ಪಿಯು ಫಲಿತಾಂಶದಲ್ಲಿ ಜಿಲ್ಲೆ ನಂ.19
Team Udayavani, May 12, 2017, 12:53 PM IST
ದಾವಣಗೆರೆ: ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಶೇ. 55.17ರಷ್ಟು ಫಲಿತಾಂಶ ಲಭಿಸಿದೆ. ಗುರುವಾರ ಲಭ್ಯವಾದ ಪ್ರಾಥಮಿಕ ಮಾಹಿತಿ ಪ್ರಕಾರ ದಾವಣಗೆರೆ ಜಿಲ್ಲೆ ಶೇ.55.17ರಷ್ಟು ಫಲಿತಾಂಶದೊಂದಿಗೆ 19ನೇ ಸ್ಥಾನ ಗಳಿಸಿದೆ. ಕಳೆದ ವರ್ಷ ಶೇ. 58.01ರಷ್ಟು ಫಲಿತಾಂಶದೊಂದಿಗೆ 21ನೇ ಸ್ಥಾನದಲ್ಲಿತ್ತು.
ಈ ಬಾರಿ 18,810 ಹೊಸದಾಗಿ, 3,943 ಪುನರಾವರ್ತಿತ ಹಾಗೂ 448 ಖಾಸಗಿ ಅಭ್ಯರ್ಥಿಗಳು ಒಳಗೊಂಡಂತೆ 23,201 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. 11,313 ಬಾಲಕರು, 11,818 ಬಾಲಕಿಯರು 35 ಪರೀಕ್ಷಾ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದರು. ಕಳೆದ ಸಾಲಿನ(2015-16)ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟಾರೆ 17,892 ವಿದ್ಯಾರ್ಥಿಗಳಲ್ಲಿ 10,380 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ 440 ವಿದ್ಯಾರ್ಥಿಗಳಲ್ಲಿ ಶೇ. 22.5 ರಷ್ಟು ಪ್ರಮಾಣದಲ್ಲಿ ಅಂದರೆ 99 ವಿದ್ಯಾರ್ಥಿಗಳು, ಮರು ಪರೀಕ್ಷೆ ತೆಗೆದುಕೊಂಡ 3,524 ವಿದ್ಯಾರ್ಥಿಗಳಲ್ಲಿ 948 ವಿದ್ಯಾರ್ಥಿಗಳು (ಶೇ. 26.9) ಉತ್ತೀರ್ಣರಾಗಿದ್ದರು.
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 6,401 ವಿದ್ಯಾರ್ಥಿಗಳಲ್ಲಿ 2,665(ಶೇ. 41.63), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 4,496 ವಿದ್ಯಾರ್ಥಿಗಳಲ್ಲಿ 2,713(ಶೇ. 60.34), ವಿಜ್ಞಾನ ವಿಭಾಗದಲ್ಲಿ 6,995 ವಿದ್ಯಾರ್ಥಿಗಳಲ್ಲಿ 5,002(ಶೇ.71.51) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು.
ಪರೀಕ್ಷೆಗೆ ಹಾಜರಾಗಿದ್ದ 10,993 ಬಾಲಕರಲ್ಲಿ ಶೇ.47.21ರ ಪ್ರಮಾಣದಲ್ಲಿ 5,177 ಹಾಗೂ 10,883 ಬಾಲಕಿಯರಲ್ಲಿ ಶೇ.57.53ರ ಪ್ರಮಾಣದಲ್ಲಿ 6,250 ಬಾಲಕಿಯರು ಉತ್ತೀರ್ಣರಾಗಿದ್ದರು. ನಗರ ಪ್ರದೇಶ ಕಾಲೇಜುಗಳಿಗೆ ಶೇ.59.36, ಗ್ರಾಮೀಣ ಕಾಲೇಜುಗಳಲ್ಲಿ ಶೇ.52.97ರಷ್ಟು ಫಲಿತಾಂಶ ಬಂದಿತ್ತು.
ಈ ಬಾರಿ ಒಟ್ಟಾರೆ ಪರೀಕ್ಷೆಗೆ ಹಾಜರಾಗಿದ್ದ 18,535 ವಿದ್ಯಾರ್ಥಿಗಳಲ್ಲಿ 10,225 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 5,981 ವಿದ್ಯಾರ್ಥಿಗಳಲ್ಲಿ 2,401 (ಶೇ.40.14) ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 4,784 ವಿದ್ಯಾರ್ಥಿಗಳಲ್ಲಿ ಶೇ.55.31ರಷ್ಟು ಫಲಿತಾಂಶದೊಂದಿಗೆ 2,646 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 7,770 ವಿದ್ಯಾರ್ಥಿಗಳಲ್ಲಿ ಶೇ. 66.64 ರಷ್ಟು ಫಲಿತಾಂಶದೊಂದಿಗೆ 5,178 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ 12,143 ಬಾಲಕರಲ್ಲಿ 4,745 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 11,783 ಬಾಲಕಿಯರಲ್ಲಿ 6,467 ಬಾಲಕಿಯರು ಉತ್ತೀರ್ಣರಾಗುವ ಮೂಲಕ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.
ನಗರ ಪ್ರದೇಶದಲ್ಲಿ ಶೇ. 56.46 ಹಾಗೂ ಗ್ರಾಮೀಣ ಭಾಗದಲ್ಲಿ ಶೇ. 50.09 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಹರಪನಹಳ್ಳಿಯ ಎಸ್. ಯು.ಜೆ.ಎಂ ಕಾಲೇಜಿನ ಶೃತಿ ವಾಲೇಕಾರ್ 579 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಅದೇ ಕಾಲೇಜಿನ ಮಂಗಳ 576 ಅಂಕ ಪಡೆದಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಕನ್ನಿಹಳ್ಳಿ ಗ್ರಾಮದವರು. ಕಳೆದ ಬಾರಿಯಂತೆಯೇ ಈ ಬಾರಿಯೂ ಕಲಾ ವಿಭಾಗದಲ್ಲಿ ಹರಪನಹಳ್ಳಿ ತಾಲೂಕು ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಥಣಿ ಪಪೂ ಕಾಲೇಜಿನ ಐಶ್ವರ್ಯ ಶಾನಭೋಗ 584 (ಶೇ.97.33) ಅಂಕ ಪಡೆದಿದ್ದಾಳೆ.
ವಾಣಿಜ್ಯ ಹಾಗೂ ಸಂಖ್ಯಾಶಾಸ್ತ್ರದಲ್ಲಿ ತಲಾ ನೂರು, ಲೆಕ್ಕಶಾಸ್ತ್ರದಲ್ಲಿ 99, ಅರ್ಥಶಾಸ್ತ್ರದಲ್ಲಿ 98, ಹಿಂದಿಯಲ್ಲಿ 97 ಹಾಗೂ ಇಂಗ್ಲಿಷ್ ವಿಷಯದಲ್ಲಿ 90 ಅಂಕ ಪಡೆದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಶ್ರೀ ಸಿದ್ದಗಂಗಾ ವಿಜ್ಞಾನ ಪಿಯು ಕಾಲೇಜಿನ ಪಿ.ಎಚ್. ಬಸವರಾಜ್ 589 ಅಂಕ (ಶೇ. 98.16) ಗಳಿಸಿದ್ದಾರೆ.
ಕನ್ನಡ, ಜೀವಶಾಸ್ತ್ರದಲ್ಲಿ ತಲಾ 99, ಆಂಗ್ಲ ಭಾಷೆಯಲ್ಲಿ 91, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತದಲ್ಲಿ ತಲಾ 100 ಅಂಕ ಪಡೆದಿದ್ದಾರೆ. ಮೂಲತಃ ದಾವಣಗೆರೆ ತಾಲೂಕಿನ ಐಗೂರು ಗ್ರಾಮದವರು. ಡಾ| ತಿಮ್ಮಾರೆಡ್ಡಿ ಫೌಂಡೇಶನ್ ಬಾಲಕರ ಪಿಯು ಕಾಲೇಜಿನ ಎಚ್. ಆರ್. ಸಂಜಯ್ 581 (ಶೇ.96.83) ಅಂಕ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.