ಪಾಲಿಕೆಯಿಂದಲೇ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ
Team Udayavani, Sep 9, 2021, 2:14 PM IST
ದಾವಣಗೆರೆ : ಮಹಾನಗರ ಪಾಲಿಕೆಯ ಸ್ಮಶಾನಗಳಲ್ಲಿ ನಗರಪಾಲಿಕೆಯಿಂದಲೇ ಉಚಿತವಾಗಿ ಅಂತ್ಯಸಂಸ್ಕಾರರದ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಮಶಾನಗಳಲ್ಲಿ ಗುಂಡಿ ತೆಗೆಯುವುದನ್ನು ಒಳಗೊಂಡಂತೆ ಇನ್ನು ಕೆಲವು ಕಡೆ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿ ಬಂದಿವೆ.
ಇನ್ನು ಮುಂದೆ ನಗರಪಾಲಿಕೆಯಿಂದ ಉಚಿತ ವಾಗಿ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಯಾವುದೇ ಶುಲ್ಕ ಕಟ್ಟಬೇಕಿಲ್ಲ ಎಂದರು. ಉಚಿತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದಕ್ಕಾಗಿ ನಗರ ಪಾಲಿಕೆಯಿಂದಲೇ ಏಜೆನ್ಸಿ ನಿಗ ದಿ ಪಡಿಸಲಾಗುವುದು. ಆ ಏಜೆನ್ಸಿಗೆ ನಗ ರ ಪಾಲಿಕೆಯಿಂದ ಹಣ ಪಾವತಿ ಮಾಡಲಾಗುವುದು. ಸಾರ್ವಜನಿಕರು ಅಂತ್ಯ ಸಂಸ್ಕಾರದ ಪ್ರಕ್ರಿಯೆಗಳಿಗೆ ಹಣ ನೀಡುವಂತಿಲ್ಲ ಎಂದು ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.
ಇದನ್ನೂ ಓದಿ : ನಟಿ Sreeleela ಫೋಟೋ ಗ್ಯಾಲರಿ
ಒಂದು ವೇಳೆ ನಿಗದಿಗೆ ಒತ್ತಾಯ : ಸಭೆಯ ಪ್ರಾರಂಭದಲ್ಲೇ ವಿಪಕ್ಷ ನಾಯಕ ಎ. ನಾಗರಾಜ್, ಕಳೆದ ಐದು ತಿಂಗಳನಿಂದ ಸಾಮಾನ್ಯಸಭೆ ನಡೆದೇ ಇಲ್ಲ. ಅಧಿಕಾರದಲ್ಲಿರುವ ಕೈಗೆ ಸಿಕ್ಕಿಲ್ಲ. ಅಧಿಕಾರಿಗಳು ಮಾತು ಕೇಳುವುದೇ ಇಲ್ಲ. ಎಲ್ಲ 45 ವಾರ್ಡ್‌ಗಳಲ್ಲಿ ಹಲವಾರು ಸಮಸ್ಯೆ ಇವೆ. ಎಲ್ಳಾ ಸಮಸ್ಯೆ ಒಂದರೆಡು ನಿಮಿಷಗಳಲ್ಲಿ ತಮ್ಮ ವಾರ್ಡ್‌ನಲ್ಲಿ ಸಮಸ್ಯೆ ಹೇಳುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ವಾರ್ಡ್ ಸದಸ್ಯರು ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಶೂನ್ಯ ವೇಳೆಗೆ ಅವಕಾಶ ಮಾಡಿಕೊಡಬೇಕು ಎಂಬ ವಿಪಕ್ಷ ನಾಯಕರು ಒತ್ತಾಯ ನ್ಯಾಯೋಚಿತವಾಗಿದೆ. ಹಾಗಾಗಿ ಸಭೆಯ ಕೊನೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. 1-2 ಅಲ್ಲ, ಬೇಕಾದರೆ ಐದು ನಿಮಿಷಗಳ ಕಾಲಾವಕಾಶ ನೀಡಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ಪ್ರತಿಧ್ವನಿಸಿದ ಡೊರ್ ನಂಬರ್ ವಿಷಯ : ನಗರ ಪಾಲಿಕೆಯ ವಿವಿ ವಾರ್ಡ್‌ಗಳಲ್ಲಿ ಸಮಸ್ಯ ಗಮನಕ್ಕೂ ತಾರದೇ ಡೋರ್ ನಂಬರ್ ನೀಡಲಾಗಿದೆ. ಬಿ.ಜಿ. ಅಜಯ್‌ಕುಮಾರ್ ಅಧಿಕಾರ ಅಧಿಯಲ್ಲಿ ಡೋರ್ ನಂಬರ್ ನೀಡುವ ಸಂಬಂಧ ಐವರ ಸಮಿತಿ ರಚನೆ ಮಾಡಲಾಗುವುದು. ಸಮಿತಿ ಸರಳ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಿದ ನಂತರವೇ ಡೋರ್ ನಂಬರ್ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೇ ಈವರೆಗೆ ಸಮಿತಿಯ ರಚನೆಯನ್ನೇ ಮಾಡಿಲ್ಲ. ಅಧಿಕಾರಿಗಳು ಯಾರ ಗಮನಕ್ಕೂ ತಾರದೆ ಡೋರ್ ನಂಬರ್ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಎ. ನಾಗರಾಜ್, ಕೆ. ಚ ಮನ್ ಸಾಬ್, ಅಬ್ದುಲ್ ಲತೀಫ್ ಇತರರು ತೀವ್ರ ಆಕ್ಷೇಪ ವ್ಯಕ ಪಪಡಿಸಿದರು.
ಐವರ ಸಮಿತಿ ರಚನೆ ಮಾಡುವ ಬಗ್ಗೆ ತೀರ್ಮಾನವೇ ಆಗಿರಲಿಲ್ಲ ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ಹೇಳಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು, ಐವರ ಸಮಿತಿ ರಚನೆಯ ಬಗ್ಗೆ ಚರ್ಚೆ ತೀರ್ಮಾನವೂ ಆಗಿತ್ತು.
ರಾಜೀವಗಾಂಧಿ ಯೋಜನೆಯಡಿ ಆಜಾದ್ ನಗರ, ಜಾಲಿನಗರ ಇತರೆ ಕೊಳಚೆ ಪ್ರದೇಶಗಳ ಸೇರ್ಪಡೆ ಮಾಡಿ ಸರ್ಕಾರದ ಅನುಮೋದನೆಗೆ ಕಳಿಸಬೇಕು ಎಂದು ವಿಪಕ್ಷ ನಾಯಕ ಎ. ನಾಗರಾಜ್, ಕೆ. ಚಮನ್ ಸಾಬ್ ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಯೋಜನೆಯ ಅನುದಾನ ವಾಪಸ್ ಆಗದಂತೆ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ್, ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮಾ ಪ್ರಕಾಶ್, ಎಲ್.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್, ಗೀತಾ ದಿಳ್ಯೆಪ್ಪ ಇತರರು ಇದ್ದರು.
ಇದನ್ನೂ ಓದಿ : ಗಣೇಶನಿಗೆ ಇಷ್ಟವಾದ ಮೋದಕ ಮಾಡುವುದು ಹೇಗೆ ಎಂದು ನಿಮಗೆ ಗೊತ್ತಿದೆಯಾ..? ಇಲ್ಲಿದೆ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.