ಕೊರೊನಾಗೆ ಹೋಳಿ ಸವಾಲ್‌!

ಕೊರೊನಾ ವೈರಸ್‌ಗೆ ಹೆದರದೇ ಒಂದೆಡೆ ಸೇರಿ ಡಿಜೆ ತಾಳಕ್ಕೆ ಹೆಜ್ಜೆ ಹಾಕಿ ಆನಂದಿಸಿದ ಜನ ಪೊಲೀಸರ ಎಚ್ಚರಿಕೆಗೆ ಬಾಗದ ಯುವಕರು

Team Udayavani, Mar 11, 2020, 11:25 AM IST

11-March-3

ದಾವಣಗೆರೆ: ಕೊರೊನಾ ವೈರಸ್‌ ಮಹಾ ಮಾರಿಯ ಭೀತಿ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದ್ದರೂ ದಾವಣಗೆರೆಯ ಮಂದಿಯಂತೂ ಮಂಗಳವಾರ ಯಾವುದಕ್ಕೂ ಕಿಂಚಿತ್ತೂ ಹೆದರದೆ, ಬೆದರದೆ, ರಾಜಾರೋಷ, ಬಿಂದಾಸ್‌ ಆಗಿ ಬಣ್ಣದ ಹಬ್ಬ… ಹೋಳಿ ಆಚರಿಸಿದರು!.

ಊಹೆಗೂ ನಿಲುಕದ ರೀತಿ ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹೆದರುವ ಅಗತ್ಯ ಇಲ್ಲ. ಆದರೆ, ಜಾಗೃತವಹಿಸಿ. ಭಾರೀ ಜನಸಂದಣಿಯತ್ತ ಸುಳಿಯಬೇಡಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

ದಾವಣಗೆರೆಯಲ್ಲಿ ಹೋಳಿ ಸಂಭ್ರಮದ ಮೇಲೆ ಲವಶೇಷವೂ ಕೊರೊನಾ ವೈರಸ್‌ ಭೀತಿ ಕಾಣ ಬರಲಿಲ್ಲ. ಎಂದಿನಂತೆಯೇ ಸಡಗರ, ಸಂಭ್ರಮದಿಂದಲೇ ಬಣ್ಣದ ಹಬ್ಬವನ್ನು ಆಚರಿಸಲಾಯಿತು.

ದಾವಣಗೆರೆಯ ರಾಂ ಆ್ಯಂಡ್‌ ಕೋ ವೃತ್ತ, ಚರ್ಚ್‌ ರಸ್ತೆ, ವಿನೋಬ ನಗರ, ಯುಬಿಡಿಟಿ ಹಾಸ್ಟೆಲ್‌, ಕೆಲವಾರು ರಸ್ತೆ, ಪ್ರಮುಖ ವೃತ್ತಗಳಲ್ಲಿ ಯಾವುದನ್ನೂ ಲೆಕ್ಕಿಸದೆ ಹೋಳಿ ಸಂಭ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಹಬ್ಬನಾ ಇಲ್ಲ …ಕೊರೊನಾ ವೈರಸ್ಸಾ… ಎಂದು ಸವಾಲಿಗೆ ಪ್ರತಿ ಸವಾಲು ಎನ್ನುವಂತೆ ಜನರು ಹೋಳಿ ಆಚರಿಸಿದರು.

ಬೆಳ್ಳಂಬೆಳಗ್ಗೆಯಿಂದಲೇ ಹೋಳಿಗೆ ಚಾಲನೆ ನೀಡಲಾಗಿತ್ತು. ಹೋಳಿ ಹಬ್ಬದ ಹಾಟ್‌ಸ್ಪಾಟ್‌… ಎಂದೇ ಇತ್ತೀಚಿನ ವರ್ಷದಲ್ಲಿ ಗುರುತಿಸಲ್ಪಡುವ ರಾಂ ಆ್ಯಂಡ್‌ ಕೋ ವೃತ್ತದಲ್ಲಂತೂ ಕಾಲಿಡಲೂ ಜಾಗ ಇಲ್ಲದಂತೆ ಸಾವಿರಾರು ಯುವಕರ ದಂಡೇ ನೆರದಿತ್ತು.

ಡಿಜೆ ಯಿಂದ ಹೊರ ಹೊಮ್ಮುತ್ತಿದ್ದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಅಕ್ಕ ನಿನ್ನ ಮಗಳ ಜೊತೆ…, ಇತರೆ ಹಾಡುಗಳಿಗೆ ಭರ್ಜರಿ ಸ್ಟೆಪ್‌ ಹಾಕಿದರು. ಮೈ ಮೇಲೆ ಪರಿವೇ ಇಲ್ಲದಂತೆ ಕುಣಿದು ಕುಪ್ಪಳಿಸಿದರು.

ಕೇಕೆ ಹಾಕಿದರು. ಮೊಟ್ಟೆ ಒಡೆದರು, ಬಟ್ಟೆ ಹರಿದರು, ವಿದ್ಯುತ್‌ ತಂತಿಯ ಮೇಲೆ ಹಾಕುವ ಮೂಲಕ ಆನಂದ ಅನುಭವಿಸಿದರು. ಕೆಲವರನ್ನು ಮೇಲಕ್ಕೆ ತೂರಿ ಕ್ಯಾಚ್‌ ಹಿಡಿದರು. ಕೆಲವರು ಆಯ ತಪ್ಪಿ ಬಿದ್ದರು. ಒಟ್ಟಾರೆಯಾಗಿ ಅವರದ್ದೇ ಲೋಕದಲ್ಲಿ ಇರುವಂತೆ ಹಬ್ಬವನ್ನಾಚರಸಿದರು. ತಮ್ಮ ಅತ್ಯಾಪ್ತರಿಗೆ ಬಣ್ಣ ಹಾಕುವುದಕ್ಕೆ ಬೆನ್ನಟ್ಟಿ ಹೋಗುವುದು, ಹಾಗೂ ಹೀಗೂ ಅವರನ್ನ ಹಿಡಿದು ಬೇಡ ಬೇಡ ಎಂದರೂ ಬಣ್ಣ ಹಾಕಿ, ತಲೆ ಮೇಲೆ ಮೊಟ್ಟೆ ಒಡೆದು ಯುದ್ಧವನ್ನೇ ಗೆದ್ದವರಂತೆ ಸಂಭ್ರಮಿಸುವುದು ಸಾಮಾನ್ಯವಾಗಿತ್ತು.

ಕೆಲವರನ್ನ ಸಿನಿಮಾ ಮಾದರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಫಾಲೋ ಮಾಡಿ, ಬಣ್ಣ ಹಾಕುತ್ತಿದ್ದರು. ಪ್ರಮುಖ ವೃತ್ತ, ರಸ್ತೆಗಳಲ್ಲಿ ಮಾತ್ರವಲ್ಲ ಗಲ್ಲಿ, ಬೀದಿ, ವಠಾರದಲ್ಲೂ ಬಣ್ಣದ ಹಬ್ಬದ ಸಂಭ್ರಮ ಕಂಡು ಬಂದಿತು.

ಚಿಕ್ಕ ಮಕ್ಕಳು, ಯುವತಿಯರು, ಯುವಕರು, ವಯೋವೃದ್ಧರಾದಿಯಾಗಿ ಯಾವುದೇ ವಯೋ ಮಾನ, ಜಾತಿ, ಧರ್ಮದ ಹಂಗಿಲ್ಲದೆ ಹಬ್ಬ ಆಚರಿಸಿದರು. ತೀರಾ ಆಪ್ತರು, ಬೇಕಾದವರು, ಬಂಧುಗಳ ಮನೆ ಮನೆಗೆ ತೆರಳಿ ಬಣ್ಣ ಹಾಕಿದರು. ಗಂಡು ಮಕ್ಕಳು ಮಾತ್ರವಲ್ಲ ಹೆಣ್ಣು ಮಕ್ಕಳು ಸಹ ದ್ವಿಚಕ್ರ ವಾಹನ, ಕಾರುಗಳಲ್ಲಿ ದೂರ ದೂರದ ಪ್ರದೇಶದಲ್ಲಿನ ಮನೆಗೆ ಹೋಗಿ ಬಣ್ಣ ಹಾಕಿದರು. ರಾಂ ಆ್ಯಂಡ್‌ ಕೋ ವೃತ್ತದಲ್ಲಿ ಒಂದು ಕಡೆ ಯುವತಿಯರಿಗಾಗಿಯೇ ಪ್ರತ್ಯೇಕವಾಗಿ ಷವರ್‌ ಬಾತ್‌, ಡಿಜೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು, ಚಿಕ್ಕ ಮಕ್ಕಳು ಬಣ್ಣದಾಟದಲ್ಲಿ ಸಂಭ್ರಮಿಸಿದರು. ಸೇರಿಗೆ ಸೆವ್ವಾ ಸೇರು… ಎನ್ನುವಂತೆ ಸಖತ್‌ ಡ್ಯಾನ್ಸ್‌ ಮಾಡಿದರು.

ಹೋಳಿ ಹಿನ್ನೆಲೆಯಲ್ಲಿ ತ್ರಿಬಲ್‌ ರೈಡಿಂಗ್‌, ಬಟ್ಟೆ ಹರಿಯುವುದು, ಬಟ್ಟೆ ಕಿತ್ತು ಹಾಕಿಕೊಂಡು ಬರೀ ಮೈಯಲ್ಲಿ ಅಸಭ್ಯವಾಗಿ ವರ್ತಿಸುವುದು, ಸೈಲೆನ್ಸರ್‌ ಕಿತ್ತು ಕರ್ಕಶ ಧ್ವನಿಯೊಂದಿಗೆ ಬೈಕ್‌ ರೈಡಿಂಗ್‌ ಮಾಡುವುದು, ರಸ್ತೆ ಮಧ್ಯೆದಲ್ಲಿ ನಿಂತು ಡ್ಯಾನ್ಸ್‌ ಮಾಡುವುದನ್ನು ನಿಷೇಧಿಸಲಾಗಿತ್ತಾದರೂ ಅಂತಹ ಎಲ್ಲವೂ ಕಂಡು ಬಂದವು. ಕೆಲವಡೆ ಹಬ್ಬದಲ್ಲಿ ಭಾಗವಹಿಸಿದ್ದ ಕೆಲವರ ವರ್ತನೆಯಂತೂ ತೀರಾ ಅಸಹ್ಯಕರವಾಗಿತ್ತು. ಹೋಳಿ ಹಬ್ಬದಲ್ಲಿ ವಿಕೃತಿ ಮೇಳೈಸುವುದು ಹೆಚ್ಚಾಗುತ್ತಿರುವುದು ಇಂದು ಸಹ ಮುಂದುವರೆಯಿತು.

ತ್ರಿಬಲ್‌ ರೈಡಿಂಗ್‌, ಬರೀ ಮೈಯಲ್ಲಿ ಬೈಕ್‌ ರೈಡಿಂಗ್‌ ಮಾಡುತ್ತಿದ್ದವ ಕೆಲ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಅನೇಕ ದ್ವಿಚಕ್ರ ವಾಹನ ಸೀಜ್‌ ಮಾಡಿದರು. ಕೆಲವರು ರಾಸಾಯನಿಕ ಬಣ್ಣಗಳ ಬದಲಿಗೆ ಹರ್ಬಲ್‌ ಬಣ್ಣಗಳನ್ನು ಬಳಸಿದರು. ಅರಿಶಿನ, ಮೊಸರು, ದಾಸವಾಳ ಹೂವಿನ ಪುಡಿ ಮಿಶ್ರಣದ ಬಣ್ಣ ಬಳಸುವ ಮೂಲಕ ಇತರರಿಗೆ ಮಾದರಿಯಾದರು. ಮನೆ, ಗಲ್ಲಿ, ವಠಾರ, ಸರ್ಕಲ್‌, ಹಾಸ್ಟೆಲ್‌ಗ‌ಳಲ್ಲಿ ಹೋಳಿ ಸಂಭ್ರಮ ಕಂಡು ಬಂದಿತು. ಕೆಲವು ಕಡೆ ಮಡಕೆ… ಒಡೆಯುವ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು. ಮಡಕೆ ಒಡೆಯುವುದಕ್ಕೆ ಪ್ರಯತ್ನಿಸುತ್ತಿದ್ದವರ ಮೇಲೆ ನೀರು ಎರೆಚುವುದು, ನೀರಿನ ಎರೆಚಾಟಕ್ಕೆ ಮೇಲಕ್ಕೆ ಹತ್ತಿದವರು ಕೆಳಕ್ಕೆ ಬೀಳುವುದು, ಮತ್ತೆ ಮೇಲೆ ಹತ್ತಿ, ಮಡಕೆ ಒಡೆಯುವುದು ಸಖತ್‌ ಮಜಾ ನೀಡುವಂತಿತ್ತು.

ಮಧ್ಯಾಹ್ನ 1 ಆಗುತ್ತಿದ್ದಂತೆ ಪೊಲೀಸರು ಹೋಳಿ ಆಡುತ್ತಿದ್ದವರನ್ನ ತೆರವುಗೊಳಿಸಿದರು. ಹೋಳಿ ನಂತರ ಮನೆ, ಚಾನೆಲ್‌ಗ‌ಳಿಗೆ ತೆರಳಿದರು. ರಾಂ ಆ್ಯಂಡ್‌ ಕೋ ವೃತ್ತದಲ್ಲಿ ಎಲ್ಲೆಂದರಲ್ಲಿ ಬಟ್ಟೆ, ಚಪ್ಪಲಿ ರಾಶಿ ಕಂಡು ಬಂದಿತು. ಮೊಟ್ಟೆಯ ಗಬ್ಬು ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿತ್ತು.

ಹೋಳಿ ಹಿನ್ನೆಲೆಯಲ್ಲಿ ಅಶೋಕ ರಸ್ತೆ, ಹದಡಿ ರಸ್ತೆ, ಹಳೆ ಬಸ್‌ ನಿಲ್ದಾಣ, ಎವಿಕೆ ರಸ್ತೆ ಒಳಗೊಂಡಂತೆ ಅನೇಕ ಕಡೆ ಆಘೋಷಿತ ಬಂದ್‌ ವಾತಾವರಣ ಇತ್ತು. ಅಂಗಡಿ, ಹೋಟೆಲ್‌, ವಾಣಿಜ್ಯ ಸಂಕೀರ್ಣ ಮುಚ್ಚಲಾಗಿತ್ತು. ಸಂಚಾರ ವಿರಳವಾಗಿತ್ತು. ಮಧ್ಯಾಹ್ನದ ನಂತರವೇ ಸಹಜ ಸ್ಥಿತಿ ಕಂಡು ಬಂದಿತು.

ಟಾಪ್ ನ್ಯೂಸ್

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.