ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹವಿಳಂಬ ನೀತಿಗೆ ಖಂಡನೆ
Team Udayavani, Feb 1, 2020, 12:03 PM IST
ದಾವಣಗೆರೆ: 11 ನೇ ದ್ವಿ ಪಕ್ಷೀಯ ವೇತನ ಪರಿಷ್ಕರಣೆ ಒಪ್ಪಂದ ಜಾರಿ ವಿಳಂಬ ಖಂಡಿಸಿ ಮತ್ತು ತ್ವರಿತವಾಗಿ ವೇತನ ಪರಿಷ್ಕರಣೆ ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಕರೆ ನೀಡಿದ್ದ ಅಖೀಲ ಭಾರತ ಬ್ಯಾಂಕ್ ಮುಷ್ಕರದ ಮೊದಲ ದಿನ ಶುಕ್ರವಾರ ಮಂಡಿಪೇಟೆ ಯ ಕೆನರಾ ಬ್ಯಾಂಕ್ ಆವರಣದಲ್ಲಿ ಪ್ರತಿಭಟನಾ ಮತಪ್ರದರ್ಶನ ನಡೆಸಲಾಯಿತು.
2007 ರ ನ. 1 ರಿಂದಲೇ ಜಾರಿಗೆ ಬರಬೇಕಾಗಿದ್ದ ಬ್ಯಾಂಕ್ ಉದ್ಯೋಗಿಗಳ 11 ನೇ ದ್ವಿ ಪಕ್ಷೀಯ ವೇತನ ಪರಿಷ್ಕರಣೆ ಒಪ್ಪಂದ ಈವರೆಗೂ ಜಾರಿಗೆ ಬಂದಿಲ್ಲ. ಕೇಂದ್ರ ಸರಕಾರ ಮತ್ತು ಐಬಿಎ ನ ಉದಾಸೀನ ಹಾಗೂ ನಿರ್ಲಕ್ಷ್ಯತನದ ಧೋರಣೆಯೇ ವಿಳಂಬಕ್ಕೆ ಕಾರಣ ಎಂದು ಪ್ರತಿಭಟನಾ ನಿರತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
11 ನೇ ದ್ವಿ ಪಕ್ಷೀಯ ವೇತನ ಪರಿಷ್ಕರಣೆ ಒಪ್ಪಂದ ಜಾರಿಗೆ ಸಂಬಂಧಿಸಿದಂತೆ
ಯುಎಫ್‌ಬಿಯು ಸಂಘಟನೆಗಳ ಹಾಗೂ ಐಬಿಎ ಪ್ರತಿನಿಧಿ ಗಳ ನಡುವೆ ಸುಮಾರು 20 ಕ್ಕೂ ಹೆಚ್ಚು ಸಭೆ ನಡೆದಿವೆ. ಆದರೆ, ಆಡಳಿತ ಮಂಡಳಿಗಳ ಹಠಮಾರಿತನದಿಂದಾಗಿ 27 ತಿಂಗಳು ನಂತರವೂ ನ್ಯಾಯಯುತವಾದ ವೇತನ ಪರಿಷ್ಕರಣೆ ಜಾರಿಗೆ ಬಂದಿಲ್ಲ. ಕೇಂದ್ರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಕೂಡಾ ವಿಫಲವಾಗಿರುವ ಹಿನ್ನಲೆಯಲ್ಲಿ ಎರಡು ದಿನಗಳ ಮುಷ್ಕರ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ವೇತನ ಪರಿಷ್ಕರಣೆ ಬೇಡಿಕೆಯ ಜೊತೆಗೆ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯ ಜಾರಿ,
ಮೂಲ ವೇತನದಲ್ಲಿ ವಿಶೇಷ ಭತ್ಯೆ ವಿಲೀನ, ಹೊಸ ಪಿಂಚಣಿ ವ್ಯವಸ್ಥೆ ರದ್ದು, ಹಳೆಯ
ಪಿಂಚಣಿ ಸೌಲಭ್ಯದ ವಿಸ್ತರಣೆ, ಕಳೆದ 25 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಪರಿಷ್ಕರಣೆ, ಬ್ಯಾಂಕುಗಳ ಒಟ್ಟಾರೆ ನಿರ್ವಹಣಾ ಲಾಭದ ಆಧಾರದಲ್ಲಿ ಸಿಬ್ಬಂದಿ ಕಲ್ಯಾಣ ನಿಧಿ ನಿಗದಿ, ನಿವೃತ್ತಿ ಸಮಯದಲ್ಲಿ ಬರುವ ಹಣವನ್ನು ಸಂಪೂರ್ಣವಾಗಿ ತೆರಿಗೆಮುಕ್ತಗೊಳಿಸುವುದು ಮುಂತಾದ ಬೇಡಿಕೆ ಈಡೇರಿಸಬೇಕು ಎಂದು
ಒತ್ತಾಯಿಸಿದರು.
ಅವೈಜ್ಞಾನಿಕವಾಗಿ ಮಾಡುತ್ತಿರುವ ಬ್ಯಾಂಕುಗಳ ವಿಲೀನ ಪ್ರಕ್ರಿಯೆ
ನಿಲ್ಲಿಸಬೇಕು. ಉದ್ದೇಶಪೂರ್ವಕವಾಗಿ ಸಾಲ ಮರು ಪಾವತಿಸದಿರುವ ಬೃಹತ್ ಖಾಸಗಿ ಬಂಡವಾಳಶಾಹಿಗಳಿಂದ ಸಾಲ ಮರುಪಾವತಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು
ಆಗ್ರಹಿಸಿದರು. ಅತೀ ಶೀಘ್ರವೇ ವೇತನ ಪರಿಷ್ಕರಣೆ ಹಾಗೂ ಇನ್ನಿತರ ಬೇಡಿಕೆಗಳ
ಈಡೇರಿಸದಿದ್ದಲ್ಲಿ ಮಾರ್ಚ್‌ನಲ್ಲಿ 2 ದಿನಗಳ ಮುಷ್ಕರ ಹಾಗೂ ಏ. 1 ರಿಂದ ಅನಿರ್ದಿಷ್ಟಾವ ಧಿ ಕಾಲದವರೆಗೆ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಜಿಲ್ಲಾ ಸಂಚಾಲಕ
ಕೆ.ರಾಘವೇಂದ್ರ ನಾಯರಿ, ಕೆ.ಎನ್. ಗಿರಿರಾಜ…, ಆರ್.ಶ್ರೀನಿವಾಸ್, ವಾಗೀಶ್, ಪಿ.ಆರ್.ಪುರುಷೋತ್ತಮ…, ಜಿ.ರಂಗಸ್ವಾಮಿ, ಎಂ.ಆರ್.ರಾಘವೇಂದ್ರ, ಕಾರ್ಮಿಕ ಮುಖಂಡ ಕೆ.ಎಲ್.ಭಟ್, ವಿ.ನಂಜುಂಡೇಶ್ವರ, ಜಿ.ರಂಗಸ್ವಾಮಿ, ಅಜಿತ್‌ಕುಮಾರ್ ನ್ಯಾಮತಿ, ಎಚ್
.ನಾಗರಾಜ…, ಎನ್.ಟಿ.ಯರ್ರಿಸ್ವಾಮಿ, ವಿಶ್ವನಾಥ ಬಿಲ್ಲವ, ಆನಂದ ಮೂರ್ತಿ, ಆರ್.ಆಂಜನೇಯ, ನಾಗವೇಣಿ ನರೇಂದ್ರಕುಮಾರ್, ಉಷಾ ಆಂಜನೇಯ,
ಮಮತ, ಎಚ್.ಸೂಗುರಪ್ಪ, ಜಿ.ಎಂ. ಶಿವಕುಮಾರ, ಗುರುರಾಜ ಭಾಗವತ,
ಎನ್.ಎಚ್.ಮಂಜುನಾಥ, ಕೆ.ರವಿಶಂಕರ್, ಸುಮಂತ್ ಭಟ… ಇತರರು ಇದ್ದರು. ಶನಿವಾರ ಬೆಳಗ್ಗೆ 11ಕ್ಕೆ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಭಾಗೀಯ ಕಚೇರಿ ಆವರಣದಲ್ಲಿ ಮತಪ್ರದರ್ಶನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.