ದಾವಣಗೆರೆ: ಕೊಟ್ಟ ಸಾಲ ಕೇಳಿದ್ದಕ್ಕೆ ವಯೋವೃದ್ಧನಿಗೆ ಹನಿಟ್ರ್ಯಾಪ್ ಮಾಡಿದ ಯುವತಿ!
Team Udayavani, Nov 8, 2022, 1:30 PM IST
ದಾವಣಗೆರೆ: ಕೊಟ್ಟ ಸಾಲ ಕೇಳಿದ್ದಕ್ಕೆ ವಯೋವೃದ್ಧನಿಗೆ ಹನಿಟ್ರ್ಯಾಪ್ ಗೆ ಮಾಡಿ 15 ಲಕ್ಷಕ್ಕೆ ಬೇಡಿಕೆ ಇಟ್ಟ ಮಹಿಳೆಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಸರಸ್ವತಿ ನಗರದ ಯಶೋಧ ಬಂಧಿತ ಮಹಿಳೆ.
ಏನಿದು ಘಟನೆ: ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ ಚಿದಾನಂದಪ್ಪ ಅವರಿಗೆ ಸರಸ್ವತಿ ನಗರ ನಿವಾಸಿಯಾದ 32 ವರ್ಷದ ಯಶೋಧ ಪರಿಚಯವಾಗಿದೆ. ಹೀಗೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಶುರುವಾಗಿದೆ. ಯಶೋಧ ಅವರು ಚಿದಾನಂದಪ್ಪರನ್ನು ಮನೆಗೆ ಆಹ್ವಾನಿಸುವುದು ಟೀ, ಕಾಫಿ ಜ್ಯೂಸ್ ಕುಡಿಸುವುದು ಸಾಮಾನ್ಯವಾಗಿದೆ. ಹೀಗೆ ಕರೆದು ಯಶೋಧ ಚಿದಾನಂದಪ್ಪನ ಬಳಿ ಬರೋಬರಿ 86 ಸಾವಿರ ರೂಪಾಯಿ ಸಾಲ ಪಡೆದಿದ್ದಾಳೆ.
ಇದನ್ನೂ ಓದಿ:95ನೇ ಹುಟ್ಟುಹಬ್ಬ:ಎಲ್.ಕೆ.ಅಡ್ವಾಣಿ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ಸಿಂಗ್
ಒಂದು ದಿನ ವಾಕಿಂಗ್ ಮುಗಿಸಿ ಯಶೋಧ ಮನೆಯ ಮುಂದೆ ಹಾಯ್ದು ಚಿದಾನಂದಪ್ಪ ಹೋಗುತ್ತಿದ್ದ. ಈ ವೇಳೆ ಯಶೋಧ ಚಿದಾನಂದಪ್ಪನನ್ನು ಕರೆದಿದ್ದಾಳೆ. ಜ್ಯೂಸ್ ಕೊಟ್ಟಿದ್ದಾಳೆ. ಆ ಜ್ಯೂಸ್ ಕುಡಿದ ಸ್ವಲ್ಪ ಸಮಯದಲ್ಲಿ ಚಿದಾನಂದಪ್ಪನ ಪ್ರಜ್ಞೆ ತಪ್ಪಿದೆ. ಎಚ್ಚರವಾದಾಗ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡು ಬಟ್ಟೆ ಹಾಕಿಕೊಂಡು ಮನೆಗೆ ಬಂದಿದ್ದಾರೆ. ಬಳಿಕ ಎರಡು ದಿನ ನಂತರ ಮಹಿಳೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪನವರಿಗೆ ಫೋನ್ ಮಾಡಿದ್ದಾಳೆ. ಅಶ್ಲೀಲ ವಿಡಿಯೋ ನನ್ನ ಬಳಿ ಇದೆ. 15 ಲಕ್ಷ ಕೊಡು ಇಲ್ಲವಾದರೆ ಕುಟುಂಬ ಸದಸ್ಯರಿಗೆ ತೋರಿಸುವ ಬೆದರಿಕೆ ಹಾಕಿದ್ದಾಳೆ. ಹೆದರಿ ಈ ವಿಚಾರವನ್ನು ಚಿದಾನಂದಪ್ಪ ತಮ್ಮ ಪರಿಚಯದವರಿಗೆ ಹೇಳಿದ್ದಾರೆ. ಅವರು ಏಳರಿಂದ ಎಂಟು ಲಕ್ಷಕ್ಕೆ ಮಾತಾಡಿ ಮುಗಿಸಲು ಮುಂದಾಗಿದ್ದಾರೆ. ಆದರೆ, ಮಹಿಳೆ 15 ಲಕ್ಷ ಕೊಡಬೇಕೆಂದು ಪಟ್ಟು ಹಿಡಿದಿದ್ದಾಳೆ.
ಈ ವೇಳೆ ಚಿದಾನಂದಪ್ಪನ ವಾಟ್ಸಪ್ ಗೆ ಒಂದು ನಗ್ನ ಫೋಟೋ ಕಳಿಸಿ ಬೆದರಿಸಿದ್ದಾಳೆ. ಇದಕ್ಕೆ ಹೆದರಿದ ಚಿದಾನಂದಪ್ಪ ವಿಚಾರವನ್ನು ಪುತ್ರನಿಗೆ ಹೇಳಿದ್ದಾರೆ. ಬಳಿಕ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಯಶೋಧಳನ್ನು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.