ನೂತನ ವೈದ್ಯಕೀಯ ನೀತಿಗೆ ವೈದ್ಯರ ಆಕ್ರೋಶ
Team Udayavani, Dec 9, 2020, 3:16 PM IST
ಹರಿಹರ: ಅಲೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಯನ್ನು ಮಿಶ್ರಣಗೊಳಿಸಿ ಕೇಂದ್ರ ಸರಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವುದನ್ನು ಖಂಡಿಸಿ ಐಎಂಎ ಸ್ಥಳೀಯ ಶಾಖೆವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಐಎಂಎ ತಾಲೂಕು ಘಟಕದ ಅಧ್ಯಕ್ಷ ಡಾ| ಜಯಪ್ರಕಾಶ್ ಮಾತನಾಡಿ, ಕೇಂದ್ರಸರ್ಕಾರ ವೈಜ್ಞಾನಿಕ ತಳಹದಿಯಲ್ಲಿ ಸಾಕಷ್ಟು ಸಂಶೋಧನೆ, ಅವಿಷ್ಕಾರಗಳಿಂದ ರೂಪಿಸಿರುವ ಆಧುನಿಕ ವೈದ್ಯಕೀಯಪದ್ಧತಿಯನ್ನು ಕಡೆಗಣಿಸಿದೆ. ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮಬೀರುವ ಕುರುಡು ವೈದ್ಯಕೀಯ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನೇ ಅಳವಡಿಸಿ ಹೆಸರಿಗಷ್ಟೇ ಶಲ್ಯ ತಂತ್ರ,ಶಾಲಕ್ಯ ತಂತ್ರ ಹೆಸರಿನ ಸ್ನಾತಕೋತ್ತರಕೋರ್ಸ್ ಆರಂಭಿಸಲಾಗುತ್ತಿದೆ.ಆಧುನಿಕ ಬೆಳವಣಿಗೆಗಳು ಮನುಕುಲದ ಸಾಮಾನ್ಯ ಪರಂಪರೆಯಾದ್ದರಿಂದ ಈ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ಆಯುರ್ವೇದದಲ್ಲಿ ಸೇರಿಸಬಹುದೆಂಬ ಆಯುಷ್ ಸಚಿವಾಲಯದ ಸ್ಪಷ್ಟನೆ ವಿಚಿತ್ರವಾಗಿದೆ ಎಂದು ದೂರಿದರು.
ಡಾ| ಆರ್.ಆರ್. ಖಮೀತ್ಕರ್ ಮಾತನಾಡಿ, ಕೇಂದ್ರದ ನೀತಿಯಿಂದ ದೇಶದ 600 ವೈದ್ಯಕೀಯಕಾಲೇಜುಗಳಿಂದ 2030ರ ವೇಳೆಗೆ ಖೀಚಡಿ ವೈದ್ಯಕೀಯ ಪದ್ಧತಿಯ ಹೈಬ್ರಿಡ್ ವೈದ್ಯರು ಉದ್ಬವಿಸಲಿದ್ದಾರೆ. ಅಲೋಪತಿ ಮತ್ತು ಆಯುರ್ವೇದದ ಕಿಚಡಿ ವೈದ್ಯಕೀಯ ಪದ್ಧತಿಯನ್ನು ವಿವೇಚನೆ ಇರುವವರು ಯಾರೂಒಪ್ಪಲು ಸಾಧ್ಯವಿಲ್ಲ ಎಂದರು.
ಐಎಂಎ ಕಾರ್ಯದರ್ಶಿ ಡಾ|ಗೋಪಿ ಮಾತನಾಡಿ, ಆಯುಷ್ ವೈದ್ಯ ಪದ್ಧತಿಯಲ್ಲಿ ಅರಿವಳಿಕೆ, ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಸೋಂಕುಗಳ ಬಗ್ಗೆ ವಿವರಣೆಯಿಲ್ಲ. ಸೂಕ್ಷ್ಮಜೀವಿ ಸಿದ್ಧಾಂತವನ್ನೇ ಒಪ್ಪದ ಈ ಆರೋಗ್ಯ ಪದ್ಧತಿ ರೋಗಿಗಳನ್ನು ಸೆಪ್ಟಿಕ್ ವಾರ್ಡ್‌ಗಳಿಗೆ ನೂಕಲಿದೆ.ಕೇವಲ ಪರಂಪರೆಯ ವೈಭವೀಕರಣಕ್ಕೆ ಆಯುಷ್ ಸಚಿವಾಲಯ ಅರ್ಥಹೀನ ವಿವರಣೆ ನೀಡುತ್ತಿರುವುದು ಅಪರಾಧಕೃತ್ಯವಾಗಿದೆ. ವಿವಿಧ ಕ್ಷೇತ್ರಗಳತಜ್ಞರು, ಸಾರ್ವಜನಿಕರು ಇದನ್ನು ಖಂಡಿಸಬೇಕಾಗಿದೆ ಎಂದು ತಿಳಿಸಿದರು.
ಡಾ| ಪ್ರವೀಣ್ ಹೆಗಡೆ, ಡಾ| ವಿ.ಟಿ. ನಾಗರಾಜ್, ಡಾ| ಶಾರದಾ ದೇವಿಶ್ರೇಷ್ಠಿ,ಡಾ| ಹರೀಶ್, ಡಾ| ಮೆಹರವಾಡೆ, ಡಾ| ಸುರೇಶ್ ಬಸರಕೋಡ್, ಡಾ| ಚಂದ್ರಿಕಾ ಅನಂತನಾಗ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
Nyamathi: ಎಸ್‌ಬಿಐ ಬ್ಯಾಂಕ್ ನಿಂದ 12.95 ಕೋಟಿ ರೂ ಮೌಲ್ಯದ ಚಿನ್ನ ಕಳ್ಳತನ
Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್: ಮಹಾನಗರ ಪಾಲಿಕೆಯ ಹೊಸ ಕ್ರಮ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.