ಪ್ಲಾಸ್ಟಿಕ್ ತ್ಯಜಿಸಿ-ಪರಿಸರ ಉಳಿಸಿ ಅಭಿಯಾನ
Team Udayavani, Feb 16, 2017, 1:16 PM IST
ದಾವಣಗೆರೆ: ಕರುನಾಡ ಕನ್ನಡ ಸೇನೆ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡ ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಶೀರ್ಷಿಕೆ ಅಭಿಯಾನಕ್ಕೆ ಬುಧವಾರ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು.
ನಗರದ ದುರ್ಗಾಂಬಿಕ ದೇವಸ್ಥಾನದ ಮುಂಭಾಗದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಇಂದು ಪ್ಲಾಸ್ಟಿಕ್ ಒಂದು ದೊಡ್ಡ ಪೆಡಂಭೂತವಾಗಿ ಪರಿಣಮಿಸಿದೆ. ಅದನ್ನು ಬಳಸಿ, ಬಿಸಾಡುವುದರಿಂದ ಮಣ್ಣಲ್ಲಿ ಕೊಳೆಯದೆ, ಕರಗದೆ ಸಾವಿರಾರು ವರ್ಷ ಹಾಗೆಯೇ ಇರುತ್ತದೆ.
ಇದನ್ನು ಹಸು, ಮುಂತಾದ ಪ್ರಾಣಿಗಳು ತಿಂದು ಸಾವೀಗಿಡಾಗುತ್ತವೆ. ಇದರಿಂದ ಸಾರ್ವಜನಿಕರು ಜಾಗೃತರಾಗಬೇಕು. ದಾವಣಗೆರೆ ನಗರವನ್ನು ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿಸಲು ಕೈ ಜೋಡಿಸಬೇಕು ಎಂದರು. ಸೇನೆಯ ರಾಜ್ಯಧ್ಯಕ್ಷ ಕೆ.ಟಿ. ಗೋಪಾಲಗೌಡ ಮಾತನಾಡಿ, ಪ್ಲಾಸ್ಟಿಕ್ ಮನುಕುಲವನ್ನೇ ನಡುಗಿಸುವಷ್ಟು ಮಟ್ಟಕ್ಕೆ ಬೆಳೆದು ನಿಂತಿದೆ.
ಪ್ಲಾಸ್ಟಿಕ್ ನೆಲ ಸೇರಿದರೆ ಎರೆಹುಳುಗಳು ಸಾಯುತ್ತವೆ. ನೆಲದಲ್ಲಿ ಪ್ಲಾಸ್ಟಿಕ್ ಇದ್ದ ಜಾಗದಲ್ಲಿ ಗಿಡ-ಮರಗಳು ಬೆಳೆಯುವುದಿಲ್ಲ. ಅದ್ದರಿಂದ ಇದನ್ನು ಸಂಪೂರ್ಣ ತೊರೆಯಬೇಕು. ನ್ಯಾಯಲಯ, ರಾಜ್ಯ ಸರ್ಕಾರ ಈಗಾಗಲೇ ಪ್ಲಾಸ್ಟಿಕ್ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
ಮುಂದಿನ ದಿನಗಳಲ್ಲಿ ನಮ್ಮ ನಗರ ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸೇನೆಯಿಂದಲೇ ನ್ಯಾಯಾಲದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗುವುದೆಂದು ಎಚ್ಚರಿಸಿದರು. ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ| ಚಂದ್ರಶೇಖರ ಸುಂಕದ್, ನಾವು ಅಂಗಡಿಗಳಲ್ಲಿದ್ದ ಪ್ಲಾಸ್ಟಿಕ್ ದಾಸ್ತಾನು ಜಪ್ತಿ ಮಾಡಿದ್ದೇವೆ. ನೋಟೀಸ್ ಕೊಟ್ಟಿದ್ದೇವೆ. ಇದರ ನಿಷೇಧಕ್ಕೆ ಸಾರ್ವನಿಕರ ಸಹಕಾರ ಅಗತ್ಯ ಎಂದರು.
ಪಾಲಿಕೆ ಸದಸ್ಯ ಪಿ.ಎನ್. ಚಂದ್ರಶೇಖರ್, ಆರೋಗ್ಯ ಅಧಿಧಿಕಾರಿಗಳಾದ ತಿಮ್ಮಪ್ಪ, ಪ್ರಕಾಶ್, ಹೊನ್ನಪ್ಪ, ಎಂ.ಜಿ. ಶ್ರೀಕಾಂತ್, ದೇವರಮನಿ, ಬಿ. ತಿರುಕಪ್ಪ, ಜಿ.ಎಂ. ಮಂಜುನಾಥ ಈ ಸಂದರ್ಭದಲ್ಲಿದ್ದರು. ವಿಜಯಲಕ್ಷ್ಮಿರಸ್ತೆ, ಬೆಳ್ಳೊಡಿ ಗಲ್ಲಿ, ಮಂಡಿಪೇಟೆ, ಗಡಿಯಾರ ಕಂಬ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸಿ, ಅರಿವು ಮೂಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.