ಮಾ.15ರೊಳಗೆ ಸಂಪೂರ್ಣ ಅನುದಾನ ಬಳಸಿ
ಪ್ರಗತಿ ಪರಿಶೀಲನಾ ಸಭೆ ಉಳಿದರೆ ಅನುದಾನ ವಾಪಸ್‌ಗುಣಮಟ್ಟದ ಕೆಲಸವಾಗಲಿ
Team Udayavani, Feb 12, 2020, 11:22 AM IST
ದಾವಣಗೆರೆ: ಇಲಾಖೆಗಳ ಅನುದಾನ ವಾಪಸ್ಸಾಗದಂತೆ ಶೇ. 100 ರಷ್ಟು ಅನುದಾನವನ್ನು ಮಾ.15ರೊಳಗೆ ಬಳಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಗಳಿಗೆ ಬಂದಿರುವ ಅನುದಾನ ಹಿಂದಕ್ಕೆ ಹೋಗದಂತೆ ನಿಗದಿತ ಕಾಲಾವಧಿಯಲ್ಲಿ ಸಂಪೂರ್ಣವಾಗಿ ಬಳಕೆ ಮಾಡಬೇಕು ಹಾಗೂ ಗುಣಮಟ್ಟದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಎಲ್ಲಾ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಮಾ. 15ರ ಒಳಗೆ ಬಳಕೆ ಮಾಡಲೇಬೇಕು. ಇಲ್ಲದೇ ಹೋದಲ್ಲಿ ಅನುದಾನ ವಾಪಸ್ಸಾಗಲಿದೆ. ಹಾಗಾಗಿ ಉಳಿದಿರುವ ಅಭಿವೃದ್ಧಿ, ಇತರೆ ಕೆಲಸಕ್ಕೆ ಬಳಕೆ ಮಾಡಬೇಕು ಎಂದು ಉಪ ಕಾರ್ಯದರ್ಶಿ ಬಿ. ಆನಂದ್ ಸೂಚಿಸಿದರು.
ಇಲಾಖೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನ ಖರ್ಚು ಮಾಡಬೇಕು. ಆದರೆ, ಕೆಲವಾರು ಇಲಾಖೆಯಲ್ಲಿ ಬಳಕೆ ಮಾಡಲಾಗಿಲ್ಲ. ಮಾರ್ಚ್ ನಂತರ ಉಳಿಯಬಹುದಾದ ಅನುದಾನದ ಪ್ರತ್ಯೇಕವಾಗಿ ಮಾಹಿತಿ ನೀಡಿ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಲೋಕೇಶ್ವರ್ ಸೂಚಿಸಿದರು.
ಮಾದರಿ ಹಾಸ್ಟೆಲ್ ಮಾಡಿ: ಹಾಸ್ಟೆಲ್‌ಗಳಿಗೆ ಬಾಡಿಗೆ ಪಡೆಯುವ ಕಟ್ಟಡಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇತರೆ ಮೂಲಭೂತ ಸೌಲಭ್ಯಗಳು ಇರದ ಬಗ್ಗೆ ಸಾಕಷ್ಟು ದೂರು ಬಂದಿವೆ.
ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದಾಗಲೂ ಈ ಸಮಸ್ಯೆ ಕಂಡು ಬಂದಿದೆ. ಹಾಗಾಗಿ ಯಾವುದೇ ಹಾಸ್ಟೆಲ್ ಗೆ ಕಟ್ಟಡವನ್ನು ಬಾಡಿಗೆ ಪಡೆಯುವಾಗ ಅಗತ್ಯ ಮೂಲಭೂತ ಸೌಲಭ್ಯ ಇರುವುದನ್ನ ಖಾತರಿ ಪಡಿಸಿಕೊಳ್ಳಬೇಕು. ಸ್ವಂತ ಕಟ್ಟಡ ಹೊಂದಿರುವ ಹಾಸ್ಟೆಲ್‌ಗಳಲ್ಲಿ ಸೌರ ವಿದ್ಯುತ್, ಇತರೆ ಸೌಲಭ್ಯ ಒದಗಿಸುವ ಮೂಲಕ ಮಾದರಿ ಹಾಸ್ಟೆಲ್ ಮಾಡಿ ಎಂದು ಉಪ ಕಾರ್ಯದರ್ಶಿ ಬಿ. ಆನಂದ್ ಸೂಚಿಸಿದರು.
ನಮಗೆ ತುರ್ತು ಮತ್ತು ಅನಿವಾರ್ಯವಾಗಿ ಬೇಕು ಎಂದು ಕಟ್ಟಡಗಳ ಬಾಡಿಗೆ ಪಡೆಯುತ್ತೇವೆ. ಅನೇಕ ಹಾಸ್ಟೆಲ್‌ಗಳು ಕಿಷ್ಕಿಂಧೆಯಂತೆ ಇರುತ್ತವೆ. ಮಕ್ಕಳನ್ನು ಜೈಲಿಗೆ ಹಾಕಿದಂತೆ ಇರುತ್ತದೆ. ಮಾಲೀಕರು ಸಹ ಹಾಸ್ಟೆಲ್‌ಗೆ ನೀಡಬೇಕು ಎಂದೇನು ಹೆಚ್ಚಾಗಿ ಶೌಚಾಲಯ ಇತರೆ ಮೂಲಭೂತ ಸೌಲಭ್ಯ ಒದಗಿಸಿರುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಬಚ್ಚಲು ಮನೆ ಇತರೆ ಅಗತ್ಯ ಮೂಲಭೂತ ಸೌಲಭ್ಯ ಮಾಡಿಕೊಟ್ಟರೆ ಬಾಡಿಗೆಗೆ ಹೋಗಿ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಲೋಕೇಶ್ವರ್ ಸೂಚಿಸಿದರು.
ಕೆಲವು ಕಡೆ ವಿದ್ಯಾರ್ಥಿನಿಯರು ರಾತ್ರಿ ವೇಳೆ ಊಟಕ್ಕೆ ದೂರ ಹೋಗುವುದು ಇದೆ. ವಿದ್ಯಾರ್ಥಿನಿಯರಿಗೆ ಏನಾದರೂ ಅವಘಡವಾದಲ್ಲಿ ಸಂಬಂಧಿತ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ. ಹಾಗಾಗಿ ವಸತಿ ಇರುವ ಕಡೆಯೇ ಅಡುಗೆ ವ್ಯವಸ್ಥೆ ಮಾಡಬೇಕು ಎಂದು ಉಪ ಕಾರ್ಯದರ್ಶಿ ಬಿ. ಆನಂದ್ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಎಸ್.ಆರ್. ಗಂಗಪ್ಪಗೆ ಸೂಚಿಸಿದರು.
ಕೆಲವು ಹಾಸ್ಟೆಲ್‌ಗಳಲ್ಲಿ ಮಂಚ ನೀಡಿದ್ದರೆ, ಹಾಸಿಗೆ ನೀಡಿಲ್ಲ. ಕೆಲ ಹಾಸ್ಟೆಲ್‌ಗಳಲ್ಲಿ ಹಾಸಿಗೆ ನೀಡಿದ್ದರೆ ಮಂಚ ನೀಡಿಲ್ಲ ಏಕೆ ಎಂದು ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಪ್ರಶ್ನಿಸಿದರು. ಸ್ವಂತ ಕಟ್ಟಡ ಹೊಂದಿರುವ ಹಾಸ್ಟೆಲ್‌ಗಳಿಗೆ ಜೂನ್‌ಗೆ ಮಂಚ, ಹಾಸಿಗೆ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ್ ಕುಂಬಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.