲಿದೆ. ಹೀಗೆ ಕರೆ ಸ್ವೀಕರಿಸುವಾಗಲೇ ಕರೆ ಎಲ್ಲಿಂದ ಬಂತು, ಎಷ್ಟು ಸಮಯಕ್ಕೆ ಬಂತು ಎಂಬ ಮಾಹಿತಿ ಕರೆ ಬಂದ ಸ್ಥಳದ ಉಪಗ್ರಹ ಆಧಾರಿತ ಅಕ್ಷಾಂಶ-ರೇಖಾಂಶ ಸಹಿತ ದಾಖಲಾಗುತ್ತದೆ.

ಅಂದರೆ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ ಕಾರ್ಯ ಇಲ್ಲಿ ನಡೆಯುತ್ತದೆ. ಬಳಿಕ ಸಂಬಂಧಪಟ್ಟ ಪ್ರದೇಶಕ್ಕೆ ಹತ್ತಿರದಲ್ಲಿ ನಿಂತಿರುವ ವಾಹನಗಳಿಗೆ ದೂರು ಕೊಟ್ಟವರ ಪ್ರದೇಶದ ಅಕ್ಷಾಂಶ-ರೇಖಾಂಶ ಸಹಿತ ಕರೆ ಬರುತ್ತದೆ. ವಾಹನದಲ್ಲಿ ಅಳವಡಿಸಿರುವ ಸ್ಟಾರ್ಟ್‌ ಗುಂಡಿ ಒತ್ತಿದರೆ ವಾಹನ ಎಲ್ಲಿ ಹೋಗಬೇಕು ಎಂದು ಡಿಜಿಟಲ್‌ ಮಾರ್ಗಸೂಚಿ ತೋರಿಸುತ್ತದೆ. ಆ ಪ್ರಕಾರವೇ ಚಾಲಕ ನಿಗದಿತ ಸ್ಥಳ ತಲುಪಬೇಕಾಗುತ್ತದೆ.

ಇದರಿಂದ ಆರೋಗ್ಯ ಸೇವೆಯ ಸಹಾಯದ ನಿರೀಕ್ಷೆಯಲ್ಲಿದ್ದವರಿಗೆ, ಆರೋಗ್ಯ ಸೇವೆಗೆ ಸಂಬಂಧಿಸಿ ಅವ್ಯವಹಾರ ನಡೆಯುತ್ತಿರುವ ಸ್ಥಳಗಳಿಗೆ ಕೂಡಲೇ ಪೊಲೀಸರು ಧಾವಿಸಿ ಸಹಾಯದ ಸ್ಪಂದನೆ ಸಿಗಲಿದೆ. ಜಿಪಿಎಸ್‌ ತಂತ್ರಜ್ಞಾನ ಆಧಾರಿತ ವಾಹನಗಳನ್ನು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನಿಲ್ಲಿಸಲಾಗಿದ್ದು ಪ್ರತಿ ದಿನ ಸ್ಥಳ ಬದಲಾವಣೆಯಾಗುತ್ತಿರುತ್ತದೆ.

ಈ ವಿಶೇಷ ವಾಹನಗಳಲ್ಲಿ ಒಬ್ಬ ಸಹಾಯಕ ಉಪನಿರೀಕ್ಷಕರು, ಒಬ್ಬ ಪೊಲೀಸ್‌ ಹಾಗೂ ಚಾಲಕ ಇರುತ್ತಾರೆ. ವಾಹನಗಳಿಗೆ ಕರೆ ಬರುತ್ತಿದ್ದಂತೆ ವಾಹನವು ಡಿಜಿಟಲ್‌ ನಕ್ಷೆ ಆಧರಿಸಿ ನಿಗದಿತ ಸ್ಥಳದಲ್ಲಿ ಶರವೇಗದಲ್ಲಿ ತಲುಪುತ್ತದೆ. ಈ ವ್ಯವಸ್ಥೆಯಿಂದ ಆರೋಗ್ಯ ಸೇವೆಯ ತುರ್ತು ಸಹಾಯಕ್ಕೂ ಹೆಚ್ಚು ಅನುಕೂಲವಾಗಲಿದೆ.

ಟಾಪ್ ನ್ಯೂಸ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MP-R

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.