ದಾವಿವಿ ಬೆಳೆವಣಿಗೆಗೆ ಪ್ರೊ| ಬಕ್ಕಪ್ಪರ ಪಾತ್ರ ಮಹತ್ವದ್ದು


Team Udayavani, Feb 3, 2017, 12:35 PM IST

dvg1.jpg

ದಾವಣಗೆರೆ: ಓರ್ವ ಕುಲಪತಿಗಿಂತಲೂ ಪ್ರೊ| ಬಿ.ಬಕ್ಕಪ್ಪ ದಾವಿವಿಗೆ ಹೆಚ್ಚು ಸೇವೆ ಮಾಡಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಬಿ.ಬಿ ಕಲಿವಾಳ್‌ ಹೇಳಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ನಿರ್ವಹಣಾ ವಿಭಾಗದ ಡೀನ್‌ ಪ್ರೊ| ಬಕ್ಕಪ್ಪನವರ ವಯೋ ನಿವೃತ್ತಿ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಿವಿ ಕಟ್ಟಿ ಬೆಳೆಸುವುದರಲ್ಲಿ ಬಕ್ಕಪ್ಪನವರ ಪಾತ್ರ ಇದೆ.

ನಮಗೆ ಅನ್ನ ನೀಡುವ ಸಂಸ್ಥೆಗೆ ಎಷ್ಟು ಸೇವೆ ಸಲ್ಲಿಸಿದರೂ ಕಡಿಮೆಯೇ. ಈ ವಿಚಾರದಲ್ಲಿ ಬಕ್ಕಪ್ಪನವರ ಸೇವೆ ಶ್ಲಾಘನೀಯ ಎಂದರು. ಪ್ರಾರಂಭ ಹಂತದಿಂದಲೂ ವಿಶ್ವವಿದ್ಯಾನಿಲಯ ಕಟ್ಟಿ ಬೆಳೆಸಿದ ಪ್ರೊ| ಬಕ್ಕಪ್ಪ, ಅನೇಕ ಸಂದರ್ಭಗಳಲ್ಲಿ ಸರಿ ತಪ್ಪುಗಳನ್ನು ಗುರುತಿಸಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಅವರ ಸೇವೆಯನ್ನು ತಮ್ಮನ್ನು ಸೇರಿದಂತೆ ವಿವಿ ಯಾವ ಪ್ರಾಧ್ಯಾಪಕರು, ವಿದ್ಯಾರ್ಥಿಗಳೂ ಮರೆಯುವುದಿಲ್ಲ.

ಮುಂದಿನ ದಿನಗಳಲ್ಲಿಯೂ ಅವರ ಸಲಹೆ, ಸಹಕಾರ, ಮಾರ್ಗದರ್ಶನ ಮುಂದುವರಿಯಲಿ ಎಂದರು. ಪ್ರೊ| ಮುರುಗಯ್ಯ ಮಾತನಾಡಿ, ಕೇವಲ ಸ್ನಾತಕೋತ್ತರ ಕೇಂದ್ರವಾಗಿದ್ದ ಈ ಕ್ಯಾಂಪಸ್‌ ವಿಶ್ವವಿದ್ಯಾನಿಲಯನ್ನಾಗಿಸುವಲ್ಲಿ ಬಕ್ಕಪ್ಪ ಸಾಕಷ್ಟು ಶ್ರಮವಹಿಸಿದ್ದಾರೆ. ಆಗ ಪ್ರಾಧ್ಯಾಪಕರಾಗಿದ್ದರೂ ವಿವಿ ಕಟ್ಟಡ ಕಾಮಗಾರಿಗಳನ್ನು ದಿನನಿತ್ಯ ಪರಿಶೀಲಿಸಿ, ಅಗತ್ಯ ಬದಲಾವಣೆ ಮಾಡಿಸುತ್ತಿದ್ದರು. ಅಲ್ಲದೆ, ಪಠ್ಯಕ್ರಮದಲ್ಲಿ ನಮ್ಮ ವಿಶ್ವವಿದ್ಯಾನಿಲಯ ಭಿನ್ನತೆ ಹೊಂದಿರಬೇಕು ಎಂಬ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಪುನರಚನೆ ಮಾಡಿದರು.

ವಿಭಾಗ ಮಟ್ಟದಲ್ಲಿಯೇ ಐದು ಸಾವಿರಕ್ಕೂ ಹೆಚ್ಚಿನ ಪುಸ್ತಕ ಒಳಗೊಂಡ ಆಂತರಿಕ ಗ್ರಂಥಾಲಯ ಸ್ಥಾಪಿಸುವಲ್ಲಿ ಶ್ರಮಿಸಿದ್ದಾರೆ ಎಂದರು. ಪ್ರೊ| ಬಿ ಬಕ್ಕಪ್ಪ ಮಾತನಾಡಿ, ಒಂದು ವಿಶ್ವವಿದ್ಯಾನಿಲಯಕ್ಕೆ ನಿಲುವಿನ ಜತೆಗೆ ಗುಣಾತ್ಮಕ ಸಂಸ್ಕೃತಿಯ ಅವಶ್ಯಕತೆ ಇದೆ. ಬೋಧಕರು ವಿಷಯ ಗ್ರಹಿಸಿ, ಅರ್ಥೈಸಿಕೊಂಡು ಚರ್ಚೆಗೊಳಪಡಿಸಬೇಕು. 

ವಿಶ್ವವಿದ್ಯಾನಿಲಯದ ನಿಯಮ, ಕಾನೂನುಗಳ ಬಗ್ಗೆ ತಿಳಿದುಕೊಂಡಲ್ಲಿ ಮಾತ್ರ ವಿಶ್ವವಿದ್ಯಾನಿಲದ ಕಲ್ಪನೆ ಸಹಕಾರಗೊಳಿಸಲು ಸಾಧ್ಯ ಎಂದರು. ಕೆಲವರಿಗೆ ನಾನು ಕುಲಪತಿ ಸ್ಥಾನಕ್ಕಾಗಿ  ಇಷ್ಟೆಲ್ಲಾ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂಬ ಕಲ್ಪನೆ ಇತ್ತು. ಆದರೆ, ಎಂದೂ ನನಗೆ ಆ ಸ್ಥಾನದ ಯೋಚನೆಯೇ ಇರಲಿಲ್ಲ. ಇಂದು ನಾನೇನಾದರೂ ಸಾಧಿಧಿಸಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ನನ್ನ ಸಹೊದ್ಯೋಗಿಗಳು. 

ನನ್ನನ್ನು ಪರಿಪಕ್ವಗೊಳಿಸಲು ಅವರು ಅನೇಕ ರೀತಿಯಲ್ಲಿ ಸಹಕಾರಿಯಾಗಿದ್ದಾರೆ ಸ್ಮರಿಸಿದರು. ಪರೀûಾಂಗ ಕುಲಸಚಿವ ಟಿ.ಬಿ ವೆಂಕಟೇಶ್‌ ಮಾತನಾಡಿ, ಬಕ್ಕಪ್ಪನವರು ದಾವಣಗೆರೆಯಲ್ಲಿಯೇ ಹುಟ್ಟಿ, ವಿದ್ಯಾಭ್ಯಾಸ  ಮುಗಿಸಿ, ಇಲ್ಲಿಯೇ ವೃತ್ತಿ ನಿರ್ವಹಿಸಿ ನಿವೃತ್ತರಾಗುತ್ತಿರುವುದು ವಿಶೇಷ ಎಂದು ಬಣ್ಣಿಸಿದರು. ವಿವಿ ಪ್ರಾಧ್ಯಾಪಕರಾದ ಪ್ರೊ| ಶಿಶುಪಾಲ. ಪ್ರೊ| ರಾಮಲಿಂಗಪ್ಪ, ಪ್ರೊ| ಜಿ.ಟಿ ಗೊವಿಂದಪ್ಪ. ಪ್ರೊ| ರಂಗಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ರಾಜಕುಮಾರ್‌ ಇತರರು ಬಕ್ಕಪ್ಪನವರ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.  

ಟಾಪ್ ನ್ಯೂಸ್

Rain

Rain: ದ.ಕ.ಜಿಲ್ಲೆಯ ಹಲವೆಡೆ ಮಳೆ; ಸೆ.24ಕ್ಕೆ ಕರಾವಳಿಗೆ ರೆಡ್‌ ಅಲರ್ಟ್‌

1-ravi

Secularism ಯುರೋಪಿಯನ್ ಪರಿಕಲ್ಪನೆ, ಭಾರತದಲ್ಲಿ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ

Yadagiri

Yadagiri: ಸಿಡಿಲು ಬಡಿದು‌ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತ್ಯು!

1-udaaa

Israeli ಪಡೆಗಳಿಂದ ಲೆಬನಾನ್ ಮೇಲೆ ಭಾರೀ ದಾಳಿ: 182 ಕ್ಕೂ ಹೆಚ್ಚು ಮೃ*ತ್ಯು

Kannan

ಪ್ರಸ್ತುತ ರಾಜಕೀಯ ನಾಯಕರಿಗೆ ಸಮಾಜ ಕಟ್ಟುವ ಕೈಂಕರ್ಯ ಮರೆತಿದೆ: ಹಿರೇಮಗಳೂರು ಕಣ್ಣನ್ 

1-dssadas

Badlapur ಪೊಲೀಸ್ ರಿವಾಲ್ವರ್ ಕಸಿದು ಗುಂಡು ಹಾರಿಸಿದ ರೇ*ಪ್ ಆರೋಪಿ!!

siddanna-2

MUDA ಹಗರಣ: ಸಿಎಂ ಸಿದ್ದರಾಮಯ್ಯ ಭವಿಷ್ಯ ಹೈಕೋರ್ಟ್ ನಲ್ಲಿ ನಾಳೆ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

8

Virajpete: ಮನೆಯಂಗಳದಲ್ಲಿ ಕಾಡಾನೆ; ಗ್ರಾಮಸ್ಥರಲ್ಲಿ ಆತಂಕ

1-rrrr

Embarrassing; ಹಣ ನೀಡದೆ ಮದ್ಯದ ಬಾಟಲಿ ಸಮೇತ ಪರಾರಿಯಾಗಿ ಬಂಧನಕ್ಕೊಳಗಾದ ಪೊಲೀಸ್!

Rain

Rain: ದ.ಕ.ಜಿಲ್ಲೆಯ ಹಲವೆಡೆ ಮಳೆ; ಸೆ.24ಕ್ಕೆ ಕರಾವಳಿಗೆ ರೆಡ್‌ ಅಲರ್ಟ್‌

1-ravi

Secularism ಯುರೋಪಿಯನ್ ಪರಿಕಲ್ಪನೆ, ಭಾರತದಲ್ಲಿ ಅಗತ್ಯವಿಲ್ಲ: ತಮಿಳುನಾಡು ರಾಜ್ಯಪಾಲ

Untitled-1

Udupi-D.K; ಪ್ರತ್ಯೇಕ ಪ್ರಕರಣ: ನಾಲ್ವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.