ಜಿಲ್ಲಾಸ್ಪತ್ರೆ ಆವರಣ-ಸಮಸ್ಯೆಗಳ ಅನಾವರಣ
Team Udayavani, May 10, 2017, 12:50 PM IST
ದಾವಣಗೆರೆ: ಸ್ವತ್ಛತಾ ಕೆಲಸಕ್ಕೆ ಬಲವಂತವಾಗಿ ಮಲದಗುಂಡಿಗೆ ಇಳಿಸುವುದು… ಕಳೆದ 9 ತಿಂಗಳ ವೇತನ ಬಾಕಿ.. ಭವಿಷ್ಯನಿಧಿಗೆ ಕಡಿತವಾಗುತ್ತಿರುವ ಹಣದ ಬಗ್ಗೆ ಮಾಹಿತಿ ನೀಡದೇ ಇರುವುದು… ಪ್ರತಿ ತಿಂಗಳು ಕಡ್ಡಾಯ ಎಂಬಂತೆ 2-3 ದಿನಗಳ ಗೈರು ಹಾಜರಿ ಹಾಕುವುದು…
ಇವು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುತ್ತಿಗೆ-ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸ್ವತ್ಛತಾ ಕೆಲಸಗಾರರು ಅನುಭವಿಸುತ್ತಿರುವ ಸಮಸ್ಯೆಗಳು. ಮಂಗಳವಾರ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತ್ಛತಾ ಕೆಲಸಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಅನೇಕರು ತಮ್ಮ ಸಮಸ್ಯೆ ಅನಾವರಣಗೊಳಿಸಿದರು.
ಸರೋಜಮ್ಮ ಎಂಬುವರು ಮಾತನಾಡಿ, ತಾವು 18 ವರ್ಷಗಳಿಂದ ಆಸ್ಪತ್ರೆಯಲ್ಲಿ ಸ್ವಚ್ಚತಾ ಕಾರ್ಯ ಮಾಡುತ್ತಿದ್ದು, 2004 ರಲ್ಲಿ ಎರಡು ತಿಂಗಳ ವೇತನವನ್ನೇ ಈವರೆಗೆ ನೀಡಿಲ್ಲ. ಗುತ್ತಿಗೆದಾರ ಬಿ.ಕೆ. ಆರ್ ಸ್ವಾಮಿ ಅವಧಿಯಲ್ಲಿ 5 ವರ್ಷದ ಪಿಎಫ್ ಜಮೆ ಆಗಿಯೇ ಇಲ್ಲ ಎಂದು ತಿಳಿಸಿದರು. ದುಗ್ಗಮ್ಮ ಮಾತನಾಡಿ, ಸ್ವಚ್ಚತಾ ಕಾರ್ಮಿಕರೆಲ್ಲರಿಗೆ 5,218 ರೂಪಾಯಿ ಸಂಬಳ ಕೊಡಲಾಗುತ್ತದೆ.
ಏಜೆನ್ಸಿ ಬದಲಾದಂತೆ ಪಿಎಫ್ ಖಾತೆಯನ್ನೂ ಪದೇ ಪದೇ ಬದಲಾಯಿಸುತ್ತಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಪಿಎಫ್ ಎಷ್ಟು ಕಡಿತವಾಗುತ್ತಿದೆ ಎಂಬ ಮಾಹಿತಿ ನಮಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆಯುಷ್ ಇಲಾಖೆಯಲ್ಲಿ ಮಲ್ಟಿಪರ್ಪಸ್ ವರ್ಕರ್ ಆಗಿ ಕೆಲಸ ಮಾಡುತ್ತಿರುವ ಜಯಸುಧಾ, ತಮಗೆ 9 ತಿಂಗಳಿನಿಂದ ವೇತನ ಆಗಿಲ್ಲ.
ಬಹುತೇಕ ಕಾರ್ಮಿಕರೆಲ್ಲ ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿದ್ದು, ನಿಗದಿತ ಸಮಯಕ್ಕೆ ವೇತನವಾಗದೇ ಕಷ್ಟಕರವಾಗಿದೆ ಎಂದು ಗಮನ ಸೆಳೆದರು. ತಾವು, 10 ವರ್ಷದಿಂದ ಸ್ವಚ್ಚತೆ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು 2-3 ದಿನ ಗೈರು ಹಾಜರಿ ಮಾಡಿ ವೇತನ ಕಟ್ ಮಾಡಲಾಗುತ್ತಿದೆ. ಹ್ಯಾಂಡ್‌ಗೌಸ್, ಮಾಸ್ಕ್ ಕೊಡುವುದಿಲ್ಲ.
ಮಾಸ್ಟರ್ ಚೆಕ್‌ಅಪ್ ಸಹ ಮಾಡಿಸುತ್ತಿಲ್ಲ. ಪರದೆಯಂತಹ ಒಂದು ಸೀರೆಯನ್ನು ಸಮವಸ್ತ್ರವಾಗಿ ನೀಡಿದ್ದಾರೆ. ಪಿಎಫ್ ಬಗ್ಗೆ ಕೇಳಿದರೆ ಗುತ್ತಿಗೆದಾರರು ಸಮರ್ಪಕವಾಗಿ ಉತ್ತರಿಸುವುದಿಲ್ಲ ಎಂಬುದಾಗಿ ರೂಪ ದೂರಿದರು. ಕಮಲಮ್ಮ ಮಾತನಾಡಿ, 14 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಪಿಎಫ್ ಸೌಲಭ್ಯ ಸರಿಯಾಗಿ ಕಲ್ಪಿಸಿಲ್ಲ.
ಬಾಕಿ ವೇತನವನ್ನೂ ನೀಡಿಲ್ಲ. ನಿಗದಿತ ಸಮಯಕ್ಕೆ ವೇತನ ನೀಡುತ್ತಿಲ್ಲ. ರೋಗಿಗಳನ್ನು ಸ್ವಚ್ಚಗೊಳಿಸುವ ತಮಗೆ 6 ತಿಂಗಳಿಗೊಮ್ಮೆ ಇಂಜೆಕ್ಷನ್ ನೀಡಬೇಕು. ನಾಲ್ಕು ಜನ ಮಾಡುವ ಕೆಲಸವನ್ನು ಒಬ್ಬರೇ ಮಾಡುವಂತಹ ಸ್ಥಿತಿ ಬಂದೊದಗಿದೆ. ಎಲ್ಲ ವಸ್ತುಗಳ ಬೆಲೆಗಳು ಹೆಚ್ಚಿದ್ದು, ಈ ವೇತನದಲ್ಲಿ ಜೀವನ ಕಷ್ಟವಾಗಿದೆ.
ಇದಕ್ಕೆಲ್ಲಾ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ಅವಳಪ್ಪ, ಸುರೇಶ್ ಇತರರು ತಮ್ಮ ತಮ್ಮ ಸಮಸ್ಯೆ ತಿಳಿಸಿದರು. ಕುಂದುಕೊರತೆ ಆಲಿಸಿದ ಎಂ.ಆರ್. ವೆಂಕಟೇಶ್, ಕಾರ್ಮಿಕ ಇಲಾಖಾ ಅಧಿಕಾರಿಗಳು ಎಷ್ಟು ದಿನಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದೀರಿ, ಯಾವ ದಾಖಲೆ ಪರೀಕ್ಷಿಸಿದ್ದೇರೆಂದು ಪ್ರಶ್ನಿಸಿದರು.
ಕಾರ್ಮಿಕ ಕಾಯ್ದೆ ಶೆಡ್ನೂಲ್ ನಂ 52 ರಡಿ ಟೆಂಡರ್ ನೋಟಿμಕೇಷನ್‌ನಲ್ಲಿ ಎಲ್ಲರನ್ನು ಸ್ವತ್ಛತಾ ಕೆಲಸಗಾರರು ಎಂಬುದಾಗಿ ಹೆಸರಿಸಿ 7,749 ರೂ. ವೇತನ ನೀಡುವ ಕುರಿತು ಸೂಕ್ತ ಕ್ರಮ ಕೈಗೊಂಡು ಬಾಕಿ ವೇತನ ನೀಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆ ಅಲ್ಲದೇ ಇತರೆಡೆ ಕೆಲಸ ಮಾಡುತ್ತಿರುವ ಸ್ವತ್ಛತಾ ಕಾರ್ಮಿಕರ ಕುಂದುಕೊರತೆ, ಜೀವನದ ಸ್ಥಿತಿಗತಿ ಅರಿತು ಸಮರ್ಪಕ ನ್ಯಾಯ ಒದಗಿಸಲು ಆಯೋಗ ಶ್ರಮಿಸುವುದು. ಆಸ್ಪತ್ರೆಗಳು, ಕೆಎಸ್‌ಆರ್‌ಟಿಸಿ, ಕೋರ್ಟ್ ಇತರೆಡೆ ಕೆಲಸ ಮಾಡುತ್ತಿರುವ ಸ್ವತ್ಛತಾ ಕಾರ್ಮಿಕರ ವೇತನ, ಜೀವನದ ಸ್ಥಿತಿಗತಿ, ವೇತನ ವ್ಯತ್ಯಾಸ, ಪಿಎಫ್ ವಂಚನೆ,
ಮಾಸ್ಟರ್ ಚೆಕ್‌ಅಪ್, ರಕ್ಷಣಾ ಪರಿಕರಗಳ ವಿತರಣೆ, ಸರ್ಕಾರದ ಇತರೆ ಸವಲತ್ತುಗಳು ಕಾರ್ಮಿಕರಿಗೆ ತಲುಪುತ್ತಿವೆಯೋ ಇಲ್ಲವೋ ಎಂಬುದರ ಕುರಿತು ಕಾರ್ಮಿಕರೊಂದಿಗೆ ಚರ್ಚಿಸಿ ಸೂಕ್ತ ಮಾರ್ಗೋಪಾಯ ಹುಡುಕಲು ಆಯೋಗದ ವತಿಯಿಂದ ರಾಜ್ಯಾದ್ಯಂತ ಸಂಚರಿಸಲಾಗುತ್ತಿದೆ. ಪೌರ ಕಾರ್ಮಿಕರನ್ನು ಹೊರತುಪಡಿಸಿದರೆ ಕಾರ್ಮಿಕರಿಗೆ ವೇತನದಲ್ಲಿ ವಂಚನೆಯಾಗುತ್ತಿರುವುದನ್ನು ರಾಜ್ಯಾದ್ಯಂತ ಕಾಣಬಹುದಾಗಿದೆ ಎಂದರು.
ಆರೋಗ್ಯ ಮತ್ತು ಕಾರ್ಮಿಕ ಇಲಾಖೆ ಆಯುಕ್ತರೊಂದಿಗೆ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ ಮತ್ತು ವೇತನದ ಕುರಿತು ಚರ್ಚಿಸಿದರ ಫಲವಾಗಿ ವೇತನ ಪರಿಷ್ಕರಣೆಯಾಗಿದ್ದು, ಸ್ವತ್ಛತಾ ಕಾರ್ಮಿಕರಿಗೆ ತಿಂಗಳಿಗೆ 15,315 ರೂಪಾಯಿ ವೇತನ ನಿಗದಿಯಾಗಿದೆ. ಎಲ್ಲ ಸ್ವತ್ಛತಾ ಕಾರ್ಮಿಕರಿಗೆ ಆದಷ್ಟು ಬೇಗ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ಹೊಸ ಸೇರ್ಪಡೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.