ಬೇಸಿಗೆ ಆರಂಭದಲ್ಲೇ ನೀರಿಗೆ ಬರ!
Team Udayavani, Mar 3, 2017, 1:31 PM IST
ಹರಪನಹಳ್ಳಿ: ಬೇಸಿಗೆ ಕಾಲಿಡುವ ಆರಂಭದಲ್ಲಿಯೇ ಕುಡಿಯುವ ನೀರಿಗೆ ತತ್ವಾರ ಆರಂಭಗೊಂಡಿದೆ. ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಜನಸಾಮಾನ್ಯರು ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸೈಕಲ್‌ಗಳಲ್ಲಿ ಬಿಂದಿಗಳನ್ನು ಕಟ್ಟಿಕೊಂಡು ಮೈಲುಗಟ್ಟಲೇ ತಿರುಗಿ ಬೋರ್‌ವೆಲ್‌ಗಳಿಂದ ನೀರು ತರುವುದೇ ಜನರ ನಿತ್ಯದ ಕಾಯಕವಾಗಿದೆ.
ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬರ ಬಂದಿರುವುದು ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಇನ್ನು ಕೊರೆದಿರುವ ಕೊಳವೆ ಬಾವಿಗಳಲ್ಲೂ ನೀರಿಲ್ಲ. ದಿನನಿತ್ಯದ ಕೆಲಸಗಳಿಗಷ್ಟೇ ಅಲ್ಲದೇ ಕನಿಷ್ಠ ಪಕ್ಷ ಕುಡಿಯುವುದಕ್ಕೂ ನೀರಿಲ್ಲದ ದುಸ್ಥಿತಿ ಬಂದೊದಗಿದೆ. ಕುಡಿಯುವ ನೀರಿಗೆ ಅಂತರ ಜಲವನ್ನೇ ನಂಬಿರುವ ಗ್ರಾಮೀಣ ಪ್ರದೇಶದಲ್ಲಿ ಅಂತರ ಜಲ ಬತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.
ಈ ಬಾರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಜಲಕ್ಷಾಮ ಎದುರಾಗಿದೆ. ತಾಲೂಕಿನ ಅರಸನಾಳು, ಅರಸೀಕೆರೆ ಬಸಾಪುರ, ನಜೀರ್ ನಗರ, ಗುಂಡಗತ್ತಿ, ನಂದಿಬೇವೂರು ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದೆ.
ತಾಲೂಕಿನ ಮೀನಹಳ್ಳಿ, ವ್ಯಾಸನತಾಂಡಾ, ಉಚ್ಚಂಗಿದುರ್ಗ ಕೋಟೆ ಕ್ಯಾಂಪ್, ಅರಸನಾಳು, ಚಿರಸ್ತಹಳ್ಳಿ, ಕಂಚೀಕೆರೆ, ನಜೀರನಗರ, ಯರಬಳ್ಳಿ, ಗುಂಡಗತ್ತಿ, ಕಂಭ್ರಹಳ್ಳಿ, ಬಳಿಗನೂರು, ನಂದಿಬೇವೂರು, ಕೆಂಗನಹೊಸೂರು, ಭೈರಾಪುರ, ಗುರುಶಾಂತನಹಳ್ಳಿ ಗ್ರಾಮಗಳಲ್ಲಿ ಸರ್ಕಾರ ಖಾಸಗಿ ಬೋರ್‌ವೆಲ್ ಮಾಲೀಕರಿಂದ ಹಣಕ್ಕೆ ನೀರು ಪಡೆದು ಜನರಿಗೆ ನೀಡುತ್ತಿದ್ದಾರೆ.
ಅರಸೀಕೆರೆ ಬಸಾಪುರ ಮತ್ತು ಆಲದಹಳ್ಳಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಜನರಿಗೆ ನೀರು ಒದಗಿಸಲಾಗುತ್ತಿದೆ. ಒಂದು ಟ್ಯಾಂಕರ್ ನೀರಿಗೆ 800 ರೂ. ಹಾಗೂ ಖಾಸಗಿ ಬೋರ್‌ವೆಲ್‌ಗಳಿಗೆ ಮಾಸಿಕ 10ರಿಂದ 18 ಸಾವಿರ ರೂ.ವರೆಗೆ ನಿಗಧಿದಿ ಮಾಡಲಾಗಿದೆ. ಟ್ಯಾಂಕರ್ ಗಳಲ್ಲಿ ನೀರು ಪೂರೈಸಲಾಗುತ್ತಿದೆಯಾದರೂ ಅದಕ್ಕೂ ಯಾವುದಕ್ಕೂ ಸಾಲದಾಗಿದೆ. ಟ್ಯಾಂಕರ್‌ಗಳ ಮುಂದೆ ಬಿಂದಿಗೆಗಳ ಸಾಲು ಸಾಲು ಚಿತ್ರಣ ನೀರಿನ ಬರವನ್ನು ಎತ್ತಿ ತೋರಿಸುವಂತಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದಿಂದ ಕಳೆದ ಏಪ್ರೀಲ್ 1ರಿಂದ ಇಲ್ಲಿಯವರೆಗೆ 211 ಬೋರ್‌ವೆಲ್ ಗಳನ್ನು ಕೊರೆಯಲಾಗಿದೆ. ಇದರಲ್ಲಿ 183 ಬೋರ್‌ವೆಲ್‌ಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಸಿಕ್ಕಿದೆ. ಆದರೆ ಒಂದೆರಡು ವಾರಗಳ ನಂತರ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖ ಕಂಡಿದೆ.
ಸೈಟ್‌ಲೆಟ್ ಮೂಲಕ ನೀರಿನ ಮೂಲಕ ಗುರುತಿಸಿ ಬಳಿಗನೂರು-3, ಉಚ್ಚಂಗಿದುರ್ಗ-4, ಅರಸನಾಳು-2, ಚಿಗಟೇರಿ-2, ಆಲದಹಳ್ಳಿ-2, ಪುಣ್ಯನಗರ-2ರಂತೆ ನೀರಿನ ಕೊರತೆಯಿರುವ ಗ್ರಾಮಗಳಲ್ಲಿ ಎಡರೂ¾ರು ಬೋರವೆಲ್ ಕೊರೆಸಲಾಗಿದೆ. ಒಂದರೆಡರಲ್ಲಿ ಮಾತ್ರ ನೀರು ಸಿಕ್ಕಿದೆ. ಬೋರ್‌ವೆಲ್ ಕೊರೆದರೂ ನೀರು ಸಿಗದಿರುವುದು ಅಧಿಧಿಕಾರಿಗಳಿಗೆ ತಲೆ ನೋವು ತರಿಸಿದೆ.
ಕೂಲಿನಾಲಿ ಮಾಡಿ ಆಯಾ ದಿನದ ಬದುಕು ಸವೆಸುವ ಜನರ ಪಾಡಂತೂ ಹೇಳತೀರದಂತಾಗಿದೆ. ವಿಧಿಧಿಯಿಲ್ಲದೇ ಜನರು ನೀರಿಗಾಗಿ ಹುಡುಕಾಟ ನಡೆಸಿ ಹೈರಾಣಾಗಿದ್ದಾರೆ. ಬೇಸಿಗೆ ಆರಂಭದಲ್ಲಿಯೇ ಈ ಗತಿಯಾದರೆ, ಇನ್ನೂ ಮುಂದಿನ ದಿನಗಳಲ್ಲಿ ಇನ್ನೇನು ಗಂಡಾಂತರ ಕಾದಿದೆಯೋ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.
* ಎಸ್.ಎನ್.ಕುಮಾರ್ ಪುಣಬಗಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.