ವೈದ್ಯರ ನಿರ್ಲಕ್ಷ್ಯ: ಶವಗಳೇ ಅದಲು ಬದಲು!
Team Udayavani, Nov 24, 2017, 9:46 AM IST
ದಾವಣಗೆರೆ: ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದ ಕಾರಣದಿಂದ ಮರಣೋತ್ತರ ಪರೀಕ್ಷೆಗೆ ನೀಡಿದ್ದ ಶವಗಳೇ ಅದಲು ಬದಲಾದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ತಾಲೂಕಿನ ದೊಡ್ಡ ಬೂದಿಹಾಳು ಗ್ರಾಮದ ಕೆಂಚಮ್ಮ (60)ನ ಶವವನ್ನು ಆಕೆಯ ಸಂಬಂಧಿಕರಿಗೆ ನೀಡುವ ಬದಲು ಹರಿಹರ ತಾಲೂಕು ಮಲೇಬೆನ್ನೂರು ಗ್ರಾಮದ ಶಿಲ್ಪಾ ಎಂಬುವರ ಕಡೆಯವರಿಗೆ ನೀಡಲಾಗಿದೆ. ಮೃತ ಶಿಲ್ಪಾ ಸಂಬಂಧಿಗಳು ಕೆಂಚಮ್ಮನ ಶವ ತೆಗೆದುಕೊಂಡು ಹೋಗಿ ಶವದ ಮುಖ ಸಹ ನೋಡದೆ ಸಂಸ್ಕಾರ ಮಾಡಿದ್ದಾರೆ.
ವಿವರ: ವಾರದ ಹಿಂದೆ ಕೆಂಚಮ್ಮ ಹೊಲದಲ್ಲಿ ಟೊಮ್ಯಾಟೊ ಬೆಳೆಗೆ ಔಷಧ ಸಿಂಪಡಿಸುವ ವೇಳೆ ತಲೆ ಸುತ್ತಿ ಮೂಛೆì ಹೋಗಿದ್ದರು. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳಗ್ಗೆ ನಿಧನರಾಗಿದ್ದರು. ಮಧ್ಯಾಹ್ನದ ವೇಳೆಗೆ ಆಕೆಯ ಶವವನ್ನು ಶವಾಗಾರಕ್ಕೆ ಸಾಗಿಸಲಾಗಿತ್ತು. ಶವಾಗಾರದ ವೈದ್ಯರು ಕೆಲಸದ ಒತ್ತಡ ಇರುವುದರಿಂದ ರಾತ್ರಿ ಮರಣೋತ್ತರ ಪರೀಕ್ಷೆ ಮಾಡಿ ಕೊಡಲಾಗುವುದು ಎಂದು ಹೇಳಿದ್ದರು. ಇದನ್ನು ನಂಬಿದ್ದ ಕೆಂಚಮ್ಮನ ಕಡೆಯವರು ರಾತ್ರಿ ಹೋಗಿದ್ದಾರೆ. ಕೊನೆಗೆ ವೈದ್ಯರು ರಾತ್ರಿ
ಸಹ ಆಗೋಲ್ಲ. ಬೆಳಗ್ಗೆ ಬನ್ನಿ ಎಂದಿದ್ದಾರೆ. ಅದರಂತೆ ಗುರುವಾರ ಬೆಳಗ್ಗೆ ಬಂದಾಗ ಕೆಂಚಮ್ಮನ ಶವದ ಬದಲು ಇನ್ನೊಂದು ಶವ ನೀಡಲು ಮುಂದಾಗಿದ್ದಾರೆ.
ಆಗ ಕೆಂಚಮ್ಮನ ಮಕ್ಕಳು ಇದು ನಮ್ಮ ತಾಯಿ ಶವ ಅಲ್ಲ. ಬೇರೆಯದು ಎಂದು ತಿಳಿಸಿದರು. ಆಗಲೇ ವೈದ್ಯರು ಮಾಡಿದ ಯಡವಟ್ಟು ಬಯಲಾಗಿದೆ. ಹರಿಹರ ತಾಲೂಕು ಮಲೇಬೆನ್ನೂರು ಗ್ರಾಮದ 38 ವರ್ಷದ ಶಿಲ್ಪಾ ಎಂಬುವವರ ಕಡೆಯವರಿಗೆ ಕೆಂಚಮ್ಮನ ಶವ ಕೊಟ್ಟು, ಶಿಲ್ಪಾ ಶವವನ್ನು ಶವಾಗಾರದ ಶೀತಲೀಕರಣ ಘಟಕದಲ್ಲಿ ಇರಿಸಿದ್ದರು. ಶಿಲ್ಪಾ ಕಡೆಯವರು ರಾತ್ರಿ 12 ಗಂಟೆ ಸುಮಾರಿಗೆ
ಕೆಂಚಮ್ಮನವರ ಶವ ತೆಗೆದುಕೊಂಡು ಹೋಗಿ ಅದನ್ನೇ ಶಿಲ್ಪಾ ಶವ ಎಂದುಕೊಂಡು ಮುಖ ಸಹ ನೋಡದೆ ಸುಟ್ಟು ಹಾಕಿದ್ದಾರೆ.
ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ ಖಂಡಿಸಿ ಕೆಂಚಮ್ಮನ ಸಂಬಂಧಿಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಶಿಲ್ಪಾ ಕಡೆಯವರನ್ನು ಕರೆಸಿ, ಇಬ್ಬರ ನಡುವೆ ಸಂಧಾನ ನಡೆಸಲು ಪೊಲೀಸರು ಶ್ರಮಿಸಿದರು. ಕೊನೆಗೆ ಕೆಂಚಮ್ಮನವರ ಚಿತಾಭಸ್ಮದ ಸಂಸ್ಕಾರ ಮಾಡಲು ಆಕೆಯ ಮಕ್ಕಳು, ಸಂಬಂಧಿಕರು ಒಪ್ಪಿದ ನಂತರ ಪ್ರತಿಭಟನೆ ಹಿಂಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.