ಹಣ ತೊಡಗಿಸಿ ಸಹಕಾರ ಸಂಘ ಅಭಿವೃದ್ಧಿ ಪಡಿಸಿ
Team Udayavani, Sep 24, 2018, 4:40 PM IST
ದಾವಣಗೆರೆ: ವೀರಶೈವ ಲಿಂಗಾಯಿತ ನೌಕರರು ಬಡ್ಡಿ ಆಸೆಗಾಗಿ ಮನೆಯಲ್ಲಿ ಹಣ ಇಟ್ಟುಕೊಳ್ಳುವ ಬದಲು, ಭದ್ರವಾಗಿ ನೂತನ ಸಹಕಾರ ಸಂಘದಲ್ಲಿ ಹೂಡಿಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.
ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆಯಿಂದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ದಾವಣಗೆರೆ ವೀರಶೈವ ಲಿಂಗಾಯಿತ ನೌಕರರ ಪತ್ತಿನ ಸಹಕಾರ ಸಂಘ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಇಲ್ಲವೇ, ಹೊರಗೆ ಬೇರೆಯವರ ಬಳಿ ಹಣವನ್ನು ಬಡ್ಡಿಗಾಗಿ ನೀಡಿದರೆ ಅದು ಪೂರ್ಣ ಭದ್ರ ಅಲ್ಲ. ಹಾಗಾಗಿ ಬಡ್ಡಿ ಆಸೆ ಬಿಟ್ಟು ಸಹಕಾರ ಸಂಘದಲ್ಲಿ ನೌಕರರು ಹಣ ತೊಡಗಿಸುವ ಮೂಲಕ ಸಂಘದ ಏಳ್ಗೆಗಾಗಿ ಶ್ರಮಿಸಿ. ಇದರಿಂದ ಸಮಾಜದ ಜನರಿಗೂ ಸಾಕಷ್ಟು ಅನುಕೂಲ ಆಗುತ್ತ ತಾವೂ ಆರ್ಥಿಕವಾಗಿ ಸಬಲರಾಗಬಹುದು ಎಂದರು.
ವಿದ್ಯಾರ್ಥಿಗಳಿಗೆ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡುತ್ತಾ ಅವರಿಗೆ ಪ್ರೊತ್ಸಾಹ ನೀಡುತ್ತಿರುವುದು ಒಳ್ಳೆಯ ಸಂಪ್ರದಾಯ.
ಅವರು ಉತ್ತಮ ಅಂಕ ಪಡೆದು ಕೀರ್ತಿ ತಂದರೆ ಸಮಾಜಕ್ಕೂ ಗೌರವ ಹೆಚ್ಚುತ್ತದೆ ಎಂದು ಹೇಳಿದರು.
ಈ ಹಿಂದೆ ನಾವು ಓದುವಾಗ ಹಾಸ್ಟೆಲ್ ಸೌಲಭ್ಯವಿರಲಿಲ್ಲ. ಎಲ್ಲೋ ಇದ್ದು ಕಷ್ಟಗಳ ಮಧ್ಯೆ ಓದಿದವರು ನಾವು. ಈಗ ಆ
ರೀತಿ ಸಮಸ್ಯೆಗಳಿಲ್ಲ. ಕೆಲವು ಮಕ್ಕಳಿಗೆ ಓದುವ ಆಸೆ ಇರುತ್ತದೆ. ಆದರೆ, ಅವರಿಗೆ ಪೋಷಕರು ಇರುವುದಿಲ್ಲ, ಇನ್ನೂ ಕೆಲವರಿಗೆ ಬಡತನದ ಸಮಸ್ಯೆ ಇರುತ್ತದೆ. ಆದ್ದರಿಂದ ಸಂಘವು ಅಂತಹ ಬಡ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಪೋಷಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನೌಕರರ ಸಹಕಾರ ಸಂಘವು ಉತ್ತಮ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಕಳಂಕ ಬರದಂತೆ ನಡೆಸಿಕೊಂಡು ಪ್ರಗತಿದಾಯಕವಾಗಿ ಸಾಗಬೇಕು. ಅದಕ್ಕೆ ನೌಕರರು ನಿಸ್ವಾರ್ಥದಿಂದ ಶ್ರಮಿಸಬೇಕು ಎಂದರು.
ಕಾದು ಹೋದ ಸಂಸದರು: ಕಾರ್ಯಕ್ರಮ ತಡವಾದ ಹಿನ್ನೆಲೆಯಲ್ಲಿ ಕಾದು ಕುಳಿತಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಉದ್ಘಾಟನೆಗೂ ಮೊದಲೇ ಮಾತನಾಡಿ, ನಮಗೂ ಬೇರೆ ಬೇರೆ ಕಡೆ ಸಾಕಷ್ಟು ಕಾರ್ಯಕ್ರಮಗಳು ಇರುತ್ತವೆ. ಹೇಳಿಕೇಳಿ ಇದು ಚುನಾವಣೆ ಸಮಯ. ಸರಿಯಾದ ಸಮಯಕ್ಕೆ ಹೋಗದಿದ್ದರೆ ಜನ ಆಕ್ಷೇಪಣೆ ಮಾಡುತ್ತಾರೆ. ಸಂಘದ ಉದ್ಘಾಟನೆಗೆಂದು ನಮ್ಮನ್ನೂ ಕರೆಸಿ, ನಾವು ಬೇಗ ಬಂದರೂ ಕಾಯಿಸುವುದು ಸರಿಯಲ್ಲ, ಅದಕ್ಕೆ ನಾವೇನು ಬೇಜಾರಾಗಿಲ್ಲ. ಆದರೆ ಸಮಯವನ್ನು ನೌಕರರ ಸಂಘದವರು ಅರ್ಥಮಾಡಿಕೊಳ್ಳಿ. ಕಾರ್ಯಕ್ರಮ ಉದ್ಘಾಟನೆಯನ್ನು ಎಸ್. ಎಸ್ ಬಂದ ಮೇಲೆಯೇ ಮಾಡಿಸಿ. ಸಹಕಾರ ಸಂಘವನ್ನು ಉತ್ತರದ ಶಾಸಕರಿಂದ ಉದ್ಘಾಟನೆ ಮಾಡಿಸಿ ಎಂದರು.
ನೌಕರರ ಪತ್ತಿನ ಸಹಕಾರ ಸಂಘವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಇದರಿಂದ ಮುಂದಿನ ವ್ಯಾಸಂಗಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ ಎಂದರಲ್ಲದೇ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಆಗ ವೀರಶೈವ ಲಿಂಗಾಯಿತ ಸಮಾಜಕ್ಕೂ ಕೀರ್ತಿ ಬರುತ್ತದೆ ಎಂದು ಹೇಳಿ ವೇದಿಕೆಯಿಂದ ಗೌರವ ಸ್ವೀಕರಿಸಿ ತುರ್ತಾಗಿ ನಿರ್ಗಮಿಸಿದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಎನ್.ಈ. ನಟರಾಜ ಮಾತನಾಡಿ, ನಮ್ಮ ಸಂಘ 2006ರಲ್ಲಿ ಪ್ರಾರಂಭವಾದಾಗ ಕೇವಲ 6ಜನ ಸದಸ್ಯರಿದ್ದರು. ನಂತರ ಒಂದು ವರ್ಷದಲ್ಲಿಯೇ ಸುಮಾರು 600 ಜನ ಸದಸ್ಯರನ್ನು ಹೊಂದಿತು. ತದ ನಂತರ 1,800 ಜನರ ಸದಸ್ಯತ್ವ ಪಡೆದು ಒಗ್ಗಟ್ಟಿನಿಂದ ಶ್ರಮಿಸುತ್ತಿದೆ. ಸಂಘವು ಈಗಾಗಲೇ 12ಲಕ್ಷ ರೂ. ಷೇರು ಸಂಗ್ರಹ ಮಾಡಿದ್ದು, ಮುಂದೆ 1.20 ಕೋಟಿ ಷೇರು ಸಂಗ್ರಹ ಮಾಡುವ ಗುರಿ ಹೊಂದಿದೆ ಎಂದರು.
ನೌಕರರ ಪತ್ತಿನ ಸಹಕಾರ ಸಂಘದ ಉದ್ಘಾಟನೆಯನ್ನು ಸಂಘದ ರಾಜ್ಯಾಧ್ಯಕ್ಷ ಲಯನ್ ಬಿ. ನಿರಂಜನ್ ನೆರವೇರಿಸಿದರು. 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಕೆ. ಶಿವಶಂಕರ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ| ಕೆ. ಶಿವಪ್ರಸಾದ್, ಎ.ಆರ್. ಉಜ್ಜನಪ್ಪ, ಪ್ರಸನ್ನ, ಕಾರ್ಯಾಧ್ಯಕ್ಷ ಶ್ರೀಧರ್, ಕೆ.ಸಿ. ಕುಮಾರಸ್ವಾಮಿ, ಕೆ.ಎಂ. ಪಾಲಾಕ್ಷಪ್ಪ, ಜಿ. ಹುಚ್ಚಪ್ಪ, ಕಲ್ಪನಾ ರವೀಂದ್ರನಾಥ್, ಬಿ.ಕೆ. ರೇಣುಕಾಮೂರ್ತಿ, ಮುದ್ದೇರ್ ಹನುಮಂತಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಎಸ್ಸೆಸ್‌ಗಾಗಿ ಸಂಜೆ ಪ್ರೋಗ್ರಾಮ್ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಕಾರ್ಯಕ್ರಮ ಉದ್ಘಾಟನೆಗಾಗಿ ದಕ್ಷಿಣ ವಲಯದ ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಅವರು ಬರಲಿ ಅಂಥಾ ಕಾದ್ರಿ. ಆದರೆ ಅವರು ಎಷ್ಟೊತ್ತಿಗೆ ಎದ್ದೇಳುತ್ತಾರೆ ಎನ್ನುವುದು ತಮಗೆಲ್ಲ ಗೊತ್ತಿದೆ. ಹಾಗಾಗಿ ಇನ್ನು ಮುಂದೆ ಸಂಜೆ ವೇಳೆ ನಿಮ್ಮ ಕಾರ್ಯಕ್ರಮ ಇಟ್ಟುಕೊಳ್ಳಿ.
ಎಸ್.ಎ. ರವೀಂದ್ರನಾಥ್, ದಾವಣಗೆರೆ ಉತ್ತರ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.