ಬರಿದಾಯ್ತು ಭದ್ರೆ ಒಡಲು
Team Udayavani, May 1, 2018, 4:18 PM IST
ದಾವಣಗೆರೆ: ಭದ್ರಾ ಜಲಾಶಯದ ಒಡಲು ಇದೀಗ ಬರಿದಾಗಿದೆ. ಅಚ್ಚುಕಟ್ಟು ಭಾಗದ ಜಿಲ್ಲೆಯ ರೈತರು ಆತಂಕಕ್ಕೆ ಈಡಾಗಿದ್ದಾರೆ. ಸತತ 5 ಅವಧಿಗೆ ಏನೂ ಬೆಳೆಯದೆ ಈ ಬಾರಿಯಾದರೂ ಒಂದು ಬೆಳೆ ಕೈಗೆ ಸಿಗಲಿದೆ ಎಂಬ ಭರವಸೆ ಇಟ್ಟುಕೊಂಡವರಿಗೆ ಇದೀಗ ಭದ್ರೆಯ ಒಡಲು ಖಾಲಿಯಾಗಿರುವುದು ಬರಸಿಡಿಲು ಬಡಿದಂತಾಗಿದೆ.
ಜಿಲ್ಲೆಯ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಕಳೆದ ಜನವರಿ 5ರಂದು ನಾಲೆಗೆ ನೀರು ಬಿಡಲಾಯಿತು. 120 ದಿನಗಳ ಕಾಲ ಸತತ ನೀರು ಹರಿಸಲು ವೇಳಾಪಟ್ಟಿ ಸಿದ್ಧಪಡಿಸಿದ ಕಾಡಾ ರೈತರಿಗೆ ಭತ್ತ ಬೆಳೆಯಲು ಪ್ರೋತ್ಸಾಹಿಸಿತು. ಇದನ್ನು ನಂಬಿಕೊಂಡ ರೈತರು ಭತ್ತ ನಾಟಿಗೆ ಮುಂದಾದರು.
ಮೇಲ್ಭಾಗದಲ್ಲಿ ನೀರಿನ ಹರಿವು ಹೆಚ್ಚಾದ್ದರಿಂದ ಕೆಳಭಾಗಕ್ಕೆ ನೀರು ಹರಿಯುವ ಪ್ರಮಾಣ ಇಳಿಕೆಯಾಯಿತು. ಇದೇ ಕಾರಣಕ್ಕೆ ನೀರು ಬಿಟ್ಟ 20 ದಿನದ ನಂತರ ಈ ಭಾಗದಲ್ಲಿ ಭತ್ತ ನಾಟಿ ಆರಂಭ ಆಗಿತ್ತು. ನೀರು ಹರಿದು ಬಂದಂತೆ ರೈತರು ನಾಟಿ ಮಾಡಿದರು. ಜಿಲ್ಲೆಯಲ್ಲಿನ ಅಚ್ಚುಕಟ್ಟು ಪ್ರದೇಶದ ಕೊನೆಭಾಗದ ರೈತರು ನೀರು ಹರಿದ ತಿಂಗಳ ನಂತರ ನಾಟಿ ಮಾಡಿದರು.
ಇದೀಗ ಈ ಎಲ್ಲಾ ಭತ್ತದ ಬೆಳೆ ವಿಫಲ ಆಗುವ ಭೀತಿಯಲ್ಲಿದೆ. ಮೂರು ಹಂತದಲ್ಲಿ ಭತ್ತ ನಾಟಿ ಮಾಡಲಾಗಿದೆ. ರೈತರ ಪೈಕಿ
ಮೊದಲ ಕಂತಲ್ಲಿ ನಾಟಿ ಮಾಡಿದ ಗದ್ದೆಗಳಿಗೆ ಈಗಿನ ಲೆಕ್ಕಾಚಾರದಂತೆ ಕನಿಷ್ಠ ಇನ್ನೂ 20 ದಿನ ನೀರು ಬೇಕು. ಉಳಿದ ಭಾಗಕ್ಕೆ 1 ತಿಂಗಳಾದರೂ ನೀರು ಬೇಕಿದೆ.
ಆದರೆ, ಜಲಾಶಯದ ನೀರಿನ ಮಟ್ಟ ಇದೀಗ 115 ಅಡಿ ಎತ್ತರದ ಆಸುಪಾಸಿನಲ್ಲಿದೆ. ಹಾಗಾಗಿಯೇ ಗೇಟ್ ತೆರೆದಿದ್ದರೂ ಸಹ ನಾಲೆಯಲ್ಲಿ ಹರಿಯುವ ನೀರಿನ ಪ್ರಮಾಣ ಈಗಾಗಲೇ 2-3 ಅಡಿ ಇಳಿಕೆ ಕಂಡಿದೆ. ಅಲ್ಲಿಗೆ ಜಲಾಶಯದ ಮಟ್ಟ ಇದೀಗ ಬಳಕೆ ಮಾಡಲು ಬಾರದ ಮಟ್ಟಕ್ಕೆ ಬಂದು ತಲುಪಿದೆ ಎಂದು ಅಚ್ಚುಕಟ್ಟು ಭಾಗದ ತಜ್ಞ ರೈತರು ಹೇಳುತ್ತಿದ್ದಾರೆ.
ಜಲಾಶಯ ಒಟ್ಟು 32ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 13ಟಿಎಂಸಿ ನೀರು ಬಳಕೆಗೆ ಸಿಗುವುದಿಲ್ಲ. ಉಳಿದ ನೀರನ್ನು ಬಳಸಬಹುದು. ಆದರೆ, ಇಂದಿನ ಜಲಾಶಯದ ಮಟ್ಟ ಗಮನಿಸಿದರೆ 14 ಟಿಎಂಸಿ ಇದೆ. ಅಲ್ಲಿಗೆ ಇನ್ನೊಂದು ಟಿಎಂಸಿಯಲ್ಲಿ ಕೊನೆಭಾಗದವರೆಗೆ ನೀರು ತಲುಪುವುದು ಸಾಧ್ಯವಿಲ್ಲವಾಗಿದೆ ಎಂದು ಕಾಡಾದ ಮಾಜಿ ಸದಸ್ಯರೊಬ್ಬರು ಹೇಳುತ್ತಾರೆ.
ಈ ಎಲ್ಲಾ ಅಂಶ ಗಮನಿಸಿದರೆ ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರು ಇದುವರೆಗೆ ಕಳೆದುಕೊಂಡು 5 ಬೆಳೆಯ ಜೊತೆಗೆ
ಈ ಬೆಳೆ ಸಹ ಕೈಗೆ ಬಂದರೂ ಜೇಬಿಗೆ ಹಣ ತಂದುಕೊಡಲಾಗದ ಬೆಳೆ ಆಗಲಿದೆ ಎನ್ನುವಂತಾಗಿದೆ.
ಕುಡಿಯುವ ನೀರಿಗೂ ಸಮಸ್ಯೆ?
ಸದ್ಯ ಜಲಾಶಯ ಸಂಪೂರ್ಣ ಖಾಲಿ ಆಗುವುದರಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವುದು ಖಚಿತ. ಹಾಲಿ ಈಗಾಗಲೇ ಜಾತ್ರೆ, ಕುಡಿಯಲು ಎಂದು ನದಿಗೆ 6 ಟಿಎಂಸಿ ನೀರು ಹರಿಸಲಾಗಿದೆ. ಅದು ಈಗ ಖಾಲಿ ಸಹ ಆಗಿಹೋಗಿದೆ. ಮುಂದೆ ಕುಡಿಯುವುದಕ್ಕೂ ಜಲಾಶಯದಲ್ಲಿ ನೀರಿಲ್ಲ. ಇದು ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ ಜಿಲ್ಲೆಯ ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗಲು ಕಾರಣವಾಗಲಿದೆ.
ಪಾಟೀಲ ವೀರನಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.