ದುಗ್ಗಮ್ಮನ ಜಾತ್ರೇಲಿ ಕುರಿ, ಕೋಳಿ… ಬಲು ದುಬಾರಿ!
Team Udayavani, Mar 4, 2020, 11:20 AM IST
ದಾವಣಗೆರೆ: ಈ ಬಾರಿಯ ದಾವಣಗೆರೆಯ ದುಗ್ಗಮ್ಮನ ಜಾತ್ರೇಲಿ ಕುರಿ, ಕೋಳಿ… ಬಲು ದುಬಾರಿ!.
ಹೌದು, ಸಾಮಾನ್ಯ ದಿನಗಳಲ್ಲಿನ ಬೆಲೆಗೂ ಜಾತ್ರಾ ಸಂದರ್ಭದಲ್ಲಿನ ಬೆಲೆಗೂ ಅಜಗಜಾಂತರ ಹೆಚ್ಚಳ ಆಗಿದೆ. ಬೇರೆ ದಿನಗಳಲ್ಲಿ 450 ರೂಪಾಯಿ ಆಸುಪಾಸಿನಲ್ಲಿರುವ ಕೆಜಿ ಕುರಿ ಮಾಂಸದ ಬೆಲೆ ಜಾತ್ರೆ ಬಂದಿರುವ ಕಾರಣಕ್ಕೆ 650- 700 ರೂಪಾಯಿ ದಾಟಿರುವುದು ಜಾತ್ರೆ ಮಾಡುವಂತಹವರಿಗೆ ಬಿಸಿ ತುಪ್ಪವಾಗಿದೆ.
ಕುರಿ ಮಾಂಸದ ರೇಟು ಕೇಳಿಯೇ ಜನರು ಬೆವರುವಂತಾಗಿದೆ. ಆದರೆ, ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆ ಮಾಡುವಾಗ ಮಾಂಸದ ದರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ರೇಟು ಜಾಸ್ತಿ ಅಂತ ಜಾತ್ರೆ ಮಾಡೋದ ಬಿಡೋಕೆ ಆಗುತ್ತಾ. ಎಷ್ಟೇ ರೇಟ್ ಆದರೂ ಹಬ್ಬ ಮಾಡಬೇಕಲ್ಲ. ನಮ್ಮಮ್ಮನ ಹಬ್ಬ ಮಾಡಿದರೆ ಅಮ್ಮ ನಮ್ಮ ಕೈ ಬಿಡೊಲ್ಲ… ಎನ್ನುತ್ತಾರೆ ವಿನೋಬ ನಗರ ನಿವಾಸಿ ಗಣೇಶ್.
ಬೇರೆ ಟೈಮ್‌ನಲ್ಲಿ 450 ರೂಪಾಯಿ ರೇಟು. ಹಬ್ಬ ಅಲ್ವಾ ಅದಕ್ಕೆ ಈಗ ರೇಟು ಜಾಸ್ತಿ. ಹಬ್ಬ ಅಂತಾ ಸಿಕ್ಕಾ ಪಟ್ಟೆ ರೇಟು ಜಾಸ್ತಿ ಮಾಡೋಕೆ ಹೋಗೊಲ್ಲ. ವ್ಯಾಪಾರ ನೋಡಿಕೊಂಡು ರೇಟು ಫಿಕ್ಸ್ ಆಗುತ್ತದೆ. ಏನೇ ಆದರೂ 650 ರೂಪಾಯಿ ದಾಟುತ್ತದೆ ಎಂದು ಬಾರ್‌ಲೈನ್ ರಸ್ತೆಯಲ್ಲಿನ ಮಟನ್ ಮಾರ್ಕೆಟ್ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಗಾಗಿ ಕುರಿ ಸಾಕುವವರು ಇದ್ದಾರೆ. ಹಬ್ಬಕ್ಕಾಗಿ ಖರೀದಿ ಮಾಡುವರು ಇದ್ದಾರೆ. ಕುರಿ ಬೆಲೆ 10 ಸಾವಿರದಿಂದ 40 ಸಾವಿರದವರೆಗೆ ಇದೆ. ಈ ವರ್ಷ ಕೆಜಿ ಲೆಕ್ಕದ ಆಧಾರದಲ್ಲಿ ಕುರಿ ಬೆಲೆ ಫಿಕ್ಸ್ ಮಾಡುತ್ತಾ ಇರುವುದರಿಂದ ಬೆಲೆ ಹೆಚ್ಚಾಗಿದೆ ಎಂದು ಅನೇಕರು ಹೇಳುತ್ತಾರೆ.
ಮೊದಲೆಲ್ಲ ಕುರಿ ಹಲ್ಲು, ಮಾಂಸ ಎಷ್ಟು ಸಿಗಬಹುದು ಎಂಬ ಲೆಕ್ಕಾಚಾರದ ಮೇಲೆಯೇ ರೇಟು ಕೇಳ್ಳೋದು ನಡೆಯುತ್ತಿತ್ತು. ಈಗ ವ್ಯಾಪಾರಸ್ಥರು ಕೆಜಿ ಮಾಂಸದ ಲೆಕ್ಕಾ ಹಾಕಿ ರೇಟು ಹೇಳುತ್ತಾರೆ. ಹಂಗಾಗಿಯೇ ರೇಟು ಜಾಸ್ತಿ ಆಗ್ತಾ ಇದೆ. ಹಬ್ಬ ಅಂತಾ ಅವರು ಡಿಮ್ಯಾಂಡ್ ಮಾಡ್ತಾರೆ. ಹಬ್ಬ ಬಿಡೊಂಗೆ ಇಲ್ಲ ಅಂತ ಏನೋ ಚೌಕಾಸಿ ಮಾಡಿ, ಖರೀದಿ ಮಾಡುತ್ತೇವೆಂದು ಅನೇಕರು ಹೇಳುತ್ತಾರೆ.
ಕೋಳಿಗೆ ಕೊರೊನಾ ಭೀತಿ…!?
ದುಗ್ಗಮ್ಮನ ಜಾತ್ರೆಯಲ್ಲಿ ಕುರಿಗಿಂತಲೂ ಹೆಚ್ಚಾಗುವ ಬಳಸಲಾಗುವ ಕೋಳಿಗಳಿಗೆ ದೂರದ ಕೊರೊನಾ ವೈರಸ್ ಭೀತಿ ಕಾಡುತ್ತಿದೆ. ಅದೇನೋ ಕೊರೊನಾ… ಅಂತಾ ಬಂದೈತೆ ಅಂತಲ್ಲ. ಹಂಗಾಗಿ ಕೋಳಿ ವ್ಯಾಪಾರ ಸ್ವಲ್ಪ ಕಡಿಮೆ ಆಗಿದೆ. ಬುಧವಾರ ಬೆಳಗ್ಗೆ ಆಗೋ ವ್ಯಾಪಾರದ ಮೇಲೆ ಏನಾದರೂ ಹೇಳಬಹುದು. ಬೇರೆ ದಿನ ಕೆಜಿಗೆ 140-150 ರೂಪಾಯಿ ರೇಟಿತ್ತು. ಹಬ್ಬ ಅಂತ 170-180 ರೂಪಾಯಿ ಆಗಬಹುದು ಎಂದು ಕೋಳಿ ವ್ಯಾಪಾರಿ ಬಷೀರ್ ಹೇಳುತ್ತಾರೆ.
ಶಾಮಿಯಾನ ಭರಾಟೆ..
ಬುಧವಾರ, ಗುರುವಾರದ ಖಾರದ ಹಬ್ಬ(ಮಾಂಸದ ಊಟ)ಕ್ಕಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ನೆಂಟರು, ಆಪ್ತರು, ಬಂಧು-ಬಳಗ ಬರುವ ಕಾರಣಕ್ಕೆ ಎಲ್ಲಿ ನೋಡಿದರೂ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಹಳೆ ಭಾಗದಲ್ಲಂತೂ ಎಲ್ಲಿ ನೋಡಿದರೂ ಶಾಮಿಯಾನದ ಭರಾಟೆ ಜೋರಾಗಿಯೇ ಇದೆ. ಟೇಬಲ್ ಊಟದ ವ್ಯವಸ್ಥೆಯೂ ಕಂಡು ಬರುತ್ತಿದೆ. ಕುರಿ… ಕಡಿಯುವುದು, ಪೀಸ್ ಹಾಕುವುದು, ಇತರೆ ವ್ಯವಸ್ಥೆ ಮಾಡುವುದರ ಮೇಲೆಯೇ ದುಗ್ಗಮ್ಮನ ಜಾತ್ರೆ ಆಚರಣೆ ಡಿಸೈಡ್… ಮಾಡಲಾಗುತ್ತದೆ ಎಂಬ ಪ್ರತಿಷ್ಠೆಯ ಕಾರಣಕ್ಕಾಗಿಯೇ ಜನರು ಎಷ್ಟೇ ದರವಾದರೂ ಚಿಂತೆ ಮಾಡದೇ ಹಬ್ಬ ಮಾಡುತ್ತಿದ್ದಾರೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.