ಭಕ್ತಿ-ಗೌರವ ಭಾವನೆಗೆ ಭಯ ಮೂಲವಾಗದಿರಲಿ


Team Udayavani, Jun 3, 2017, 1:31 PM IST

dvg4.jpg

ದಾವಣಗೆರೆ: ಗುರು, ಹಿರಿಯರ ಬಗ್ಗೆ ಗೌರವ ಬೆಳೆಸಲು ಭಯ ಮೂಲವಾಗಿಟ್ಟುಕೊಂಡರೆ ಅಂತಹ ಗೌರವ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಶುಕ್ರವಾರ ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ ಉದ್ಘಾಟಿಸಿ, ಮಾತನಾಡಿದರು.

ನಾವು ಸದಾ ಗುರು, ಹಿರಿಯರ ಬಗ್ಗೆ ಗೌರವ ಬೆಳೆಸಲು ಅವರಲ್ಲಿ ಭಯ, ಭಕ್ತಿ ಇರಬೇಕು ಎಂದು ಮಕ್ಕಳಲ್ಲಿ ಹೇಳುತ್ತಿದ್ದೇವೆ. ಇದರಿಂದ ಬೆಳೆಯುತ್ತಿರುವ ಗೌರವ, ಭಕ್ತಿ ಶಾಶ್ವತವಾಗಿ ಉಳಿಯುತ್ತಿಲ್ಲ ಎಂದರು. ಇಂದು ವಯಸ್ಸಾದವರ ಬಗ್ಗೆ ಕಿರಿಯರಲ್ಲಿ ಅಗೌರವ ಬೆಳೆಯುತ್ತಿದೆ. ಇದರಬದಲಿಗೆ ಹಿರಿಯರ ಬಗ್ಗೆ ಶ್ರದ್ಧೆ, ಪ್ರೀತಿ, ಕೃತಜ್ಞತೆ ಬೆಳೆಸಿಕೊಳ್ಳಲು ಸಣ್ಣ ವಯಸ್ಸಿನಿಂದ ತಿಳಿಹೇಳಬೇಕು.

ಆಗ ಮಾತ್ರ ಮಕ್ಕಳು ತಂದೆ, ತಾಯಿ ಕುರಿತು ಕೃತಜ್ಞತೆ, ಪ್ರೀತಿ ಬೆಳೆಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಯಾವುದೇ ಕೌಟುಂಬಿಕೆ ವ್ಯವಸ್ಥೆಯಲ್ಲಿ ಸಂಬಂಧಗಳ ಮಧ್ಯ ವ್ಯವಹಾರ ಇದ್ದರೆ, ಆ ಸಂಬಂಧ ಬಹು ದಿನಗಳ ಕಾಲ ಉಳಿಯುವುದಿಲ್ಲ. ಕುಟುಂಬದಲ್ಲಿ ಪ್ರೀತಿ, ಮಮತೆ, ವಾತ್ಸಲ್ಯ ಇರಬೇಕು. ಆಗ ಮಾತ್ರ ಕೌಟುಂಬಿಕ ಸಂಬಂಧ ಗಟ್ಟಿಗೊಳ್ಳುತ್ತವೆ. 

ಯಾವುದೇ ಸಂಬಂಧವನ್ನು ಬಲವಂತವಾಗಿ ಬಹು ದಿನಗಳ ಕಾಲ ಉಳಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದನ್ನು ನಾವು ಮಕ್ಕಳ ಹಂತದಲ್ಲಿಯೇ ಕಲಿಸಬೇಕು ಎಂದು ತಿಳಿಸಿದರು. ಸಂಧ್ಯಾಕಾಲದಲ್ಲಿರುವ ನಿವೃತ್ತ ನೌಕರರು ಅತ್ಯಂತ ಕ್ರಿಯಾಶೀಲರಾಗಿ ಸಂಘ ಕಟ್ಟಿಕೊಂಡಿದ್ದಾರೆ. ಇದೀಗ ಮನೋರಂಜನ ಕೇಂದ್ರ ಆರಂಭಿಸುತ್ತಿರುವುದು ಉತ್ತಮ ಬೆಳವಣಿಗೆ.

ಕೇಂದ್ರದಲ್ಲಿ ಆಟಗಳನ್ನು ಮಾತ್ರ ಆಡಿ. ಜೂಜು ಆಡುವ ಮಟ್ಟಕ್ಕೆ ಹೋಗಬೇಡಿ. ಹಾಗೇನಾದರೂ ಮಾಡಿದರೆ ನಿಮಗೆ ಬರುವ ಅಲ್ಪ ಪಿಂಚಣಿಯನ್ನೂ ಕಳೆದುಕೊಂಡು ಮಕ್ಕಳಿಂದ ತೆಗಳಿಕೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು. ನಿವೃತ್ತಿಗೂ ಮುನ್ನ ಮಕ್ಕಳು, ಹೆಂಡತಿಯ ಜೊತೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಿರುವುದಿಲ್ಲ. ನಿವೃತ್ತಿ ನಂತರ ಹೆಚ್ಚಿನ ಕಾಲ ಕಳೆಯುವ ಉದ್ದೇಶ ನೀವು ಹೊಂದಿರುತೀ¤ರ.

ಆದರೆ, ನಿಮ್ಮ ನಿವೃತ್ತಿ ವೇಳೆಗೆ ಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ಮೊಮ್ಮಕ್ಕಳು ಶಾಲೆಗೆ ಹೋಗುತ್ತಾರೆ. ಹಾಗಾಗಿ ನೀವು ಮತ್ತೆ ಒಂಟಿಯಾಗಿ ಕಾಲ ಕಳೆಯುವ ಸ್ಥಿತಿ ಬರುತ್ತದೆ. ಇದನ್ನು ನಿಭಾಯಿಸಲು ಹಳೆ ನೆನಪುಗಳ ಮೆಲುಕು ಹಾಕಲು ಮನೋರಂಜನಾ ಕೇಂದ್ರ ಬೇಕು. ಬದುಕಿಗೆ ಸ್ಫೂರ್ತಿ ತುಂಬಲು ಹಳೆಯ ನೆನಪು ಮೆಲುಕುಹಾಕುವುದು, ಗೆಳೆಯರ ಜೊತೆ ಕಾಲ ಕಳೆಯುವುದು ಅನಿವಾರ್ಯ, ಅತೀ ಅವಶ್ಯಕ ಎಂದು ತಿಳಿಸಿದರು. 

ಸಂಘದ ಜಿಲ್ಲಾಧ್ಯಕ್ಷ ಎಸ್‌. ಗುರುಮೂರ್ತಿ ಮಾತನಾಡಿ, ಸಂಘದಿಂದ ಇನ್ನೊಂದು ದೊಡ್ಡ ಸಮುದಾಯ ಭವನ, ವೃದ್ಧಾಶ್ರಮ ನಿರ್ಮಾಣ ಮಾಡಬೇಕಿದೆ. ಹಾಲಿ ಇರುವ ಭನವದ ಮೇಲ್ಚಾವಣಿಗೆ ಸೋಲಾರ್‌ ಅಳವಡಿಸುವ ಉದ್ದೇಶ ಇದೆ. ಇದಕ್ಕೆ ಬೇಕಾದ ಅಗತ್ಯ ನಿವೇಶನ, ಹಣಕಾಸು ಒದಗಿಸಿಕೊಡಲು ದಾನಿಗಳು ಮುಂದೆ ಬರಬೇಕು ಎಂದು ಮನವಿಮಾಡಿದ ಅವರು, ದಾವಣಗೆರೆ ನಗರದಲ್ಲಿ 2 ವೈದ್ಯಕೀಯ ಕಾಲೇಜು ಇವೆ. 

ಬಾಪೂಜಿ ವಿದ್ಯಾಸಂಸ್ಥೆಯ ಆಸ್ಪತ್ರೆಗಳಲ್ಲಿ ಹಿರಿಯರು ಚಿಕಿತ್ಸೆ ಪಡೆದರೆ ಶೇ.50ರಷ್ಟು ರಿಯಾಯಿತಿ ಕೊಡಿಸುವುದಾಗಿ ಶಾಮನೂರು ಶಿವಶಂಕರಪ್ಪ ಹೇಳಿದ್ದರು. ಅದನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಸ್ವಾಮೀಜಿಗಳು ಶಾಸಕರ ಮೇಲೆ ಒತ್ತಡ ಹೇರಬೇಕು ಎಂದು ಕೋರಿದರು. 

ಸಂಘದ ರಾಜ್ಯ ಅಧ್ಯಕ್ಷ ಡಿ.ಎನ್‌. ಸಂಪತ್‌, ಜಂಟಿ ಕಾರ್ಯದರ್ಶಿ ಎನ್‌.ಜಿ. ಬಸವರಾಜು, ನಿರ್ದೇಶಕರಾದ ಕೆ.ಎಂ. ಜಯದೇವಯ್ಯ, ಬಿ.ಆರ್‌. ಶಂಕ್ರಪ್ಪ, ಎಂ.ಎನ್‌. ಪಂಚಾಕ್ಷರಯ್ಯ, ಕೆ.ಯು. ಸುರೇಂದ್ರಪ್ಪ, ಬಿ.ಆರ್‌. ಶಂಕರಪ್ಪ  ಇತರರು ವೇದಿಕೆಯಲ್ಲಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರನ್ನು, ಸಂಘಕ್ಕೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.  

ಟಾಪ್ ನ್ಯೂಸ್

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Madras High Court stays awarding of M.S. Subbulakshmi Award to Krishna

Chennai: ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್‌ ಹೈಕೋರ್ಟ್‌ ತಡೆ

Savarkar defamation case:: Rahul ordered to appear in person on December 2

Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

5

Sullia: ಆಡುಮರಿಯನ್ನು ಅಮಾನುಷವಾಗಿ ಎಳೆದೊಯ್ದ ಬಗ್ಗೆ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.