ಕೈಗಾರಿಕಾ ಘಟಕಗಳ ಸಮಸ್ಯೆ ಪರಿಹಾರಕ್ಕೆ ಒತ್ತು
Team Udayavani, Sep 5, 2017, 3:57 PM IST
ದಾವಣಗೆರೆ: ಜಿಲ್ಲೆಯ ಕೈಗಾರಿಕಾ ಘಟಕಗಳ ಮೂಲಭೂತ ಸೌಕರ್ಯಗಳು, ಕೈಗಾರಿಕೋದ್ಯಮಿಗಳ ಕುಂದುಕೊರತೆ, ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿ ಸಿದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರ ಕಾಯೋನ್ಮುಖರಾಗಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚಿಸಿದ್ದಾರೆ.
ಸೋಮವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಏಕ ಗವಾಕ್ಷಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಕೈಗಾರಿಕೆಗಳ ಬೆಳವಣಿಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಉದ್ಯಮ, ಉದ್ಯಮಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದರು. ಕೆಎಸ್‌ಎಸ್‌ಐಡಿ ಜಂಟಿ ನಿರ್ದೇಶಕ ಮಹಾಂತೇಶ್ ಮಾತನಾಡಿ, ರಾಜ್ಯ ಮಟ್ಟದಲ್ಲಿ ನ.23 ಮತ್ತು 24ರಂದು
ವೆಂಡರ್ ಡೆವೆಲಪ್‌ಮೆಂಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಎಎಸ್‌ಎಂಇ, ಸಿಪಿಎಸ್ ಯು, ದೊಡ್ಡ ಉದ್ಯಮದ ಉತ್ಪನ್ನಗಳ ಪ್ರದರ್ಶನ, ಬಂಡವಾಳ ಅವಕಾಶಗಳು, ಮಾರಾಟಗಾರ ಮತ್ತು ಗ್ರಾಹಕರ ಸಭೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಂಎಸ್‌ಎಂಇ, ಸಿಪಿಎಸ್‌ಸಿಗಳು ಪಾಲ್ಗೊಳ್ಳಲು ಅನುವಾಗುವಂತೆ ಪೂರ್ವಭಾವಿಯಾಗಿ ರೋಡ್ ಶೋ ಏರ್ಪಡಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ರೋಡ್ ಶೋಗೂ ಮುನ್ನ ಎಲ್ಲಾ ಮಾರಾಟಗಾರರಿಗೆ, ಸಂಘಗಳಿಗೆ ಈ ಕುರಿತು ಸಂಪೂರ್ಣ ಮಾಹಿತಿ ಒದಗಿಸುವ ಒಂದು ಕಾರ್ಯಾಗಾರ ಏರ್ಪಡಿಸುವಂತೆ ತಿಳಿಸಿದರು.
ಹರಿಹರ ಕೈಗಾರಿಕಾ ವಸಾಹತುವಿನ 2ನೇ ಹಂತದಲ್ಲಿನ ನಿವೇಶನಗಳಿಗೆ ಮಂಡಳಿಯಿಂದ ಒಂದು ಚದುರಡಿಗೆ 30 ರೂ. ನಿಗದಿಪಡಿಸಿದ್ದು, ಇದು ಕೈಗಾರಿಕೋದ್ಯಮಿಗಳಿಗೆ ಹೊರೆ ಆಗುವುದನ್ನು ಪರಿಗಣಿಸಿ ಚದುರಡಿಗೆ 15 ರೂ. ನಿಗದಿಪಡಿಸುವಂತೆ ಕೇಂದ್ರ ಕಚೇರಿಗೆ ಕೋರಲಾಗಿದೆ ಎಂದು ಕೆಐಎಡಿಬಿ ಅಧಿಕಾರಿ ಬಸವರಾಜ್ ಸಭೆಗೆ ತಿಳಿಸಿದರು.
ದಾವಣಗೆರೆ ಲೋಕಿಕೆರೆ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶವನ್ನು ಮಹಾನಗರ ಪಾಲಿಕೆಯವರು ವಹಿಸಿಕೊಳ್ಳಲು ಮಾಡುತ್ತಿರುವ ವಿಳಂಬದಿಂದಾಗಿ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಹಸ್ತಾಂತರ ಮಾಡುವಂತೆ ಸಭೆಯಲ್ಲಿ ಕೋರಿದರು. ಶೀಘ್ರದಲ್ಲೇ ಪಾಲಿಕೆ ಆಯುಕ್ತರೊಂದಿಗೆ ಸಭೆ ನಿಗದಿಗೊಳಿಸಿ ಹಸ್ತಾಂತರ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಪ್ರದೇಶದಲ್ಲಿ ಯುಜಿಡಿ ಮಾಡಿಸುವ ಬಗ್ಗೆ ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲೆಯ 50 ಮತ್ತು ಅದಕ್ಕೂ ಹೆಚ್ಚು ಕಾರ್ಮಿಕರನ್ನು ಒಳಗೊಂಡ ಜಿಲ್ಲೆಯ 15 ಘಟಕಗಳಲ್ಲಿ ಶೇ.
98.87 ಕನ್ನಡಿಗರಿಗೆ ಉದ್ಯೋಗ ಒದಗಿಸಲಾಗಿದೆ. 2017-18 ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಡಿ 158 ಅರ್ಜಿಗಳನ್ನು ಬ್ಯಾಂಕುಗಳಿಗೆ ಕಳುಹಿಸಲಾಗಿದ್ದು, 16 ಮಾತ್ರ ಮಂಜೂರಾತಿ ಪಡೆದಿವೆ 142 ಬಾಕಿ ಇವೆ. 2017-18 ನೇ ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಡಿ 164 ಅರ್ಜಿಗಳನ್ನು ಬ್ಯಾಂಕುಗಳಿಗೆ ಕಳುಹಿಸಲಾಗಿದ್ದು ಅದರಲ್ಲಿ 16 ತಿರಸ್ಕೃತಗೊಂಡಿವೆ ಎಂದು ಮಹಾಂತೇಶ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ವಿವಿಧ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.