ಜಿಲ್ಲೆಯಾದ್ಯಂತ ಬೆಳಕಿನ ಹಬ್ಬದ ಸಂಭ್ರಮ
Team Udayavani, Nov 5, 2021, 12:39 PM IST
ದಾವಣಗೆರೆ: ಜಿಲ್ಲೆಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಹಬ್ಬದಸಂಭ್ರಮ ಮನೆ ಮಾಡಿದ್ದು, ಗುರುವಾರ ಹಬ್ಬದಾರಣೆಯ ಸಡಗರಎಲ್ಲೆಡೆ ಕಂಡು ಬಂತು. ಕೊರೊನಾ ಮೂರನೇ ಅಲೆ ಬಗ್ಗೆ ಆತಂಕಪಡದೆ ಜನರು ಹಬ್ಬದ ಖರೀದಿ, ಸಿದ್ಧತೆಯಲ್ಲಿ ತೊಡಗಿರುವುದು ವಿಶೇಷವಾಗಿತ್ತು.
ದೀಪಾವಳಿ ಅಮವಾಸ್ಯೆ ದಿನವಾದ ಗುರುವಾರ ಅಂಗಡಿ,ವ್ಯಾಪಾರದ ಸ್ಥಳ, ವಾಹನಗಳಿಗೆ ವಿಶೇಷ ಅಲಂಕಾರ ಮಾಡಿ ಲಕ್ಷ್ಮೀಪೂಜೆ ಮಾಡಲಾಯಿತು. ಶುಕ್ರವಾರ ನಡೆಯುವ ಬಲಿಪಾಡ್ಯಆಚರಣೆಗಾಗಿ ಮಾರುಕಟ್ಟೆಯಲ್ಲಿ ಹಣ್ಣು-ಹೂವು ಖರೀದಿಜೋರಾಗಿತ್ತು. ದಿನಸಿ ಸೇರಿದಂತೆ ಉಳಿದೆಲ್ಲ ವಸ್ತುಗಳ ಬೆಲೆ ಏರಿದ್ದರಿಂದಜನಸಾಮಾನ್ಯರ ಜೇಬಿಗೂ ಬಿಸಿ ತಟ್ಟಿತು. ಆದರೆ ಪೂಜೆಗೆ ಬೇಕಾದಹಣ್ಣು ಹಾಗೂ ಹೂವಿನ ದರ ತುಸು ಕಡಿಮೆಯಾಗಿದ್ದು ಜನರಲ್ಲಿಸಮಾಧಾನ ಮೂಡಿಸಿತು.
ದೀಪಾವಳಿ ಹಬ್ಬಕ್ಕೆ ಬೇಕಾದ ಕಾಚಿಕಡ್ಡಿ,ಮಾವಿನ ಸೊಪ್ಪು, ಬಾಳೆಕಂಬ, ಹೂವು ಮತ್ತಿತರೆ ವಸ್ತುಗಳ ಮಾರಾಟಗುರುವಾರ ತಡರಾತ್ರಿವರೆಗೂ ನಡೆಯಿತು. ಮಂಡಿಪೇಟೆ, ಚಾಮರಾಜವೃತ್ತ, ಹೆ„ಸ್ಕೂಲ್ ಮೈದಾನ, ಪಿ.ಬಿ. ರಸ್ತೆ, ನಿಟುವಳ್ಳಿ ದುರ್ಗಾಂಬಿಕಾದೇವಿ ದೇವಸ್ಥಾನ ಬಳಿ, ಹೊಂಡದ ವೃತ್ತ, ಜಿಲ್ಲಾ ಕ್ರೀಡಾಂಗಣದ ಬಳಿಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು.
ಅದೇ ರೀತಿ ದೀಪಾವಳಿ ಹಬ್ಬದ ವಿಶೇಷ ಎನ್ನಿಸಿದ ಹಣತೆ,ವೈವಿಧ್ಯಮಯ ಆಕಾಶಬುಟ್ಟಿಗಳ ಮಾರಾಟ ಕೂಡ ಜೋರಾಗಿತ್ತು.ಬಟ್ಟೆ ಅಂಗಡಿಗಳಲ್ಲಿಯೂ ವ್ಯಾಪಾರ ಉತ್ತಮವಾಗಿತ್ತು. ಒಟ್ಟಾರೆಜಿಲ್ಲೆಯಾದ್ಯಂತ ದೀಪಾವಳಿಯನ್ನು ಜನರು ಶ್ರದ್ಧಾ-ಭಕ್ತಿಯಿಂದಹಾಗೂ ಸಡಗರ- ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.